September 19, 2024

ಚುನಾವಣಾ ಬಾಂಡ್ ಮಾಹಿತಿಯಿಂದ ದೇಶದ ಜನರ ಮುಂದೆ ಬಿಜೆಪಿ ಬೆತ್ತಲು

0
ಕೆಪಿಸಿಸಿ ವಕ್ತಾರ ಸುಧೀರ್‌ಕುಮಾರ್ ಮುರೋಳಿ ಸುದ್ದಿಗೋಷ್ಠಿ

ಕೆಪಿಸಿಸಿ ವಕ್ತಾರ ಸುಧೀರ್‌ಕುಮಾರ್ ಮುರೋಳಿ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಲಂಚವನ್ನು ಕಾನೂನುಬದ್ದ ಮಾಡಿಕೊಂಡು ಚುನಾವಣಾ ಬಾಂಡ್‌ಗಳ ಮೂಲಕ ಭ್ರ?ಚಾರದಲ್ಲಿ ಮುಳುಗಿದ್ದ ಬಿಜೆಪಿ ಸುಪ್ರೀಂಕೋರ್ಟ್ ಆದೇಶದಿಂದ ದೇಶದ ಜನರ ಮುಂದೆ ಬೆತ್ತಲಾಗಿ ನಿಂತಿದೆ ಎಂದು ವಕೀಲ ಹಾಗೂ ಕೆಪಿಸಿಸಿ ವಕ್ತಾರ ಸುಧೀರ್‌ಕುಮಾರ್ ಮುರೋಳಿ ಅವರು ಲೇವಡಿ ಮಾಡಿದರು.

ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೧೭ರಲ್ಲಿ ಭಾರತದ ಆರ್ಥಿಕ ಕಾಯಿದೆಗೆ ತಿದ್ದುಪಡಿ ಮಾಡಿಕೊಂಡು ಚುನಾವಣಾ ಬಾಂಡ್ ಮೂಲಕ ದೇಣಿಗೆ ಸಂಗ್ರಹಿಸಲು ಕಾನೂನು ಮಾಡಿದಾಗ ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ ಹಾಗೂ ಸಿಪಿಐ ಪಕ್ಷ ವಿರೋಧ ವ್ಯಕ್ತಪಡಿಸಿತ್ತು. ಆದರೆ ಬಿಜೆಪಿ ಈ ವಿರೋಧವನ್ನು ಕಡೆಗಣಿಸಿ ಕಾನೂನು ತಿದ್ದುಪಡಿ ಮಾಡಿಕೊಂಡಿತ್ತು ಎಂದು ಹೇಳಿದರು.

ಈ ಕಾನೂನನ್ನು ಜಾರಿಮಾಡಿಕೊಂಡು ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿ ಹಾಗೂ ಇತರ ರಾಜಕೀಯ ಪಕ್ಷಗಳು ದೇಣಿಗೆ ಸಂಗ್ರಹಿಸುತ್ತಿದ್ದು ಈ ಬಾಂಡ್‌ಗಳ ಮಾಹಿತಿ ನೀಡದಂತೆ ಕೇಂದ್ರಸರ್ಕಾರದ ಅಧೀನ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ಬಾಂಡ್‌ಗಳ ವಿವರ ಗೊತ್ತಾಗದಂತೆ ಷಡ್ಯಂತ್ರ ರೂಪಿಸಿತ್ತು. ಈ ಬಗ್ಗೆ ಸುಪ್ರೀಂಕೋರ್ಟ್‌ಗೆ ದೂರು ಸಲ್ಲಿಸಿದ ಆಧಾರದಲ್ಲಿ ವಿಚಾರಣೆ ನಡೆಸಿದ ಸುಪ್ರೀಂ ನ್ಯಾಯಾಧೀಶರು ಚುನಾವಣಾ ಬಾಂಡ್‌ಗಳ ಮಾಹಿತಿ ಬಹಿರಂಗಪಡಿಸುವಂತೆ ಸೂಚಿಸಿದಾಗ ಜೂನ್ ೩೦ ರವರೆಗೆ ಬಾಂಡ್ ಮುಖಾಂತರ ಕಾಲಾವಕಾಶ ಕೇಳಿ ಜನರು ಈ ವಿ?ಯ ಮರೆಯುವಂತೆ ಬಿಜೆಪಿ ತಂತ್ರ ರೂಪಿಸಿತ್ತೆಂದು ಆರೋಪಿಸಿದರು.

