September 19, 2024

ಕ್ಷೇತ್ರದಲ್ಲಿ ಸರ್ವಸ್ಪರ್ಶಿ ಅಭಿವೃದ್ಧಿಯ ಗುರಿ 160 ಕೋಟಿ ರೂಕಾಮಗಾರಿಗೆ ಮಂಜೂರಾತಿ

0
ಶಾಸಕ ಹೆಚ್.ಡಿ ತಮಯ್ಯ ಸುದ್ದಿಗೋಷ್ಠಿ

ಶಾಸಕ ಹೆಚ್.ಡಿ ತಮಯ್ಯ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಸರ್ವಸ್ಪರ್ಶಿ ಅಭಿವೃದ್ಧಿಯ ಗುರಿಯೊಂದಿಗೆ ತಾವು ಆಯ್ಕೆಯಾಗಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ೧೬೦ ಕೋಟಿಗೂ ಹೆಚ್ಚು ಮೊತ್ತದ ಅಭಿವೃದ್ಧಿ ಕಾಮಗಾರಿಗಳನ್ನು ಮಂಜೂರು ಮಾಡಿಸಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಹೆಚ್.ಡಿ ತಮಯ್ಯ ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವ? ತುಂಬಿದ ಹಿನ್ನೆಲೆಯಲ್ಲಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಪರ ಕಾರ್ಯಕ್ರಮಗಳ ೫ ಗ್ಯಾರಂಟಿ ಯೋಜನೆಗಳನ್ನು ಘೋ?ಣೆ ಮಾಡಿ ಯಶಸ್ವಿಯಾಗಿ ಅನು?ನಗೊಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ನೇತೃತ್ವದ ಸರ್ಕಾರ ಯಶಸ್ವಿ ಒಂದು ವ? ಪೂರೈಸಿದೆ ಎಂದರು.

ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದಂತೆ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಸಂಪೂರ್ಣವಾಗಿ ಅನು?ನಗೊಳಿಸಿರುವ ಜೊತೆಗೆ ಅಭಿವೃದ್ಧಿ ಕಾರ್ಯಗಳಿಗೂ ಅಗತ್ಯ ಇರುವ? ಹಣ ಬಿಡುಗಡೆ ಮಾಡಿದ್ದು, ರಾಜ್ಯದ ಜನರ ವಿಶ್ವಾಸದೊಂದಿಗೆ ಸರ್ವಸ್ಪರ್ಶಿ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದು ತಾವು ಅದೇ ಗುರಿಯೊಂದಿಗೆ ಕೆಲಸ ಮಾಡುತ್ತಿರುವುದಾಗಿ ಹೇಳಿದರು.

ನಮ್ಮ ರಾಜಕೀಯ ಗುರುಗಳಾದ ಡಿ.ಸಿ ಶ್ರೀಕಂಠಪ್ಪನವರ ಹಾದಿಯಲ್ಲಿ ತಾವು ಜನರಿಗೆ ಸ್ಪಂದಿಸಿ ಕೆಲಸ ಮಾಡುತ್ತಿದ್ದು, ಕ್ಷೇತ್ರದ ಅಭಿವೃದ್ಧಿಗೆ ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಪಕ್ಷದ ಎಲ್ಲಾ ಮುಖಂಡರ ಸಹಕಾರದೊಂದಿಗೆ ಪ್ರಾಮಾಣಿಕವಾಗಿ ಪ್ರಯತ್ನ ನಡೆಸುತ್ತಿರುವುದಾಗಿ ತಿಳಿಸಿದರು.

ಸರ್ಕಾರ ಅಧಿಕಾರಕ್ಕೆ ಬಂದ ಒಂದು ವ?ದ ಅವಧಿಯಲ್ಲಿ ಬಹುಪಾಲು ಸಮಯ ಚುನಾವಣೆ ಮತ್ತು ನೀತಿ ಸಂಹಿತೆ ಕಾರಣದಿಂದ ಅಭಿವೃದ್ಧಿ ಕಾರ್ಯಗಳನ್ನು ನಿರೀಕ್ಷಿತ ಮಟ್ಟದಲ್ಲಿ ಆರಂಭಿಸಲು ವಿಳಂಭವಾಗಿದೆ. ಆದರೂ ಕೂಡ ಅಗತ್ಯ ಕಾಮಗಾರಿಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದ್ದು ಚುನಾವಣಾ ನೀತಿ ಸಂಹಿತೆ ಅವಧಿ ಮುಗಿಯುತ್ತಿದ್ದಂತೆ ಎಲ್ಲಾ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದೆಂದು ಹೇಳಿದರು.

