September 19, 2024

City council walks towards the public: ನಗರಸಭೆ ನಡಿಗೆ ಸಾರ್ವಜನಿಕರ ಕಡೆಗೆ- ವರಸಿದ್ಧಿ ವೇಣುಗೋಪಾಲ್

0

ಚಿಕ್ಕಮಗಳೂರುಎಕ್ಸ್‌ಪ್ರೆಸ್: ಮುಗುಳುವಳ್ಳಿ ನೀರು ಶುದ್ಧೀಕರಣ ಘಟಕಕ್ಕೆ ಕಾಂಪೌಂಡ್ ಮತ್ತು ರಸ್ತೆ ಕಾಮಗಾರಿಗೆ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಶಂಕುಸ್ಥಾಪನೆ ನೆರೆವೇರಿಸಿದರು.

ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ ಚಿಕ್ಕಮಗಳೂರು ನಗರದಲ್ಲಿ ಬಹುತೇಕ ಕಾಮಗಾರಿಗೆ ಚಾಲನೆಯನ್ನು ನೀಡಿದ್ದು, ಫೆಬ್ರವರಿ ಅಂತ್ಯದೊಳಗಾಗಿ ಪೂರ್ಣಗೊಳ್ಳಲಿದ್ದು, ನಗರಸಭೆಯ ಸ್ಥಳಗಳನ್ನು ಒತ್ತುವರಿ ಮಾಡದ ರೀತಿಯಲ್ಲಿ ರಕ್ಷಣೆಮಾಡುವ ನಿಟ್ಟಿನಲ್ಲಿ, ಕಾಂಪೌಂಡ್, ಗೇಟು, ಶೌಚಾಲಯ, ರಸ್ತೆ, ಮತ್ತು ಮೂಲಭೂತ ಸೌಕರ್ಯಗಳನ್ನು ಮಾಡಲಾಗುತ್ತಿದೆ, ನಗರದಲ್ಲಿರುವ ಪಾರ್ಕ್‌ಗಳ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಹಾಗೂ ಟಿಪ್ಪು ನಗರದಲ್ಲಿದ್ದ ಕಸಾಯಿ ಖಾನೆಯನ್ನು ನೆಲಸಮಮಾಡಿ ಪಾರ್ಕ್ ನಿರ್ಮಾಣ ಮಾಡಲು ಚಾಲನೆ ನೀಡಿ ಬಹುತೇಕ ಕೆಲಸ ಪೂರ್ಣಗೊಂಡಿದೆ, ನಗರೋತ್ತಾನದಲ್ಲಿ ಹಲವು ವಾರ್ಡ್‌ಗಳ ಪಾರ್ಕ್‌ಗಳನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದರು.

ನಗರಸಭೆ ಮೊದಲಬಾರಿಗೆ ನಗರೋತ್ತಾನದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣದ ಸಮುದಾಯ ಭವನಗಳ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆಯನ್ನು ನೀಡಲಾಗುತ್ತಿದ್ದು, ಅಮೃತ್ ಯೋಜನೆ ಹಾಗೂ ಯುಜಿಡಿ ಕಾಮಗಾರಿಯು ಬಹುತೇಕ ೭೦% ಮುಗಿದಿದ್ದು ಬಾಕಿ ಉಳಿದಿರುವ ಕಾಮಗಾರಿಯು ಡಿಸೆಂಬರ್ ಅಂತ್ಯದೊಳಗಾಗಿ ಮುಗಿಸಿಕೊಡುವಂತೆ ತಿಳಿಸಲಾಗಿದೆ, ಕುಡಿಯುವ ನೀರಿನ ಸಮಸ್ಯೆ ಬಹುತೇಕ ಕಡಿಮೆಯಾಗಿದ್ದು, ಅಲ್ಲಲ್ಲಿ ಒಂದೆರಡು ಇರುವ ಸಮಸ್ಯೆಗಳನ್ನು ಗಮನಿಸಿ ಸರಿಪಡಿಸಲಾಗುತ್ತಿದೆ ಎಂದರು.

ನಗರಸಭೆ ಆಯುಕ್ತ ಬಸವರಾಜ್ ಮಾತನಾಡಿ ನಗರಕ್ಕೆ ೮೦% ಭಾಗ ನೀರನ್ನು ಪೂರೈಸುವ ಮುಗುಳುವಳ್ಳಿ ಪಂಪ್‌ಹೌಸ್ ಆಗಿದ್ದು, ಸುರಕ್ಷತೆಯ ದೃಷ್ಟಿಯಿಂದ ಮುಗುಳುವಳ್ಳಿ ನೀರು ಶುದ್ಧೀಕರಣ ಘಟಕದ ಸುತ್ತಲು ಕಾಂಪೌಡ್, ರಸ್ತೆ ಮತ್ತು ಶೌಚಾಲಯ ನಿರ್ಮಾಣ ಕಾಮಗಾರಿಗೆ ೪೨ ಲಕ್ಷ ರೂಗಳ ಅನುದಾನ ನೀಡಿ ಕಾಮಗಾರಿಗೆ ಚಾಲನೆ ನೀಡಲಾಯಿತು, ಎರಡು ತಿಂಗಳಿನೊಳಗಾಗಿ ಕಾಮಗಾರಿ ಸಂಪೂರ್ಣಗೊಳ್ಳಲಿದೆ ಎಂದರು.

ಜನಪರ ಕಾಳಜಿಯಿಂದ ಅನೇಕ ಕೆಲಸಕಾರ್ಯಗಳನ್ನು ಮಾಡಿಕೊಂಡು ಬಂದಿದ್ದು, ಇನ್ನೂ ಹೆಚ್ಚಿನ ರೀತಿಯಲ್ಲಿ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ತಲುಪಿಸಲು ನಗರಸಭೆ ಸಾರ್ವಜನಿಕರ ಸೇವೆ ಮಾಡುವ ನಿಟ್ಟಿನಲ್ಲಿ, ನಗರಸಭೆ ಜನಸ್ನೇಹಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇಂದಿನಿಂದಲೇ ನಗರಸಭೆ ನಡಿಗೆ ಸಾರ್ವಜನಿಕರ ಕಡೆಗೆ ಎಂಬ ಕಾರ್ಯಕ್ರಮವನ್ನು ಆಯೋಜನೆಮಾಡಲಾಗಿದೆ, ಪ್ರಥಮವಾಗಿ ಇಂದು ಸಂಜೆ ೫.೩೦ಕ್ಕೆ ಮೊದನೆಯ ವಾರ್ಡ್‌ನಿಂದ ಜನಸಂಪರ್ಕ ಸಭೆಯನ್ನು ಶಾಸಕ ಸಿ.ಟಿ.ರವಿ ಉದ್ಘಾಟಿಸಲಿದ್ದಾರೆ, ಇಡೀ ನಗರದಲ್ಲಿ ಜನಸಂಪರ್ಕ ಸಭೆ ನಡೆಸಿ ಸ್ಥಳದಲ್ಲಿಯೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದೆಂದು ತಿಳಿಸಿದರು.ಈ ಸಂದರ್ಭದಲ್ಲಿ ಇಂಜಿನಿಯರ್ ಚಂದನ್, ಮಿಥುನ, ಗುತ್ತಿಗೆದಾರ ಪ್ರಕಾಶ್ ಇತರರು ಉಪಸ್ಥಿತರಿದ್ದರು.

City council walks towards the public

About Author

Leave a Reply

Your email address will not be published. Required fields are marked *

You may have missed