ಎಸ್‌ಬಿಐನ ಕಾಲಾವಕಾಶ ಕೋರಿಕೆಗೆ ಸುಪ್ರೀಂಕೋರ್ಟ್ ನಿರಾಕರಿಸಿದಗ ಚುನಾವಣಾ ಬಾಂಡ್‌ಗಳ ಮಾಹಿತಿಯನ್ನು ಬಹಿರಂಗಪಡಿಸಲಾಗಿ ಸುಮಾರು ೫೨ ಸಾವಿರ ಕೋಟಿ ಮೊತ್ತದ ಬಾಂಡ್‌ಗಳ ಮೂಲಕ ದೇಣಿಗೆ ಸಂಗ್ರಹಿಸಿದ್ದು ಇದರಲ್ಲಿ ಶೇಕಡ ೯೦ರ? ಬಿಜೆಪಿ ಪಕ್ಷವೇ ಬಾಂಡ್‌ಗಳನ್ನು ಸಂಗ್ರಹ ಮಾಡಿರುವ ವಿ?ಯ ಬಹಿರಂಗವಾಗಿದೆ ಎಂದು ತಿಳಿಸಿದರು.

ಈ ಬಾಂಡ್‌ಗಳ ಮೂಲಕ ದೇಣಿಗೆ ಸಂಗ್ರಹಿಸುತ್ತಿರುವ ಬಿಜೆಪಿ ನ?ದಲ್ಲಿರುವ ಸಣ್ಣಪುಟ್ಟ ಕಂಪನಿಗಳಿಂದ ಸಾವಿರಾರು ಕೋಟಿ ರೂ ದೇಣಿಗೆ ಪಡೆದಿದೆ. ಪಾಕಿಸ್ತಾನ ಮೂಲದ ಕಂಪನಿಗಳು ಮತ್ತು ವಿದೇಶಿ ಕಂಪನಿಗಳಿಂದ ದೇಣಿಗೆ ಪಡೆದಿದೆ. ದೇಶದ ಸಾರ್ವಜನಿಕ ಸ್ವತ್ತುಗಳನ್ನು ನೀಡಿರುವ ಕಂಪನಿಗಳಿಂದ ಹಾಗೂ ಕೇಂದ್ರ ಸರ್ಕಾರದ ಸ್ವಾಮ್ಯ ಹೊಂದಿರುವ ಕಂಪನಿಗಳಿಂದ ಗುತ್ತಿಗೆ ಪಡೆದಿರುವ ಕಂಪನಿಗಳಿಂದಲೂ ಸಾವಿರಾರು ಕೋಟಿ ರೂ ದೇಣಿಗೆ ಪಡೆಯುವ ಮೂಲಕ ಲಂಚವನ್ನು ಕಾನೂನುಬದ್ಧ ಮಾಡಿಕೊಂಡು ವಿಶ್ವದಲ್ಲೇ ದೊಡ್ಡ ಭ್ರ?ಚಾರ ನಡೆಸಿರುವುದು ಈಗ ದೇಶದ ಜನರಿಗೆ ಗೊತ್ತಾಗಿದೆ ಎಂದರು.

