September 19, 2024

ಮತಗಳಿಕೆಗೆ ಕಾರ್ಯಕರ್ತರು ಶ್ರಮಿಸಿದರೆ ಗೆಲುವು ಸಾಧ್ಯ

0
ಜಿಲ್ಲಾ ಬಿಜೆಪಿ ಪಾಂಚಜನ್ಯ ಕಚೇರಿಯಲ್ಲಿ ನಗರ ಮಂಡಲ ವತಿಯಿಂದ ಆಯೋಜಿಸಿದ್ದ ಬೂತ್ ಅದ್ಯಕ್ಷರು ಹಾಗೂ ಬಿಎಲ್೨ ಸಭೆ

ಜಿಲ್ಲಾ ಬಿಜೆಪಿ ಪಾಂಚಜನ್ಯ ಕಚೇರಿಯಲ್ಲಿ ನಗರ ಮಂಡಲ ವತಿಯಿಂದ ಆಯೋಜಿಸಿದ್ದ ಬೂತ್ ಅದ್ಯಕ್ಷರು ಹಾಗೂ ಬಿಎಲ್೨ ಸಭೆ

ಚಿಕ್ಕಮಗಳೂರು:  ಬೂತ್‌ಗಳಲ್ಲಿ ಕಾರ್ಯಕರ್ತರು ಬಿಜೆಪಿ ಸೇರಿದಂತೆ ಇತರೆ ಪಕ್ಷದ ಮುಖಂ ಡರುಗಳ ಪಟ್ಟಿ ತಯಾರಿಸಿ ತಂತ್ರಗಾರಿಕೆ ಬಳಸಬೇಕು. ಮತದಾರರ ಮನವೊಲಿಸುವ ಮೂಲಕ ಪ್ರತಿ ಬೂತ್‌ಗಳಲ್ಲಿ ಅತಿ ಹೆಚ್ಚು ಮತಗಳಿಕೆಗೆ ಶ್ರಮವಹಿಸಬೇಕು ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಪಾಂಚಜನ್ಯ ಕಚೇರಿಯಲ್ಲಿ ನಗರ ಮಂಡಲ ವತಿಯಿಂದ ಆಯೋಜಿಸಿದ್ದ ಬೂತ್ ಅದ್ಯಕ್ಷರು ಹಾಗೂ ಬಿಎಲ್೨ ಸಭೆಯನ್ನುದ್ದೇಶಿಸಿ ಗುರುವಾರ ಸಂಜೆ ಮಾತನಾಡಿದ ಅವರು ಪಕ್ಷ ಹಾಗೂ ಮೋದಿ ಅಭಿಮಾನಿಗಳ ಪರವಾಗಿ ಕೆಲಸ ಮಾಡುವವರ ಪಟ್ಟಿ ತಯಾರಿಸಿ ಅಭ್ಯರ್ಥಿ ಗೆಲುವಿಗೆ ನಿರಂತರ ಕಾರ್ಯನಿರ್ವ ಹಿಸಬೇಕಿದೆ ಎಂದು ಹೇಳಿದರು.

ನಗರಸಭೆಯಲ್ಲಿ ಒಟ್ಟಾರೆ ೧೨ ಮಂದಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ಒಬ್ಬರು ಬದುಕಿದ್ದು ಸತ್ತಂತೆ ವರ್ತಿಸುತ್ತಿದ್ದಾರೆ. ಮತ್ತೋರ್ವ ಉಂಡು ಮನೆಗೆ ದ್ರೋಹವೆಸಗಿದ್ದು ಇನ್ನೋರ್ವ ಮಾತ್ರ ತೀರಿಸಿಕೊಂಡಿದ್ದಾರೆ. ಇನ್ನುಳಿದ ಹಾಲಿ ಹಾಗೂ ಮಾಜಿ ನಗರಸಭಾ ಸದಸ್ಯರುಗಳು ಆಯಾ ಕ್ಷೇತ್ರಗಳಲ್ಲಿ ಪ್ರಾಮಾಣಿ ಕವಾಗಿ ಕಾರ್ಯ ನಿರ್ವಹಿಸಿ ಗೆಲುವಿಗೆ ಸಹಕರಿಸಬೇಕು ಎಂದರು.

ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನೇರವಾಗಿ ತಮ್ಮ ವಿರುದ್ಧವಾಗಿ ಕೆಲಸ ಮಾಡಿದ ಪರಿಣಾಮ ಮಾಜಿ ಶಾಸಕರ ಪಟ್ಟ ಲಭಿಸಿದೆ. ಅದರಂತೆ ಇತರೆ ಕ್ಷೇತ್ರಗಳಲ್ಲಿ ಅಲ್ಪಮತಗಳ ಅಂತರಗಳಿಂದ ವಿಧಾನ ಸಭಾ ಚುನಾವಣೆಯಲ್ಲಿ ಸೋಲುಂಡರು. ಹಾಗಾಗಿ ಎಂಎಲ್‌ಎ ಮನಸ್ಥಿತಿಯಿಂದ ಮತದಾರರನ್ನು ಹೊರ ತರಬೇಕಿ ರುವ ಕೆಲಸವಾಗಬೇಕು ಎಂದರು.

ರಾಜ್ಯದ ಚುನಾವಣೆಯಲ್ಲಿ ಕೆಲವರು ಕಾಂಗ್ರೆಸ್‌ಗೆ ಬೆಂಬಲಿಸಿದರೆ, ದೇಶದ ಚುನಾವಣೆಯಲ್ಲಿ ಕುಟುಂಬ ಸ್ಥರ ಸಮೇತ ಬಿಜೆಪಿ ಮತ ಕೊಡುವ ಆಶಯವನ್ನು ಅನೇಕ ಮುಖಂಡರುಗಳು ವ್ಯಕ್ತಪಡಿಸಿದ್ದಾರೆ. ಪ್ರತಿ ಬೂತ್ ಗಳಲ್ಲಿ ಪಕ್ಷಾತೀತವಾಗಿ ಮುಖಂಡರುಗಳನ್ನು ಭೇಟಿ ಮಾಡಬೇಕು. ವಾರ್ಡಿನಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಕಾಂ ಗ್ರೆಸ್ ಮತದಾರರ ಪಟ್ಟಿ ತಯಾರಿಸಿ ತಂತ್ರಗಾರಿಕೆಯಿಂದ ಚುನಾವಣೆ ಎದುರಿಸಬೇಕು ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಗೊಂಡು ಹತ್ತು ತಿಂಗಳು ನಡುವೆಯೇ ರಾಮೇಶ್ವರ ಹೋಟೆಲ್ ಬಾಂಬ್‌ಗೆ ಹಾಕಲಾಗಿದೆ. ಅಲ್ಲದೇ ಆರೋಪಿ ಮೂಲತಃ ನಗರದ ಪ್ರಜೆಯಾಗಿದ್ದು ಮುಂದೊಂದು ದಿನ ನಗರದ ಪ್ರಮುಖ ಹೋಟೆಲ್‌ಗಳಿಗೂ ಬಾಂಬ್ ಹಾಕುವುದರಲ್ಲಿ ಸಂಶಯವಿಲ್ಲ. ಹಾಗಾಗಿ ಕಾರ್ಯಕರ್ತ ರು ಮುತುವರ್ಜಿ ವಹಿಸಿ ಬಿಜೆಪಿ ಬಹುಮತಕ್ಕೆ ಪಣತೊಟ್ಟರೆ ಕಿಡಿಕೇಡಿಗಳ ಅಟ್ಟಹಾಸವನ್ನು ಮಟ್ಟಹಾಕಬಹುದು ಎಂದರು.

