September 19, 2024
ತೇಗೂರು ಬಳಿ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಸಂಸ್ಥೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ

ತೇಗೂರು ಬಳಿ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಸಂಸ್ಥೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ

ಚಿಕ್ಕಮಗಳೂರು: ಸಂವಿಧಾನ ಬರೀ ಪುಸ್ತಕ ಅಲ್ಲ, ಜೀವನ ವಿಧಾನ. ಸಾಂಸ್ಕೃತಿಕ ರಾಜಕಾರಣ ಸರಿಯಾಗಿ ನಿಭಾಯಿಸುವುದೇ ಅಧಿಕಾರ, ನಾವುಗಳು ಅeನದಿಂದ ಬಿಡುಗಡೆ ಆಗಬೇಕು ಎಂದು ಚಿಂತಕ ನಟರಾಜ್ ಬೂದಾಳ್ ಅವರು ಕರೆ ನೀಡಿದರು.

ನಗರದ ಹೊರ ವಲಯದ ತೇಗೂರು ಬಳಿ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಸಂಸ್ಥೆ, ಭಾರತೀಯ ಬೌದ್ಧ ಮಹಾಸಭಾ, ಭೀಮ್ ಆರ್ಮಿ ಹಾಗೂ ವಿವಿಧ ದಲಿತ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಅವರ ೧೩೩ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಾ.ಬಿ.ಆರ್. ಅಂಬೇಡ್ಕರ್ ಅವರು ದೇಶಕ್ಕೆ ರಾಜಕೀಯ ಸಂವಿಧಾನ ನೀಡಿದ್ದರೆ, ಬುದ್ಧ ಅವರು ಬದುಕಿಗೆ ಬೇಕಾದ ಸಂವಿಧಾನ ನೀಡಿದ್ದಾರೆ. ನಿನ್ನ ಬದುಕಿಗೆ ನೀನೇ ಬೆಳಕು ಎಂದಿದ್ದಾರೆ ಎಂದು ಹೇಳಿ, ಭಾಷೆಯಲ್ಲಿ ಕಟ್ಟಿಕೊಂಡ ಸುಳ್ಳು, ದೇಶದ ೧೩೦ ಕೋಟಿ ಜನ ಅದನ್ನು ಅನುಸರಿಸಿ ನಿಜ ಮಾಡಲು ಪ್ರತಿ ಕ್ಷಣ ಪ್ರಯತ್ನಿಸುತ್ತಾರೆ. ಪ್ರತಿ ನಡೆ ನುಡಿ ಪ್ರತಿಕ್ರಿಯೆ ಒಳಗಿ ಪ್ರeಯನ್ನು ನೋಡಬೇಕು. ಓದುವುದರಿಂದ ಕೇಳುವುದರಿಂದ ಭಕ್ತಿಯಿಂದ ನಮಸ್ಕಾರ ಮಾಡುವುದರಿಂದ ಏನೂ ಪ್ರಯೋಜನ ಇಲ್ಲ. ಅದನ್ನು ಅನ್ವಯಿಸಿಕೊಂಡರೆ ಮಾತ್ರ ಬುದ್ಧ, ಅಂಬೇಡ್ಕರ್ ನಮ್ಮವರಾಗುತ್ತಾರೆ ಎಂದು ಹೇಳಿದರು.

ನಮ್ಮಯೊಳಗೆ ಇರುವ ಎಚ್ಚರದ ಪ್ರeಯೇ ಬುದ್ಧ, ತಮ್ಮ ವಿವೇಕವನ್ನು ಯಾರ್ಯಾರು ಎಚ್ಚರಿಸಿಕೊಂಡಿದ್ದಾರೋ ಅವರು ಬುದ್ಧ. ಎಲ್ಲರ ಜತೆಗೆ ಬಾಳಬೇಕು ಅಂಬೇಡ್ಕರ್, ಬಸವಣ್ಣ, ಬುದ್ಧ ಅವರ ಆಶಯವಾಗಿತ್ತು ಎಂದರು.

ನಿವೃತ್ತ ಡಿಡಿಪಿಐ ರುದ್ರಸ್ವಾಮಿ ಮಾತನಾಡಿ, ಸಾಂಸ್ಕೃತಿಕ ಗುಲಾಮಗಿರಿಯಿಂದ ನಾವುಗಳು ಹೊರಗೆ ಬರಬೇಕು, ನಮ್ಮಲ್ಲಿರುವ ಆಸ್ಪೃಶ್ಯತೆ ಕಳಂಕ ಇನ್ನೂ ಬಿಡುಗಡೆಯಾಗಿಲ್ಲ, ಇದನ್ನು ಹೋಗಲಾಡಿಸುವ ಕಾಳಜಿ ಹಿಂದು ಸಂಘಟನೆಗಳಿಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ನಮಗೆ ಮತದಾನದ ಹಕ್ಕಿದೆ. ಆದರೆ, ಧಾರ್ಮಿಕ ಸ್ಥಾನಮಾನ ಸಿಕ್ಕಿಲ್ಲ. ಶೂದ್ರರಿಗೆ, ಮಹಿಳೆಯರಿಗೆ ಸಮಾನತೆ ಸಿಗಬೇಕೆಂದು ೧೨ನೇ ಶತಮಾನದಲ್ಲಿ ಬಸವಣ್ಣನವರು ಕರೆ ನೀಡಿದರು, ಆಧ್ಯಾತ್ಮಿಕ ಸ್ವಾತಂತ್ರ್ಯ ಸಿಗಬೇಕೆಂಬುದು ಅವರ ಆಶಯವಾಗಿತ್ತು ಎಂದರು.

