September 19, 2024
ಅಬ್ದುಲ್ ಅಜೀಜ್

ಅಬ್ದುಲ್ ಅಜೀಜ್

ಚಿಕ್ಕಮಗಳೂರು: ಮರ ಕಡಿಯುವಾಗ ಮರ ಬಿದ್ದು ಯುವಕರೊಬ್ಬರು ಸಾವನ್ನಪ್ಪಿದ ಘಟನೆ ಮೂಡಿಗೆರೆ ತಾಲೂಕಿನ ಹೆಗ್ಗುಡ್ಲು ಎಸ್ಟೇಟಿನಲ್ಲಿ ನಡಯಿತು

ಅಬ್ದುಲ್ ಅಜೀಜ್ (೨೦) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಕೇರಳದಿಂದ ಟಿಂಬರ್ ಕಡಿಯಲು ಅಪ್ಪ-ಮಗ ಬಂದಿದ್ದರು ಎನ್ನಲಾಗಿದೆ.

ಅಪ್ಪ ಮರ ಕತ್ತರಿಸುತ್ತಿದ್ದು, ಈ ವೇಳೆ ಮಗ ಕೆಳಗೆ ನಿಂತಿದ್ದ. ಈ ವೇಳೆ ಮರ ಆಕಸ್ಮಿಕವಾಗಿ ಅಬ್ದುಲ್ ಅಜೀಜ್ ಅವರ ಮೇಲೆ ಬಿದ್ದಿದೆ. ಪರಿಣಾಮವಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆ ಸಂಬಂಧ ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

A youth fell and died while cutting a tree

 

About Author

Leave a Reply

Your email address will not be published. Required fields are marked *

You may have missed