September 19, 2024

ಕುವೆಂಪು ಕಲಾಮಂದಿರದಲ್ಲಿ ತಲ್ಕಿ ನಾಟಕ ಪ್ರದರ್ಶನ

0
ಲೈಂಗಿಕತೆ ಅಲ್ಪಸಂಖ್ಯಾತ ಸಮುದಾಯದ ಮೇಘ ಮಲ್ನಾಡ್ ಸುದ್ದಿಗೋಷ್ಠಿ

ಲೈಂಗಿಕತೆ ಅಲ್ಪಸಂಖ್ಯಾತ ಸಮುದಾಯದ ಮೇಘ ಮಲ್ನಾಡ್ ಸುದ್ದಿಗೋಷ್ಠಿ

ಚಿಕ್ಕಮಗಳೂರು:  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಅಭಿನಯ ದರ್ಪಣ ಯುವ ವೇದಿಕೆ ಜೂನ್.೧ ರಂದು ಶನಿವಾರ ಸಂಜೆ ೬.೩೦ ನಗರದ ಕುವೆಂಪು ಕಲಾಮಂದಿರದಲ್ಲಿ ತಲ್ಕಿ ಎಂಬ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ವೇದಿಕೆ ಅಧ್ಯಕ್ಷ ವಿನಯ್‌ಕುಮಾರ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಲೈಂಗಿಕತೆ ಅಲ್ಪಸಂಖ್ಯಾತ ಸಮುದಾಯದವರು ಅತಿ ಹೆಚ್ಚು ಪ್ರೀತಿಸುವ, ಮಾಂಸದಿಂದ ತಯಾರು ಮಾಡುವ ಆಹಾರ ಪದಾರ್ಥದ ಹೆಸರು ತಲ್ಕಿ. ನೃತ್ಯ ಕಾರ್ಯಕ್ರಮದ ಮೂಲಕ ತೆರವುಗೊಂಡ ಟ್ರುಥ್ ಡೀಮ್ ಪ್ರಾಜೆಕ್ಟ್‌ನ ಮುಂದಿನ ಭಾಗವಾಗಿ ತಲ್ಕಿ ನಾಟಕ ರೂಪಗೊಂಡಿದೆ ಎಂದು ಮಾಹಿತಿ ನೀಡಿದರು.

ಸುಮಾರು ೫೫ ವ? ದಾಟಿದ ಸಮುದಾಯದ ಸದಸ್ಯರನ್ನು ಒಟ್ಟುಗೂಡಿಸಿ ಒಂದು ನಾಟಕ ಕಟ್ಟಿ ಅವರೇ ಅಭಿನಯಿಸಿ ಈ ನಾಟಕದ ಮೂಲಕ ಅವರ ಕನಸುಗಳು ಮತ್ತೆ ಮತ್ತೆ ನಿಜವಾಗಿಸಬೇಕೆನ್ನುವ ವಿಶೇ? ಆಶಯಕ್ಕೆ ಶ್ರೀಜಿತ್ ಸುಂದರಂ ಅವರ ನಿರ್ದೇಶನ ಕೈಜೋಡಿಸಿದೆ ಎಂದರು.

ಸಮುದಾಯದ ಹಿರಿಯರನ್ನು ಒಳಗೊಂಡ ನಾಟಕವಾದ್ದರಿಂದ ಸಮುದಾಯದ ಸುಂದರ ಸಾಂಸ್ಕೃತಿಕ ಚಿತ್ರಣವನ್ನು ಕಟ್ಟಿಕೊಡುವ ಸಾಧ್ಯತೆಯನ್ನು ಕಂಡುಹಿಡಿದು, ಇದನ್ನು ಸಫಲಗೊಳಿಸಲು ನಿರ್ದೇಶಕ ಶ್ರೀಜಿತ್ ಸುಂದರಂ ಅವರ ಸಮುದಾಯದೊಟ್ಟಿಗಿನ ಅಗಾಧ ಅನುಭವ ನೆರವಾಗಿದೆ. ಈ ಸಾಂಸ್ಕೃತಿಕ ಚಿತ್ರಣದ ಅಂಗವಾಗಿ ಆಹಾರ ಮಾತ್ರವಲ್ಲದೆ, ಯಾವುದೇ ಲಿಪಿಯಲ್ಲಿ ಇಲ್ಲದ ಲೈಂಗಿಕತೆ ಅಲ್ಪಸಂಖ್ಯಾತ ಸಮುದಾಯದವರು ಬಳಸುವ ಭಾ?ಯು ವಿಶೇ?ವಾಗಿ ಎಂದು ಕಾಣುತ್ತದೆ ಎಂದು ಹೇಳಿದರು.

ಸಂಸ್ಕೃತಿ ಮಾತ್ರವಲ್ಲದೆ ಸಮಾಜದಲ್ಲಿ ತಾವು ಅನುಭವಿಸುತ್ತಿರುವ ತಾರತಮ್ಯಗಳು ಹಾಗೂ ಹಲವಾರು ಭದ್ರತಾ ಸಮಸ್ಯೆಗಳನ್ನು ಉಲ್ಲೇಖಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಸಮುದಾಯದ ಯುವ ಪೀಳಿಗೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಆತ್ಮಹತ್ಯೆ ಪ್ರಕರಣಗಳಿಂದ ನೊಂದಿರುವ ಹಿರಿಯರು ಇದರ ಬಗ್ಗೆ ಕಾಳಜಿಯನ್ನು ವ್ಯಕ್ತಪಡಿಸಲು ತಲ್ಕಿ ನಾಟಕವು ಅನುವುಮಾಡಿಕೊಟ್ಟಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮೇಘ ಮಲ್ನಾಡ್, ಪ್ರೀತಂ, ಫಾತಿಮನಾಜಿಯ ಉಪಸ್ಥಿತರಿದ್ದರು

Talki play at Kuvempu Kalamandir

About Author

Leave a Reply

Your email address will not be published. Required fields are marked *

You may have missed