September 19, 2024

National Spotlight Netball Games for South Zone: ಕ್ರೀಡೆಯು ಗಡಿಯನ್ನು ದಾಟಿ ಸಹೃದಯರನ್ನು ಸೃಷ್ಟಿಸಿ ಒಳ್ಳೆಯ ವ್ಯಕ್ತಿತ್ವವನ್ನು ಬೆಳೆಸುವ ಸಾಧನ

0

ಚಿಕ್ಕಮಗಳೂರುಎಕ್ಸ್‌ಪ್ರೆಸ್: ಕ್ರೀಡೆಯು ಗಡಿಯನ್ನು ದಾಟಿ ಸಹೃದಯರನ್ನು ಸೃಷ್ಟಿಸಿ ಒಳ್ಳೆಯ ವ್ಯಕ್ತಿತ್ವವನ್ನು ಬೆಳೆಸುವ ಸಾಧನ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಜಿ.ಪ್ರಭು ತಿಳಿಸಿದರು.

ನಗರದ ಎಐಟಿ ಕಾಲೇಜಿನ ಬಿಜಿಎಸ್ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ನೆಟ್‌ಬಾಲ್ ಅಸೋಸಿಯೇಷನ್ ಮತ್ತು ಅಮೇಚುರ್ ನೆಟ್‌ಬಾಲ್ ಅಸೋಸಿಯೇಷನ್ ಆಫ್ ಕರ್ನಾಟಕ ಇವರ ಸಂಯುಕ್ತಾಶ್ರಯದಲ್ಲಿ ಪುರುಷ ಮತ್ತು ಮಹಿಳೆಯರ ೧೫ನೇ ದಕ್ಷಿಣ ವಲಯದ ರಾಷ್ಟ್ರಮಟ್ಟದ ಹೊನಲುಬೆಳಕು ನೆಟ್‌ಬಾಲ್ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ಕ್ರೀಡೆಯಲ್ಲಿ ಅತ್ಯಂತ ಜಾಗರೂಕತೆಯಿಂದ ಆಟ ಆಡುವುದರ ಜತೆಗೆ ಕಠಿಣ ಪರಿಶ್ರಮ ಹಾಕಿದಾಗ ಮಾತ್ರ ಗೆಲುವು ನಮ್ಮದಾಗುತ್ತದೆ ಎಂದರು.

ರಾಷ್ಟ್ರಮಟ್ಟದ ಕ್ರೀಡಾಕೂಟವನ್ನು ಜಿಲ್ಲಾ ಕೇಂದ್ರ ಚಿಕ್ಕಮಗಳೂರಿನಲ್ಲಿ ಆಯೋಜಿಸಲಾಗಿದೆ, ಈ ಕ್ರೀಡಾಕೂಟವು ಯಶಸ್ಸನ್ನು ಕಾಣಲಿ, ಅತ್ಯಂತ ಮಾದರಿಯಾದ ಜಿಲ್ಲಾ ಕ್ರೀಡಾಕೂಟವನ್ನು ಜಿಲ್ಲಾ ಕೇಂದ್ರ ಚಿಕ್ಕಮಗಳೂರಿನಲ್ಲಿ ಆಯೋಜಿಸಲಾಗಿದೆ, ಕ್ರೀಡೆಯು ಗಡಿಯನ್ನು ದಾಟಿ ಸಹೃದಯರನ್ನು ಸೃಷ್ಟಿಸಿ ಒಳ್ಳೆಯ ವ್ಯಕ್ತಿತ್ವವನ್ನು ಬೆಳೆಸುವ ಸಾಧನ, ಸೌತ್‌ಜೋನ್ ಕ್ರೀಡಾಕೂಟ ಆಯೋಜನೆಮಾಡಿ ವಿವಿಧ ರಾಜ್ಯಗಳಿಂದ ಕ್ರೀಡಾಪಟುಗಳು ನಮ್ಮ ಜಿಲ್ಲೆಗೆ ಆಗಮಿಸಿ, ಉತ್ತಮ ಪ್ರರ್ಶನ ನೀಡುತ್ತಿದ್ದಾರೆ ಎಂದರು.

ಆದಿಚುಂಚನಗಿರಿ ಯುನಿವರ್‌ಸಿಟಿ ರಿಜಿಸ್ಟರ್ ಡಾ. ಸಿ.ಕೆ.ಸುಬ್ಬರಾವ್ ಮಾತನಾಡಿ ಚಿಕ್ಕಮಗಳೂರು ಸುಂದರವಾಗ ನಗರ, ಕಾಫೀ ಬೆಳೆಯ ಜತೆಗೆ ಇತರ ಬೆಳೆಗಳನ್ನು ಬೆಳೆಯುಲಾಗುತ್ತದೆ, ಮತ್ತು ದೇವಾಲಯಗಳಿಗೆ ಪ್ರಸಿದ್ಧವಾದ ನಗರ, ಕ್ರೀಡೆಯು ಬದುಕಿನ ಮುಖ್ಯಭಾಗ, ಸೋಲು ಗೆಲುವು ಮುಖ್ಯವಲ್ಲ ಕ್ರೀಡೆಯಲ್ಲಿ ಪಾಲ್ಗೋಳ್ಳುವುದು ಮುಖ್ಯ, ಕರ್ನಾಟಕ, ಕೇರಳ, ತಮಿಳುನಾಡು, ಆಂದ್ರಪ್ರದೇಶ್, ಪಾಂಡಿಚೆರಿ, ತೆಲಂಗಾಣದಿಂದ ಆಗಮಿಸಿದ ಎಲ್ಲಾ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸಬೇಕೆಂದು ತಿಳಿಸಿದರು.

ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ನಮ್ಮ ಜಿಲ್ಲೆಯ ಸಾಕ್ಷಾತ್‌ಗೌಡ ರವರಿಗೆ ಏಕಲವ್ಯ ಪ್ರಶಸ್ತಿ ಪಡೆದು ಜಿಲ್ಲೆ ಮತ್ತು ರಾಜ್ಯಕ್ಕೆ ಕೀರ್ತಿಯನ್ನು ತಂದಿದ್ದಾರೆ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೊಟ್ಟ ಮೊದಲಬಾರಿಗೆ ರಾಷ್ಟ್ರಮಟ್ಟದ ಕ್ರೀಡೆಯನ್ನು ಆಚರಿಸಲಾಗಿದೆ, ನೆಟ್‌ಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಇತರ ರಾಜ್ಯಗಳಿಂದ ಆಗಮಿಸಿದ ಕ್ರೀಡಾಪಟುಗಳಿಗೆ ಜಿಲ್ಲೆಗೆ ಸ್ವಾಗತಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರೀಡೆಯಲ್ಲಿ ಆಸಕ್ತಿಹೊಂದಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಯನ್ನು ನೀಡಿದ್ದು, ಕೇವಲ ಪ್ರಶಸ್ತಿಪಡೆಯಲು ಕ್ರೀಡೆಯಲ್ಲಿ ಭಾಗವಹಿಸದೆ ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಳ್ಳುವಂತೆ ತಿಳಿಸಿದರು.

ಏಕಲವ್ಯ ಪ್ರಶಸ್ತಿ ವಿಜೇತ ಸಾಕ್ಷಾತ್‌ಗೌಡ ಮಾತನಾಡಿ ೧೦ ವರ್ಷಗಳಿಂದ ಪಟ್ಟ ಕಷ್ಟಗಳಿಗೆ ಈ ಪ್ರಶಸ್ತಿ ಸಿಕ್ಕಿರುವುದು ಅದೃಷ್ಟದ ಜತಗೆ ಗೌರವವನ್ನು ತಂದುಕೊಟ್ಟಿದೆ, ಇಂತಹ ಅದೃಷ್ಟ ಸಿಗುವುದು ಲಕ್ಷದಲ್ಲಿ ಒಬ್ಬರಿಗೆ ಮಾತ್ರ, ಈ ಪ್ರಶಸ್ತಿಯನ್ನು ಪಡೆಯಲು ಬೆಂಬಲಿಸಿದ ಎಲ್ಲರಿಗೂ ಕೃತಜ್ಞತೆ ತಿಳಿಸಿ, ಕ್ರೀಡಾಪಟುಗಳು ೧ ಅಥವಾ ೨ ವರ್ಷಗಳು ಕ್ರೀಡೆಯಲ್ಲಿ ಭಾಗವಹಿಸಿ ಮದ್ಯದಲ್ಲಿ ನಿಲ್ಲಿಸದೆ ಕಠಿಣ ಪರಿಶ್ರಮದಿಂದ ನಿರಂತರ ಅಭ್ಯಾಸ ಮಾಡಿದಾಗ ಅದರ ಪ್ರತಿಫಲ ಸಿಗುವುದಾಗಿ ತಿಳಿಸಿದರು.

