September 19, 2024

ಗುಂಗರಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಜಯಂತೋತ್ಸವ

0
ಗುಂಗರಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಜಯಂತೋತ್ಸವ

ಗುಂಗರಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಜಯಂತೋತ್ಸವ

ಚಿಕ್ಕಮಗಳೂರು: ಸ್ವಾತಂತ್ರ್ಯ ಪೂರ್ವದಲ್ಲಿ ಕೇವಲ ಭೂ ಮಾಲೀಕರಿಗೆ, ಪದವೀಧರರಿಗೆ ಹಾಗೂ ತೆರಿಗೆ ಪಾವತಿದಾರರಿಗೆ ಮಾತ್ರ ಮತದಾನ ಮಾಡುವ ಅವಕಾಶ ಇತ್ತು ಎಂದು ಕಾಂಗ್ರೆಸ್ ಕಿಸಾನ್ ಸೆಲ್ ಜಿಲ್ಲಾಧ್ಯಕ್ಷರಾದ ಟಿ.ಓ. ಭರತೇಶ್ ತಿಳಿಸಿದರು

ಬಿಳೇಕಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಗುಂಗರಹಳ್ಳಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೧೩೩ನೇ ಜಯಂತೋತ್ಸವವನ್ನು ಆಚರಿಸಿ ಮಾತನಾಡಿದರು.

ಬಡವರಿಗೆ, ಕೂಲಿಕಾರ್ಮಿಕರಿಗೆ, ಹಿಂದುಳಿದ ವರ್ಗದವರಿಗೆ, ದಲಿತರಿಗೆ ಹಾಗೂ ಶೋಶಿತರಿಗೆ ಮತದಾನ ಮಾಡುವ ಅವಕಾಶ ಇರಲಿಲ್ಲ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ಈ ದೇಶದ ಯಾವುದೇ ಜಾತಿ, ಮತ, ಧರ್ಮಗಳನ್ನು ಕಡೆಗಣಿಸದೆ ಸರ್ವರಿಗೂ ಮತದಾನದ ಹಕ್ಕನ್ನು ನೀಡಿದರು ಎಂದರು.

ಪ್ರಜಾಪ್ರಭುತ್ವಕ್ಕೆ ಹೊಸ ಮುನ್ನುಡಿ ಬರೆದ ಮಹಾನ್ ನಾಯಕ ಅಂಬೇಡ್ಕರ್ ಎಂದ ಅವರು, ಇಂದು ದೇಶದಲ್ಲಿ ಪ್ರಧಾನಿಯಾಗಿರಲಿ, ಶ್ರೀಮಂತರಾಗಲಿ, ಬಡವರಾಗಲಿ ಎಲ್ಲರಿಗೂ ಕೂಡ ಓಟು ಒಂದೇ ಮೌಲ್ಯ ಎಂಬುದನ್ನು ತೋರಿಸಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಿ, ಸದಸ್ಯರಾದ ಬಾನು, ಮಾದಯ್ಯ, ಬಿಳೇಕಲ್ಲಹಳ್ಳಿ ಪ್ರಕಾಶ್, ಡಿ.ಎಸ್.ಎಸ್ ಈಶ್ವರಪ್ಪ, ಕೃಷ್ಣಪ್ಪ, ಸೋಮು, ಸ್ಥಳೀಯ ಮುಖಂಡರಾದ ಮತ್ತಿತರರು ಇದ್ದರು.

Ambedkar Jayanthotsav in Gungarahalli village

About Author

Leave a Reply

Your email address will not be published. Required fields are marked *

You may have missed