September 19, 2024

ಬುದ್ಧನ ಮಾನವೀಯ ಸಂಕೇತಗಳು ವಿಶ್ವಕ್ಕೆ ಮಾದರಿ

0
ಬಿಎಸ್‌ಪಿ ಕಚೇರಿಯಲ್ಲಿ ಬುದ್ಧಪೂರ್ಣಿಮಾ ಜಯಂತಿ

????????????????????????????????????

ಚಿಕ್ಕಮಗಳೂರು: ಗೌತಮ ಬುದ್ಧ ಪರಿತ್ಯಾಗಿಯಾದವರು. ಪ್ರಕೃತಿ ನಡುವಿನ ನೈಸರ್ಗಿಕ ಬದುಕನ್ನು ತಮ್ಮಲ್ಲಿ ಅಳವಡಿಸಿಕೊಂಡು ಪ್ರಪಂಚಕ್ಕೆ ಸಂದೇಶ ಕೊಟ್ಟವರು ಎಂದು ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ. ರಾಧಾಕೃಷ್ಣ ಹೇಳಿದರು.

ನಗರದ ಜಿಲ್ಲಾ ಬಿಎಸ್‌ಪಿ ಕಚೇರಿಯಲ್ಲಿ ಬುದ್ಧಪೂರ್ಣಿಮಾ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಗುರುವಾರ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ದೇಶದ ಪ್ರಧಾನಿಗಳು ವಿದೇಶಗಳಲ್ಲಿ ಪ್ರವಾಸ ಕೈಗೊಂಡ ವೇಳೆಯಲ್ಲಿ ಬುದ್ಧ ನಾಡಿನವರೆಂದು ಹೆಮ್ಮೆ ಯಿಂದ ಹೇಳುವ ಮೂಲಕ ಗೌರವ ಸಲ್ಲಿಸುವ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಬುದ್ಧನ ತತ್ವ, ಸಂದೇಶಗಳನ್ನು ಯಥಾವತ್ತಾಗಿ ಸಂವಿಧಾನದಡಿ ಜಾರಿಗೊಳಿಸಿದರೆ ಭಾರತವು ಪ್ರಬುದ್ಧವಾಗಲಿ ಹೊರಹೊ ಮ್ಮಲಿದೆ ಎಂದು ತಿಳಿಸಿದರು.

ಬುದ್ಧನ ಉನ್ನತ ಆದರ್ಶಗಳು, ಅಹಿಂಸಾ ತತ್ವ, ಸಾಮರಸ್ಯದ ಸಂದೇಶಗಳು ಚಿರ ನೂತನ. ಅವರ ಮಾನವೀತೆಯ ಸಂಕೇತಗಳು ಇಡೀ ವಿಶ್ವಕ್ಕೆ ಅನ್ವಯವಾಗಲಿದೆ. ಬುದ್ದನು ಸಮಾನತೆ, ಪ್ರೀತಿ, ದಯೆ, ಸಹಿ ಷ್ಣುತೆಯ ಪ್ರತೀಕ. ಸೌಹಾರ್ದ, ಸಹಾನುಭೂತಿಯಿಂದ ಸಮಾಜಕ್ಕಾಗಿ ಸೇವೆ ಮಾಡುವ ಸ್ಪೂರ್ತಿಯನ್ನು ನೀಡಿದ್ದಾರೆ ಎಂದರು.

ದಾರ್ಶನಿಕ, ವಿರಾಗಿ ಭಗವಾನ್ ಗೌತಮ ಬುದ್ದರ ಆದರ್ಶಗಳನ್ನು ನಾವಿಂದು ಅಳವಡಿಸಿಕೊಳ್ಳಬೇ ಕು. ಅವರ ಶ್ರೇಷ್ಟ ಚಿಂತನೆಗಳು ಮುಂದಿನ ಪೀಳಿಗೆಗೂ ಮಾರ್ಗದರ್ಶನ ನೀಡಲಿವೆ ಎಂದ ಅವರು ಸಕಲ ಜೀವರಾಶಿಗಳು ಒಂದೇ ಎಂಬ ಮನೋಕಲ್ಪನೆಯನ್ನು ಹೊಂದಿದ ಮಹತ್ಮರು ಎಂದು ತಿಳಿಸಿದರು.

