September 19, 2024

ಆರೋಗ್ಯ ಹಾಗೂ ಸಂಸ್ಕಾರ ವೃದ್ದಿಗೆ ಯೋಗ ಸಹಕಾರಿ

0
ಜಿಲ್ಲಾ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಪ್ರಾರಂಭಗೊಂಡ ನೂತನ ಯೋಗಮಂದಿರ ಕಾರ್ಯಕ್ರಮ

ಜಿಲ್ಲಾ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಪ್ರಾರಂಭಗೊಂಡ ನೂತನ ಯೋಗಮಂದಿರ ಕಾರ್ಯಕ್ರಮ

ಚಿಕ್ಕಮಗಳೂರು:  ಆರೋಗ್ಯ ಹಾಗೂ ಸಂಸ್ಕಾರ ವೃದ್ಧಿಗೆ ಸಹಕಾರಿಯಾಗಿರುವ ಯೋಗದ ನಿರಂತರ ಕಲಿಕೆಗೆ ಅನುಕೂಲವಾಗುವಂತೆ ನಗರದಲ್ಲಿ ಯೋಗ ಮಂದಿರವನ್ನು ನಿರ್ಮಿಸಿ ಮನು? ಶಿಸ್ತಿನ ಜೀವನ ನಡೆಸಲು ಅನುಕೂಲವಾಗುವ ಶಾಶ್ವತ ವೇದಿಕೆ ನಿರ್ಮಿಸಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.

ನಗರದ ಬೈಪಾಸ್ ರಸ್ತೆಯ ಕಲ್ಯಾಣನಗರ ಸಮೀಪದಲ್ಲಿ ಜಿಲ್ಲಾ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಪ್ರಾರಂಭಗೊಂಡ ನೂತನ ಯೋಗಮಂದಿರ ಕಾರ್ಯಕ್ರಮದಲ್ಲಿ ಗುರುವಾರ ಪಾಲ್ಗೊಂಡು ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಮಕ್ಕಳು ಯೋಗಾಭ್ಯಾಸ ಮಾಡುವ ಮೂಲಕ ಗುಂಪಿನಲ್ಲಿ ಆಂತರಿಕ ಆತ್ಮವನ್ನು ಗುರುತಿಸಲು ಸಾಧ್ಯವಾ ಗುತ್ತದೆ. ಯೋಗ ಆಸನ, ಧ್ಯಾನ, ಉಸಿರಾಟ, ವಿಶ್ರಾಂತಿ, ಯೋಗ ಆಧಾರಿತ ಚಟುವಟಿಕೆಗಳು, ಆಟಗಳು, ಪಠಣ ಮತ್ತು ಉಪನ್ಯಾಸಗಳು ದೈನಂದಿನ ದಿನಚರಿಯ ಭಾಗವಾಗಿದೆ ಎಂದು ಹೇಳಿದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ನೂತನ ಯೋಗಮಂ ದಿರಕ್ಕೆ ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡು ಯೋಗ ಮಂದಿರವನ್ನು ಸಮರ್ಪಕವಾಗಿ ಸುತ್ತಮುತ್ತಲಿನ ನಿವಾಸಿ ಗಳು ಬಳಸಿಕೊಳ್ಳಬೇಕು ಆರೋಗ್ಯ ಶರೀರವನ್ನು ತಮ್ಮದಾಗಿಸಿಕೊಳ್ಳಬೇಕು ಎಂದು ಶುಭ ಕೋರಿದರು.

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ವರದರಾಜ್ ಮಾತನಾಡಿ ೨೦೦೬ ರಿಂದ ಸತತ ಹೋರಾಟ ದಿಂದ ಯೋಗ ಮಂದಿರದ ಸ್ಥಾಪಿಸುವ ಗುರಿ ಇಂದು ಪೂರ್ಣಗೊಳ್ಳುತ್ತಿದೆ. ಸುಮಾರು ೨ ಕೋಟಿ ಅಂದಾಜಿನಲ್ಲಿ ನಿರ್ಮಾಣವಾಗಲಿದ್ದು ಸ್ವಲ್ಪಮಟ್ಟಿನ ಕಟ್ಟಡದ ಕೆಲಸಗಳು ಬಾಕಿಯಿದೆ. ಹಾಗಾಗಿ ಯೋಗಾಸಕ್ತರಿಗೆ ಅಪೇಕ್ಷೆ ಮೇರೆಗೆ ಪ್ರಾರಂಭಿಸಲಾಗಿದೆ ಎಂದರು.

ಯೋಗ ಶಿಕ್ಷಕ ಪಿ.ಚಂದ್ರಮೌಳಿ ಮಾತನಾಡಿ ವಿಶಾಲವಾದ ವಿಸ್ತೀರ್ಣವನ್ನು ಹೊಂದಿರುವ ನೂತನ ಯೋಗ ಮಂದಿರದಲ್ಲಿ ಮಾತೆಯರು, ಪುರು?ರು, ಮಕ್ಕಳು, ವೃದ್ಧರಿಗೆ ನಿರಂತರವಾಗಿ ಯೋಗಾಭ್ಯಾಸದ ಜತೆಗೆ ಧ್ಯಾನ ಮುಂತಾದ ಚಟುವಟಿಕೆಗಳನ್ನು ನಡೆಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಯೋಗ ಮಂದಿರ ಪ್ರಾರಂಭದ ಮುನ್ನ ಕಳೆದ ಎರಡು ದಿನಗಳಿಂದ ಹೋಮ, ಹವನ ಹಾಗೂ ಧಾರ್ಮಿಕ ಪೂಜಾವಿಧಿವಿಧಾನಗಳು ನಡೆಸಲಾಯಿತು. ಪ್ರಾರಂಭೋತ್ಸವದಲ್ಲಿ ನೂರಾರು ಮಹಿಳೆಯರು, ವೃದ್ದರು ಹಾಗೂ ಮಕ್ಕಳು ವಸ್ತ್ರಸಂಹಿತೆಯೊಂದಿಗೆ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಸಮಿತಿ ಉಪಾಧ್ಯಕ್ಷ ಶ್ರೀನಿವಾಸ್, ಮುಖ್ಯಸ್ಥ ರಾಮಸ್ವಾಮಿ, ಸದಸ್ಯ ರಾಘವೇಂದ್ರ, ಯೋಗಾಸಕ್ತರಾದ ಪವರ್, ಸಿದ್ದೇಗೌಡ, ಶೋಭಾ, ನಾಗಣ್ಣ, ಸುಮಿತ್ರ, ಶಾರದಾ, ಪುಷ್ಪ, ಲಕ್ಷ್ಮಮ್ಮ ಮತ್ತಿತರರು ಹಾಜರಿದ್ದರು.

District Shree Patanjali Yoga Education Committee Inauguration of New Yoga Mandir

About Author

Leave a Reply

Your email address will not be published. Required fields are marked *

You may have missed