ಇಂತಹ ಭ್ರ?ಚಾರದ ಬಿಜೆಪಿಯ ಬಣ್ಣವನ್ನು ಜನರ ಮುಂದಿಡುವ ಮೂಲಕ ಕಾಂಗ್ರೆಸ್ ಪಕ್ಷ ೧೦ ಗ್ಯಾರಂಟಿ ಯೋಜನೆಗಳನ್ನು ದೇಶದ ಎಲ್ಲ ಜನರಿಗೆ ಉಪಯೋಗವಾಗುವ ಜೊತೆಗೆ ಆರೋಗ್ಯ, ಶಿಕ್ಷಣ, ದೇಶದ ರಕ್ಷಣೆಗೆ ಯೋಜನೆ ರೂಪಿಸುವ ನ್ಯಾಯಪತ್ರ ಎಂಬ ಹೊಸ ಸಾಂಸ್ಕೃತಿಕ ಪದದ ಘೋ?ಣೆಯೊಂದಿಗೆ ಜನರ ಮುಂದೆ ಹೋಗುತ್ತಿದೆ ಎಂದು ಹೇಳಿದರು.

ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ವಿಶೇ?ವಾಗಿ ಪರಿಗಣಿಸಿದ್ದು ಕರಾವಳಿ ಮಲೆನಾಡು ಮತ್ತು ಬಯಲು ಸೀಮೆಯನ್ನು ಹೊಂದಿರುವ ಈ ಕ್ಷೇತ್ರಕ್ಕೆ ಪ್ರತ್ಯೇಕವಾಗಿ ವಿಭಾಗ ಮಟ್ಟದ ಪ್ರಣಾಳಿಕೆಯನ್ನು ರೂಪಿಸಿಕೊಂಡು ಈ ಭಾಗದ ಅಭಿವೃದ್ಧಿ ಹಾಗೂ ಪರಿಸರ ಸಂಬಂಧಿ ಯೋಜನೆಗಳನ್ನು ಅನು?ನಗೊಳಿಸಲು ಈ ಭಾಗದ ಮತದಾರರಿಗೆ ಮನವರಿಕೆ ಮಾಡಿಕೊಟ್ಟು ಮತ ಯಾಚಿಸುತ್ತಿದ್ದು ಹಾಗೂ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪರಿಣಾಮವಾಗಿ ಉತ್ತಮ ಸಂಸದೀಯ ಪಟು ಆಗಿರುವ ಕೆ.ಜಯಪ್ರಕಾಶ್ ಹೆಗ್ಡೆ ಅವರ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯಿಂದ ಸ್ಪರ್ಧಿಸಿರುವ ಕೋಟಾ ಶ್ರೀನಿವಾಸ ಪೂಜಾರಿ ಅವರು ಈಗಾಗಲೇ ಒಂದು ಸಂವಿಧಾನಿಕ ಹುದ್ದೆಯಾದ ವಿಧಾನ ಪರಿ?ತ್ ನಾಯಕರಾಗಿದ್ದು, ಜಯಪ್ರಕಾಶ್ ಹೆಗ್ಡೆಯವರು ಸಾಂವಿಧಾನಿಕ ಹುದ್ದೆಗೆ ಆಯ್ಕೆ ಆದರೆ ಇಬ್ಬರೂ ಸೇರಿ ಈ ಕ್ಷೇತ್ರದಲ್ಲಿ ಇನ್ನು ಉತ್ತಮ ಕೆಲಸ ಮಾಡಬಹುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಡಾ. ಡಿ.ಎಲ್ ವಿಜಯಕುಮಾರ್, ಡಾ. ಭಾರ್ಗವ, ಡಿ.ಸಿ ಪುಟ್ಟೇಗೌಡ, ರೂಬಿನ್ ಮೊಸಸ್, ಸೋಮೇಗೌಡ, ಅನಿಲ್‌ಕುಮಾರ್ ಉಪಸ್ಥಿತರಿದ್ದರು.

BJP cane in front of the people of the country with election bond information

About Author

Leave a Reply

Your email address will not be published. Required fields are marked *

You may have missed