ಬುದ್ಧ ಪೂರ್ಣಿಮಾವನ್ನು ಭಾರತ, ಶ್ರೀಲಂಕಾ, ಥೈಲ್ಯಾಂಡ್, ಕಾಂಬೋಡಿಯಾ ಮತ್ತು ವಿಯೆಟ್ನಾಂ ಸೇರಿದಂತೆ ಪ್ರಪಂಚದಾದ್ಯಂತದ ಹಲವಾರು ರಾಷ್ಟ್ರಗಳಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕೆಲವು ದೇಶಗಳು ಬುದ್ಧ ಆದರ್ಶಗಳನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಪ್ರಗತಿ ಹೊಂದಿವೆ ಎಂದು ತಿಳಿ ಸಿದರು.

ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಮಾತನಾಡಿ ರಾಜಮನೆತನದ ಕುಟುಂಬದ ಜನಿಸಿದ ಭಗವಾನ್ ಬುದ್ಧರು, ಹೊರಗಿನ ಪ್ರಪಂಚದ ಅರಿವು ಕಂಡಿರಲಿಲ್ಲ. ಸಮಯ ಕಳೆದಂತೆ ಒಂದೊಮ್ಮೆ ರಾಜ್ಯದಲ್ಲಿ ಸಂಚಾರ ವೇಳೆಯಲ್ಲಿ ಜನಸಾಮಾನ್ಯರ ಸಂಕಟ, ಅನಾರೋಗ್ಯ, ವೃದ್ಧಾಪ್ಯ ಮತ್ತು ಸಾವು, ವಾಸ್ತವ ಗಳನ್ನು ಕಂಡು ಆಶ್ಚರ್ಯಕ್ಕೆ ಒಳಗಾಗಿದ್ದರು ಎಂದರು.

ಇದರಿಂದ ರಾಜ ಸ್ಥಾನಮಾನವನ್ನು ತ್ಯಜಿಸಿ, ಪ್ರಾಚೀನ ಭಾರತದ ಕಾಡಿನಲ್ಲಿ ಅಲೆದಾಡಿದರು, ವಿವಿಧ ಶಿಕ್ಷಕರ ಅಡಿಯಲ್ಲಿ ಧ್ಯಾನ ಮತ್ತು ತಪಸ್ಸನ್ನು ಮಾಡಿದರು. ಅಂತಿಮವಾಗಿ ಬೋಧಿ ವೃಕ್ಷದ ಕೆಳಗೆ ಕುಳಿತು ಧ್ಯಾನ ಮಾಡುವ ಮೂಲಕ ಜ್ಞಾನೋದಯವನ್ನು ಸಿದ್ಧಿಯನ್ನು ಪಡೆದುಕೊಂಡವರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಎಸ್ಪಿ ತಾಲ್ಲೂಕು ಅಧ್ಯಕ್ಷ ಹೆಚ್.ಕುಮಾರ್ ವಿಶ್ವಕ್ಕೆ ಶಾಂತಿ, ಬೋಧನೆ, ಅಹಿಂಸೆ ಸಂದೇಶವನ್ನು ಸಾರಿದ ಗೌತಮ ಬುದ್ಧರ ಸಂದೇಶ ಪ್ರಸ್ತುತ ಜಗತ್ತಿಗೆ ಅವಶ್ಯ ವಾಗಿದೆ ಎಂದ ಅವರು ಪ್ರತಿಯೊಬ್ಬರು ಜೀವನದಲ್ಲಿ ಬುದ್ಧನ ಚಿಂತನೆಗಳನ್ನು ಅಳವಡಿಸಿಕೊಂಡರೆ ಎಂತಹ ಕಷ್ಟವನ್ನು ಎದುರಿಸಲು ಮುಂದಾಗಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಉಡುಪಿ-ಚಿಕ್ಕಮಗಳೂರು ಸಂಯೋಜಕ ಗಂಗಾಧರ್, ಜಿಲ್ಲಾ ಉಪಾಧ್ಯಕ್ಷೆ ಕೆ.ಎಸ್.ಮಂಜುಳಾ, ತಾಲ್ಲೂಕು ಉಪಾಧ್ಯಕ್ಷ ಸಿದ್ದಯ್ಯ, ಕಾರ್ಯದರ್ಶಿ ಆರ್.ವಸಂತ್, ಖಜಾಂಚಿ ರತ್ನ, ಮುಖಂಡ ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.

Buddhapurnima Jayanti at BSP office

About Author

Leave a Reply

Your email address will not be published. Required fields are marked *

You may have missed