ಬಿಜೆಪಿಗೆ ನರೇಂದ್ರ ಮೋದಿ, ಜೆ.ಪಿ.ನಡ್ಡ ಅಥವಾ ಅಮಿತ್ ಶಾ ಎಂದಿಗೂ ಮಾಲೀಕರಲ್ಲ. ಪಕ್ಷದ ನಿಜ ವಾದ ಮಾಲೀಕರು ಕಾರ್ಯಕರ್ತರು. ಆಧುನಿಕ ಚಾಣಕ್ಯ ಅಮಿತ್ ಶಾ ಮಾದರಿಯಲ್ಲಿ ಎಲ್ಲಾ ಬೂತ್‌ಗಳಲ್ಲಿ ಕಾರ್ಯಕರ್ತರು ತಾವೇ ಅಭ್ಯರ್ಥಿ ಅಥವಾ ಚಾಣಕ್ಯರೆಂದು ಭಾವಿಸಿ ಪ್ರಚಾರದಲ್ಲಿ ತೊಡಗಿದರೆ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ಖಚಿತ ಎಂದು ತಿಳಿಸಿದರು.

ಉಡುಪಿ-ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಅಡಿಕೆ, ಕಾಫಿ, ತೆಂಗಿನ ಬೆಳೆಗಾರರ ಸಮಸ್ಯೆಗಳ ಬಗ್ಗೆ ತಿಳಿದಿದೆ. ಅಲ್ಲದೇ ಪಂಚಾಯಿತಿ ಹಾಗೂ ನಗರ ಸಭಾ ಆಡಳಿತದಲ್ಲಿರುವ ಸಮಸ್ಯೆಗಳು ಗೊತ್ತಿವೆ. ಹೀಗಾಗಿ ಮತದಾರರು ಒಮ್ಮೆ ಅವಕಾಶ ಕಲ್ಪಿಸಿದರೆ ಕ್ಷೇತ್ರದಲ್ಲಿ ಮಾದರಿ ಕೆಲಸ ಕೈಗೊಳ್ಳುವ ಗುರಿ ಹೊಂದಿದ್ದೇನೆ ಎಂದರು.
ಚಿಕ್ಕಮಗಳೂರು ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡ ದಿನದಿಂದಲೂ ಮಾಜಿ ಸಚಿವ ಸಿ.ಟಿ.ರವಿಯವರು ರಸ್ತೆ, ಹಿಂದುಳಿದ ವರ್ಗದವರಿಗೆ ಸಮುದಾಯ ಸೇರಿದಂತೆ ಕೋಟಿಗಟ್ಟಲೇ ಹಣವನ್ನು ಸರ್ಕಾರದಿಂದ ಮಂಜೂರು ಮಾಡಿದ ಕೆಲಸಗಳೇ ತಮಗೇ ವರದಾನವಾಗಿ ಗೆಲುವು ಸಾಧಿಸಲು ಕಾರಣವಾಗಲಿದೆ ಎಂದು ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಜೆಪಿ ನಗರಾಧ್ಯಕ್ಷ ಕೆ.ಎಸ್.ಪುಷ್ಪರಾಜ್ ನಗರದಲ್ಲಿ ಸುಮಾರು ೧೧೨ ಬೂತ್‌ಗಳಿವೆ. ಈ ಪೈಕಿ ಪ್ರತಿ ಬೂತ್‌ಗಳಲ್ಲಿ ಕಾರ್ಯಕರ್ತರು ನಾಳೆಯಿಂದಲೇ ಕರಪತ್ರ ಹಂಚಿ ಕೇಂದ್ರ ಸರ್ಕಾ ರದ ಸಾಧನೆ ಹಾಗೂ ಯುಪಿಎ ಸರ್ಕಾರ ವೈಫಲ್ಯತೆಯನ್ನು ತಿಳಿಸುವ ಮೂಲಕ ಮತದಾರರಿಗೆ ಸತ್ಯಾಸತ್ಯತೆ ಯನ್ನು ತಿಳಿಸುವ ಕೆಲಸ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷ ಜಸಂತ್ ಅನಿಲ್‌ಕುಮಾರ್, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ಮುಖಂಡರುಗಳಾದ ಸೀತರಾಮ ಭರಣ್ಯ ಮತ್ತಿತರರು ಹಾಜರಿದ್ದರು.

Booth president and BL2 meeting organized by Nagar Mandal

About Author

Leave a Reply

Your email address will not be published. Required fields are marked *

You may have missed