September 19, 2024

ಅಂಬೇಡ್ಕ‌ರ್ ಪ್ರತಿಮೆ ತೆರವಿಗೆ ಮುಂದಾದ ಜಿಲ್ಲಾಡಳಿತದ – ದ.ಸಂ.ಸ ಸಂಘಟನೆಗಳ ಆಕ್ರೋಶ

0
ಅಂಬೇಡ್ಕ‌ರ್ ಪ್ರತಿಮೆ ತೆರವಿಗೆ ಮುಂದಾದ ಜಿಲ್ಲಾಡಳಿತದ - ದ.ಸಂ.ಸ ಸಂಘಟನೆಗಳ ಆಕ್ರೋಶ

ಅಂಬೇಡ್ಕ‌ರ್ ಪ್ರತಿಮೆ ತೆರವಿಗೆ ಮುಂದಾದ ಜಿಲ್ಲಾಡಳಿತದ - ದ.ಸಂ.ಸ ಸಂಘಟನೆಗಳ ಆಕ್ರೋಶ

ಚಿಕ್ಕಮಗಳೂರು: ಗವನಹಳ್ಳಿ ಸರ್ವೆ ನಂಬರ್ 93 ರಲ್ಲಿ ನಿರ್ಮಿಸಿರುವ ಅಂಬೇಡ್ಕ‌ರ್ ಪ್ರತಿಮೆ ತೆರವಿಗೆ ಮುಂದಾದ ಜಿಲ್ಲಾಡಳಿತದ ಕ್ರಮಕ್ಕೆ ದಲಿತ ಸಂಘಟನೆಗಳು ಕೆಂಡಾಮಂಡಲವಾಗಿವೆ. ನಾಳೆ ಅಂಬೇಡ್ಕ‌ರ್ ಜಯಂತಿ ಹಿನ್ನೆಲೆ ಆಚರಣೆಯ ಅವಕಾಶಕ್ಕೆ ಪಟ್ಟು ಹಿಡಿದಿರುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕ‌ರ್ ಅಧ್ಯಯನ ಕೇಂದ್ರ ಸ್ಥಾಪನೆಗೆ ನಗರದ ಹೊರವಲಯದ ಸ.ನಂ.93 ಗವನಹಳ್ಳಿಯಲ್ಲಿನ ಜಾಗ ಮಂಜೂರು ಕೋರಿದ್ದ ದಲಿತ ಸಂಘಟನೆಗಳು ನಾಳೆ ಅದೇ ಸ್ಥಳದಲ್ಲಿ ಅಂಬೇಡ್ಕ‌ರ್ ಜಯಂತಿ ಆಚರಿಸಲು ಮುಂದಾಗಿರುವುದು ಜಿಲ್ಲಾಡಳಿತಕ್ಕೆ ಹೊಸ ಸಮಸ್ಯೆ ತಂದಿಟ್ಟಿದೆ.

ಬುದ್ದ ಪ್ರತಿಮೆ ಬೆನ್ನಲ್ಲೇ ಅಂಬೇಡ್ಕ‌ರ್ ಪ್ರತಿಮೆ ಈ ಸ್ಥಳದಲ್ಲಿ ಇಂದು ತಲೆ ಎತ್ತಿದ್ದು ಅದರ ತೆರವಿಗೆ ತೆರಳಿದ ತಾಲೂಕು ಆಡಳಿತಕ್ಕೆ ಪ್ರತಿಭಟನೆ ಬಿಸಿ ತಟ್ಟಿದೆ. ಪೊಲೀಸ್‌ ತುಕುಡಿಯೊಂದಿಗೆ ಸ್ಥಳಕ್ಕೆ ಹೋದ ಉಪವಿಭಾಗಾಧಿಕಾರಿ ದಲ್ಟಿತ್ ಕುಮಾರ್, ಚಿಕ್ಕಮಗಳೂರಿನ ತಹಶಿಲ್ದಾರ್ ಸುಮಂತ್, ಹಾಗೂ ಡಿವೈಎಸ್.ಪಿ ಸೇರಿದಂತೆ ಅಧಿಕಾರಿಗಳಿಗೆ ಅಂಬೇಡ್ಕರ್ ಪ್ರತಿಮೆ ಬಳಿ ಹೋಗದಂತೆ ದಲಿತ ಸಂಘಟನೆ ಕಾರ್ಯಕರ್ತರು ತಡೆದಿದ್ದಾರೆ.

ಅಲ್ಲಿಯೇ ಧರಣಿ ಕುಳಿತು ತೆರವು ಮಾಡದಂತೆ ತಡೆದಿದ್ದಾರೆ. ಅಲ್ಲದೇ ನಾಳೆ ಅಂಬೇಡ್ಕ‌ರ್ ಜಯಂತಿ ಇರೋದ್ರಿಂದ ಇದೇ ಸ್ಥಳದಲ್ಲಿ ಆಚರಣೆಗೆ ಅವಕಾಶ ಕೊಡಿ ಎಂದು ಅಧ್ಯಯನ ಸಂಸ್ಥೆ ಅಧ್ಯಕ್ಷ ಬಿ.ಬಿ ನಿಂಗಯ್ಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಸದ್ಯ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣ ಆಗಿದ್ದು, ಕೆಎಸ್‌ಆರ್ ಪಿ ತುಕುಡಿಯನ್ನು ನಿಯೋಜಿಸಲಾಗಿದೆ.

ನಾಳೆ ಅಂಬೇಡ್ಕ‌ರ್ ಜಯಂತಿ ಇಲ್ಲಿಯೇ ಆಚರಿಸುವುದಾಗಿ ದಲಿತ ಸಂಘಟನೆಗಳು ಬಿಗಿಪಟ್ಟು ಹಿಡಿದಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಿಲ್ಲಾಡಳಿತಕ್ಕೆ ಪ್ರಕರಣ ನುಂಗಲಾರದ ತುತ್ತಾಗಿದೆ.

Outrage of the district administration – D.S.M.S organizations for removing Ambedkar statue

About Author

Leave a Reply

Your email address will not be published. Required fields are marked *

You may have missed