ಇದೇ ಅವಧಿಯಲ್ಲಿ ಕ್ಷೇತ್ರದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ೧೫ ಕೋಟಿ ರೂ ಮುಖ್ಯಮಂತ್ರಿಗಳ ವಿಶೇ? ನಿಧಿಯಲ್ಲಿ ಮಂಜೂರಾತಿ ದೊರೆತಿದೆ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ೨೦೨೩-೨೪ನೇ ಸಾಲಿನ ರಾಜ್ಯ ಹಣಕಾಸು ಆಯೋಗದಡಿ ೭೯.೧೭ ಲಕ್ಷ ರೂ ಕಾಮಗಾರಿ ಮುಕ್ತಾಯವಾಗಿದೆ ಎಂದರು.

ಹಿಂದಿನ ಸರ್ಕಾರದಲ್ಲಿ ಮಂಜೂರಾತಿ ದೊರೆತಿದ್ದ ಅನೇಕ ಕಾಮಗಾರಿಗಳು ಆರಂಭವಾಗಿರಲಿಲ್ಲ ಅಂತಹ ಕಾಮಗಾರಿಗಳಿಗೆ ಈಗಾಗಲೇ ಚಾಲನೆ ನೀಡಲಾಗಿದ್ದು. ತಾಲೂಕು ಪಂಚಾಯಿತಿ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಯಲ್ಲಿ ೯೩ ಲಕ್ಷ ರೂ ಮೊತ್ತದ ಕಾಮಗಾರಿ ಮುಕ್ತಾಯಗೊಂಡಿದೆ. ಇದೇ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳ ಉಳಿದ ರಸ್ತೆಗಳ ಅಭಿವೃದ್ಧಿಗಾಗಿ ೮೧ ಲಕ್ಷ ರೂಗಳನ್ನು ಕೆರೆಗಳ ವಾರ್ಷಿಕ ನಿರ್ವಹಣೆಗೆ ೧೫ ಲಕ್ಷ ರೂ ಎಸ್‌ಸಿಪಿಟಿಎಸ್‌ಪಿ ಯ ಯೋಜನೆಯಡಿ ೭೫ ಲಕ್ಷ ಕಾಮಗಾರಿಗೆ ಮಂಜೂರಾತಿ ದೊರೆತಿದೆ ಎಂದು ಮಾಹಿತಿ ನೀಡಿದರು.

ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ಕೆಂಪನಹಳ್ಳಿಯಿಂದ ತರೀಕೆರೆ ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಡಾಂಬರೀಕರಣ ಮಾಡಲು ೨೦೦ ಲಕ್ಷ ರೂ, ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿಗೆ ೨೦೦೦ ಲಕ್ಷ ಹಾಗೂ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆಗಳ ವಾರ್ಷಿಕ ನಿರ್ವಹಣೆಗಾಗಿ ೯೦.೬೫ ಲಕ್ಷ ರೂ ಮಂಜೂರು ಮಾಡಲಾಗಿದೆ ಎಂದರು.

ಜಿಲ್ಲಾ ತಾಲೂಕು ಹಾಗೂ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳ ಅಡಿಯಲ್ಲಿ ಮಂಜೂರಾತಿ ದೊರೆತಿದೆ. ಅರಣ್ಯ ಕಾಮಗಾರಿಗಳಿಗಾಗಿ ೫೦ ಲಕ್ಷ ರೂ, ಜಿಲ್ಲಾ ಸಂಕೀರ್ಣ ನಿರ್ಮಾಣಕ್ಕೆ ೮ ಕೋಟಿ, ನ್ಯಾಯಾಧೀಶರ ಗೃಹ ನಿರ್ಮಾಣಕ್ಕೆ ೩.೯೫ ಕೋಟಿ ರೂ ಮಂಜೂರಾತಿ ನೀಡಲಾಗಿದೆ ಎಂದು ವಿವರಿಸಿದರು.