ರಾಜಕೀಯ ಕ್ಷೇತ್ರದಲ್ಲಿ ಶಾಸಕರು, ಸಚಿವರು, ಆಡಳಿತ ವ್ಯವಸ್ಥೆಯಲ್ಲಿ ಹಿರಿಯ ಅಽಕಾರಿಗಳು ಇದ್ದಾರೆ. ಅವರುಗಳು ತುಳಿತರ ಏಳಿಗೆಗಾಗಿ ಜವಬ್ದಾರಿಯಿಂದ ನಡೆದುಕೊಳ್ಳುತ್ತಿಲ್ಲ ಎಂದ ಅವರು, ಈ ದೇಶದಲ್ಲಿ ಮಾಯಾವಿ ರಾಜಕಾರಣ ನಡೆಯುತ್ತಿದೆ. ಜನರ ಸ್ವಾಭಿಮಾನ ಕಾಪಾಡುವುದು ನಮ್ಮ ಸಾಮಾಜಿಕ ಹೊಣೆಗಾರಿಕೆ ಆಗಬೇಕು ಎಂದು ಕರೆ ನೀಡಿದರು.

ಸಂವಿಧಾನ ಅಪಾಯದಲ್ಲಿದೆ. ಸಂಘಟನೆಯ ಶಕ್ತಿ ಕುಗ್ಗಿಸದೆ ನಾವುಗಳು ಒಗ್ಗಟ್ಟಾಗಿ ಹೋರಾಟ ಮಾಡಬೇಕು. ನಮ್ಮ ಹಕ್ಕುಗಳ ರಕ್ಷಣೆಗಾಗಿ ಪ್ರಯಾಣ ಮುಂದುವರೆಸಬೇಕು. ಇಲ್ಲದೆ ಹೋದರೆ ನಮ್ಮ ಹಕ್ಕುಗಳನ್ನು ಅಪಹರಣ ಮಾಡಬಹುದು. ಸಂವಿಧಾನಕ್ಕೆ ದಕ್ಕೆ ಆಗುತ್ತಿದೆ ಎಂಬುದು ನಿಜ. ವಿವೇಚನೆಯಿಂದ ಮತದಾನ ಮಾಡಬೇಕು ಎಂದು ಕರೆ ನೀಡಿದರು.

ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಬಿ.ಬಿ. ನಿಂಗಯ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಡೆಸಲಾಗುತ್ತಿರುವ ಜಾಗವನ್ನು ನಮ್ಮ ಸಂಸ್ಥೆಗೆ ನೀಡುವಂತೆ ಹಲವು ವರ್ಷಗಳ ಹಿಂದೆಯೇ ರಾಜ್ಯ ಸರ್ಕಾರಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ಈ ಜಾಗವನ್ನು ನಮ್ಮ ಸಂಸ್ಥೆಗೆ ಮಂಜೂರು ಮಾಡಲೇಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಅನಂತ್ ಮೂಡಿಗೆರೆ, ಮರ್ಲೆ ಅಣ್ಣಯ್ಯ, ಅಂಗಡಿ ಚಂದ್ರು, ಪತ್ರಕರ್ತ ಚಂದ್ರಯ್ಯ, ದಂಟರಮಕ್ಕಿ ಶ್ರೀನಿವಾಸ್, ವಸಂತಕುಮಾರ್, ಹೊನ್ನೇಶ್, ರಮೇಶ್, ಕೂದುವಳ್ಳಿ ಮಂಜು, ಹೊನ್ನಪ್ಪ, ನವರಾಜ್, ರಘು, ಪ್ರದೀಪ್, ಪ್ರಕಾಶ್, ಕಾಳಯ್ಯ, ಹುಣಸೇಮಕ್ಕಿ ಲಕ್ಷ್ಮಣ್, ಪರಮೇಶ್, ದೊಡ್ಡಯ್ಯ ಇದ್ದರು.

Constitution is not just a book – a way of life

About Author

Leave a Reply

Your email address will not be published. Required fields are marked *

You may have missed