ಜಿಲ್ಲಾ ನೆಟ್‌ಬಾಲ್ ಅಸೋಸಿಯೇಷನ್ ಗೌರವಾಧ್ಯಕ್ಷ ದೀಪಕ್ ದೊಡ್ಡಯ್ಯ ಮಾತನಾಡಿ ದಕ್ಷಿಣ ಭಾರತದ ರಾಷ್ಟ್ರಮಟ್ಟದ ಹೊನಲುಬೆಳಕು ನೆಟ್‌ಬಾಲ್ ಟೂರ್ನಮೆಂಟ್‌ನಲ್ಲಿ ದಕ್ಷಿಣ ಭಾರತದ ಆರು ರಾಜ್ಯಗಳು ಭಾಗವಹಿಸಿದ್ದು ಒಂದು ರಾಜ್ಯದಿಂದ ಪುರುಷ ಮತ್ತೊಂದು ಮಹಿಳಾ ತಂಡ ಭಾಗವಹಿಸಿದ್ದು ೬ ರಾಜ್ಯಗಳಿಂದ ೧೨ ತಂಡಗಳು ಭಾಗವಹಿಸಿವೆ, ಇಂದು ಉದ್ಘಾಟನೆಯೊಂದಿಗೆ ಪಂದ್ಯಾವಳಿ ಪ್ರಾರಂಭವಾಗಿದ್ದು, ಭಾನುವಾರ ಸಮಾರೋಪದೊಂದಿಗೆ ಮುಕ್ತಾಯಗೊಳ್ಳುವುದು, ಈ ಕಾರ್ಯಕ್ರಮವನ್ನು ನೆಟ್‌ಬಾಲ್ ಫೆಡರೇಶನ್‌ನಿಂದ ಮಾಡಲಾಗುತ್ತಿದ್ದು ವಿಜೇತರಾದವರಿಗೆ ಟ್ರೋಫಿ ಜತೆಗೆ ಮೆಡಲ್ ದೋರೆಯುವುದು, ಕ್ರೀಡೆ ಮನುಷ್ಯನ ಅವಿಭಾಜ್ಯ ಅಂಗ, ಕ್ರೀಡಾಮನೋಭಾವನೆ ಹೊಂದಿರುವವರು ಜೀವನದ ಏರಿಳಿತಗಳಿಗೆ ಅಂಜುವುದಿಲ್ಲ, ಆಟದಲ್ಲಿ ಸೋಲುಗೆಲುವು ಇರುತ್ತದೆ, ಸೋತವರು ಕುಗ್ಗದೆ, ಗೆದ್ದವರು ಬೀಗದೆ ಯಾರೆ ಗೆದ್ದರು ಎಲ್ಲರು ಒಟ್ಟಾಗಿ ಸಂಭ್ರಮಿಸೋಣ ಎಂದು ತಿಳಿಸಿದರು.

ನಮ್ಮ ಊರಿನ ಹುಡಗ ಸಾಕ್ಷಾತ್‌ಗೌಡ ರವರಿಗೆ ಕರ್ನಾಟಕ ಅತ್ಯುತ್ತಮ ಕ್ರೀಡಾಪಟು ಏಕಲವ್ಯ ಪ್ರಶಸ್ತಿ ಲಭ್ಯವಾಗಿರುವುದು ನಮ್ಮ ಇಡೀ ಜಿಲ್ಲೆಯೇ ಹೆಮ್ಮೆ ಪಡುವಂತಹ ವಿಷಯ, ಅವರ ಪ್ರತಿಭೆಗೆ ಪ್ರತಿಫಲ ದೋರೆತ್ತಿದೆ, ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದ ಅರ್ಜುನ ಪ್ರಶಸ್ತಿ ಸಿಗಲೆಂದು ಆಶಿಸಿದರು.

ಈ ಸಂದರ್ಭದಲ್ಲಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿದೇಶಕರಾದ ಹೆಚ್.ಮಂಜುಳ, ಎಐಟಿ ಕಾಲೇಜಿನ ಪ್ರಾಂಶುಪಾಲರಾದ ಸಿ.ಟಿ.ಜಯದೇವ, ಜಿಲ್ಲಾ ನೆಟ್‌ಬಾಲ್ ಅಸೋಸಿಯೇಷನ್ ಅಧ್ಯಕ್ಷರಾದ ಡಿ.ಎಲ್.ಮಧು, ಉಪಾಧ್ಯಕ್ಷ ಡಾ. ಸಂತೋಷ್ ಅರಸ್, ಕಾರ್ಯದರ್ಶಿ ಹೇಮೋಧರ, ಸಹಕಾರ್ಯದರ್ಶಿ ಶಿಲ್ಪಪ್ರತಾಪ್, ಪರಮೇಶ್ವರ ರಾಜ್ ಅರಸ್, ಖಜಾಂಚಿ ಸಾಕ್ಷಾತ್ ಗೌಡ, ಸದಸ್ಯರಾದ ಪ್ರತಾಪ್ ಸಿದ್ದು, ಸುನೀಲ್ ಮಾಟಿಧನ್ ಸ್ಟೀವನ್, ಬಿಂದುಸಾರ, ಸುದೀನ್, ರಕ್ಷಾ ಫೌಂಡೇಶನ್ ಸಂಸ್ಥಾಪಕಿ ಸುಷ್ಮಾ.ಜಿ.ಎಮ್, ಮಾನಸ.ಎಲ್.ಜಿ, ಕರ್ನಾಟಕ ವಿಕ್ರಮಾದಿತ್ಯರೆಡ್ಡಿ ತೆಲಂಗಾಣ್, ಶಿವರಾಮ್ ಆಂದ್ರಪ್ರದೇಶ್, ಎ.ಸಿ.ವಿಶ್ವನಾಥ್ ಕರ್ನಾಟಕ, ಗಿರೀಶ್‌ಗೌಡ, ರಾಕೇಶ್ ಪಾಟೀಲ್ ಬೆಳಗಾವಿ ಆರ್ಮಿ, ಅಧ್ಯಕ್ಷ ಮತ್ತಿತರರು ಉಪಸ್ಥಿತರಿದ್ದರು, ನಾಗಶ್ರೀ ತ್ಯಾಗರಾಜ್ ಸ್ವಾಗತಿಸಿ ವಂದಿಸಿದರು.

National Spotlight Netball Games for South Zone

About Author

Leave a Reply

Your email address will not be published. Required fields are marked *

You may have missed