ಡಿಎಸಿಜಿ ಪಾಲಿಟೆಕ್ನಿಕ್ ದುರಸ್ಥಿಗೆ ೪.೧೦ ಕೋಟಿ ರೂ, ಬಿಸಿಎಮ್ ಬಾಲಕಿಯರ ವಸತಿ ನಿಲಯಕ್ಕೆ ೧.೧೬ ಕೋಟಿ ರೂ, ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಮುಂದುವರಿದ ಕಾಮಗಾರಿಗಾಗಿ ೧೬ ಕೋಟಿ ರೂ ಹಣ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ವಿವಿಧ ಕಾಮಗಾರಿಗಳಿಗಾಗಿ ೧೧೧.೫೫ ಲಕ್ಷ ರೂ ಮಂಜೂರಾತಿ ನೀಡಿ, ೫೦ ಲಕ್ಷ ರೂ ಬಿಡುಗಡೆ ಮಾಡಲಾಗಿದೆ. ಶತಮಾನೋತ್ಸವ ಕ್ರೀಡಾಂಗಣದ ಕಾಂಪೌಂಡ್ ಹಾಗೂ ಚೈನ್‌ಲಿಂಕ್ ಪೆನ್ಸಿಂಗ್ ಅಳವಡಿಸಲು ೭೫ ಲಕ್ಷ ರೂ, ಸಿಂಥೆಟಿಕ್ ಕೋರ್ಟ್ ನಿರ್ಮಾಣಕ್ಕೆ ೪೫೦ ಲಕ್ಷಗಳ ಪೈಕಿ ೫೦ ಲಕ್ಷ ರೂ ಬಿಡುಗಡೆ ಮಾಡಲಾಗಿದೆ ಎಂದರು.

ಇಂದಿನ ಸರ್ಕಾರದಲ್ಲಿ ಮಂಜೂರಾತಿ ಆಗಿದ್ದ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಈ ಹಿಂದೆ ಹೇಗೆ ನಿಗದಿಯಾಗಿದ್ದ ೩೩೯.೧೪ ಕೋಟಿ ರೂ ಬದಲಿಗೆ ಹೆಚ್ಚುವರಿಯಾಗಿ ೪೫೫ ಕೋಟಿಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಈಗಾಗಲೇ ಹೆಚ್ಚುವರಿಯಾಗಿ ಮಂಜೂರಾತಿ ನೀಡಿರುವ ಹಣದಲ್ಲಿ ೫೯ ಕೋಟಿ ಬಿಡುಗಡೆ ಮಾಡಲಾಗಿದೆ. ಅದೇ ರೀತಿ ಮಲ್ಟಿ ಸ್ಪೆ?ಲಿಟಿ ಆಸ್ಪತ್ರೆಗೆ ೩ ಕಂತುಗಳಲ್ಲಿ ೨೫.೫ ಕೋಟಿ ರೂ ಹಣ ಬಿಡುಗಡೆ ಮಾಡಿದ್ದು ಈಗಾಗಲೇ ವೈದ್ಯಕೀಯ ಕಾಲೇಜಿನ ಕಾಮಗಾರಿಯನ್ನು ವೇಗವಾಗಿ ನಡೆಸುತ್ತಿದ್ದು, ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಹೆಚ್ಚುವರಿಯಾಗಿ ಹಣ ಬಿಡುಗಡೆ ಮಾಡಿದ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದರು.

ಅಟಲ್ ಭೂಜಲ್ ಯೋಜನೆಯಡಿ ೧.೨೫ ಕೋಟಿ ರೂ ಮುಖ್ಯಮಂತ್ರಿಗಳ ವಿಶೇ? ನಿಧಿಯಲ್ಲಿ ೩ ಕೋಟಿ ಮಂಜೂರಾತಿ ದೊರೆತಿದ್ದು, ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಕೆರೆಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದೆಂದು ಹೇಳಿದರು.

ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿಗೆ ೫ ಕೋಟಿ ಮುಸ್ಲಿಂ ಖಬರ್‌ಸ್ಥಾನ್ ಮಸೀದಿಗಳ ಅಭಿವೃದ್ಧಿಗೆ ೧.೭೦ ೭೦ ಕೋಟಿ ರೂ, ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳ ಜೀರ್ಣೋದ್ದಾರ ಹಾಗೂ ಅಭಿವೃದ್ಧಿಗಾಗಿ ೪.೦೫ ಕೋಟಿ ರೂ ಮಂಜೂರು ಮಾಡಲಾಗಿದೆ ಎಂದರು.
ಹಿಂದುಳಿದ ವರ್ಗಗಳ ಇಲಾಖೆಯಡಿ ಸಮುದಾಯ ಭವನಗಳ ನಿರ್ಮಾಣಕ್ಕೆ ೩ ಕೋಟಿ, ಹಿಂದುಳಿದ ವರ್ಗಗಳ ವಸತಿ ನಿಲಯಗಳ ದುರಸ್ಥಿಗೆ ೧೦೩.೮೦ ಲಕ್ಷ ರೂ ಮಂಜೂರು ಮಾಡಲಾಗಿದೆ ಎಂದು ಹೇಳಿದರು.

ನಗರದ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಅಭಿವೃದ್ಧಿಗೆ ೨೦ ಕೊಟ್ಟಿ ರೂ ಮಂಜೂರಾಗಿದ್ದು, ಸಧ್ಯದಲ್ಲೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು. ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣವಾಗಿರುವ ವಾಜಪೇಯಿ ವಸತಿ ಬಡಾವಣೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿ ಆರಂಭವಾಗಿದೆ. ನಗರಸಭೆಯ ಸೌಲಭ್ಯಕ್ಕಾಗಿ ೪೦೦ ಲಕ್ಷ, ಸ್ವಚ್ಛ ಭಾರತ್ ಮಿ?ನ್ ಯೋಜನೆಯಡಿ ೬೦ ಲಕ್ಷ ರೂ ಹಾಗೂ ಇಂಧನ ಇಲಾಖೆಯಲ್ಲಿ ಎಂಯುಎಸ್‌ಆರ್ ಸ್ಟೇ?ನ್ ನಿರ್ಮಾಣ ಸೇರಿದಂತೆ ಅನೇಕ ಕಾಮಗಾರಿಗಳಿಗೆ ಮಂಜೂರಾತಿ ದೊರೆತಿದ್ದು, ಚುನಾವಣಾ ನೀತಿ ಸಂಹಿತೆ ಮುಕ್ತಾಯವಾದ ತಕ್ಷಣ ವೇಗವಾಗಿ ಕಾಮಗಾರಿಗಳಿಗೆ ಚಾಲನೆ ಸಿಗಲಿದೆ ಎಂದರು.

ಇದಲ್ಲದೆ ಎಪಿಎಂಸಿಗೆ ಅನುದಾನ ನೀಡಲಾಗಿದೆ. ಸೂರು ಇಲ್ಲದವರಿಗೆ ನಿವೇಶನ ನೀಡಲು ವಿವಿಧ ಸ್ಥಳಗಳಲ್ಲಿ ಜಮೀನುಗಳನ್ನು ಗುರುತಿಸಿದ್ದು, ಸಧ್ಯದಲ್ಲೇ ನಿವೇಶನ ನೀಡುವ ಕಾರ್ಯಕ್ರಮ ಜಾರಿಗೆ ಬರಲಿದೆ ಎಂದು ಹೇಳಿದರು.

ದೈವಕೃಪೆಯಿಂದ ಒಳ್ಳೆ ಮಳೆಯಾಗುತ್ತಿದ್ದು, ಈಗಾಗಲೇ ಮಾದರಸನ ಕೆರೆ ನೀರು ಬರುತ್ತಿದೆ. ಇದೇ ರೀತಿ ಮುಂದೆ ಮಳೆಯಾದರೆ ಬೈರಾಪುರ ಪಿಕಪ್‌ನಿಂದ ಹಾಗೂ ದೇವಿಹಳ್ಳಿ ಕೆರೆ ತುಂಬಿ ಕರಗಡ ಏತ ನೀರಾವರಿ ಯೋಜನೆಯ ಪಂಪ್ ಚಾಲನೆ ಮಾಡಿರುವುದರಿಂದ ಕ್ಷೇತ್ರದ ಈಶ್ವರಹಳ್ಳಿ, ಬೆಳವಾಡಿ, ಕಳಸಾಪುರ, ದೇವನೂರು ಕೆರೆಗಳು ಭರ್ತಿಯಾಗಲಿವೆ ಎಂದು ಹೇಳಿದರು.

ಈ ರೀತಿಯಾಗಿ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದು, ಕಾಂಗ್ರೆಸ್ ಪಕ್ಷದ ಪರವಾಗಿ ತಮಗೆ ಮತ ನೀಡಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡುತ್ತಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ವಿಧಾನ ಪರಿ?ತ್ ಸದಸ್ಯೆ ಗಾಯಿತ್ರಿ ಶಾಂತೇಗೌq, ಹೆಚ್.ಪಿ ಮಂಜೇಗೌಡ, ರೂಬಿನ್ ಮೋಸಸ್, ಮಲ್ಲೇಶ್, ತನೂಜ್‌ನಾಯ್ಡು, ಮಹಡಿ ಮನೆ ಸತೀಶ್, ನಯಾಜ್‌ಅಹಮದ್, ಪ್ರವೀಣ್ ಕುಮಾರ್ ಇದ್ದರು.

160 crore sanctioned for all-round development in the field

About Author

Leave a Reply

Your email address will not be published. Required fields are marked *

You may have missed