September 19, 2024

ಅಂಬೇಡ್ಕರ್ ತತ್ವಸಿದ್ಧಾಂತಗಳು ಹರಿಕಥೆಯಾಗದಿರಲಿ

0
ಅಂಬೇಡ್ಕರ್ ಸಮುದಾಯ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಅಧ್ಯಾಯನ ಶಿಬಿರ

ಅಂಬೇಡ್ಕರ್ ಸಮುದಾಯ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಅಧ್ಯಾಯನ ಶಿಬಿರ

ಚಿಕ್ಕಮಗಳೂರು: ಅಂಬೇಡ್ಕರ್ ಬದುಕಿನುದ್ದಕ್ಕೂ ಹೋರಾಟ ನಡೆಸಿದ ತತ್ವಸಿದ್ದಾಂತ ಗಳು ಹರಿಕಥೆಯಾಗಬಾರದು. ಜೀವನದ ಅವಿಭಾಜ್ಯ ಅಂಗವಾಗಿ ಸಮಾಜದಲ್ಲಿ ಬದಲಾವಣೆ ಮೂಡಿಸುವ ಸಾಧನವಾಗಬೇಕು ಎಂದು ಸಹಾಯಕ ಪ್ರಾಧ್ಯಾಪಕ ಪ್ರೊ. ಜಿ.ಶ್ರೀನಿವಾಸ್ ಹೇಳಿದರು.

ತಾಲ್ಲೂಕಿನ ಮತ್ತಾವರ ಗ್ರಾಮದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾನುವಾರ ಭೀಮ್ ಆರ್ಮಿ, ಚಿಕ್ಕಮಗಳೂರು ಸಹಯೋಗದಲ್ಲಿ ಏರ್ಪಡಿಸಿದ್ದ ಡಾ|| ಬಿ.ಆರ್.ಅಂಬೇಡ್ಕರ್ ಕುರಿತು ಅಧ್ಯಾಯನ ಶಿಬಿರದಲ್ಲಿ ಪಾಲ್ಗೊಂಡು ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

ರಾಷ್ಟ್ರದ ದೀನದಲಿತರು, ಬಡವರು ಹಾಗೂ ಹಿಂದುಳಿದ ವರ್ಗದವರಿಗೆ ಕತ್ತಲೆಯಿಂದ ಬೆಳಕಿನೆಡೆಗೆ ದಾರಿ ತೋರಿದವರು ಅಂಬೇಡ್ಕರ್ ಎಂದ ಅವರು ಕುಟುಂಬವನ್ನು ತ್ಯಜಿಸಿ ಸರ್ವರಿಗೂ ಸಮಾ ನತೆ, ಹಕ್ಕು, ಸ್ವಾತಂತ್ರ್ಯ ಹಾಗೂ ಮಂದಿರಗಳಿಗೆ ಮುಕ್ತವಾಗಿ ತೆರಳಲು ಸಂವಿಧಾನದ ಮೂಲಕ ಅವಕಾಶ ಕಲ್ಪಿಸಿ ಬದು ಕನ್ನು ಜನಾಂಗಕ್ಕೆ ಮುಡಿಪಿಟ್ಟವರು ಎಂದರು.

ಸ್ವಾತಂತ್ರ್ಯ ಪೂರ್ವದ ಕಾಲದಲ್ಲಿ ಪ್ರಜಾಪ್ರಭುತ್ವವನ್ನು ಬಲಿಷ್ಟಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರದ ಪ್ರತಿ ಜನ ಸಾಮಾನ್ಯರಿಗೂ ಮತದಾನದ ಹಕ್ಕು, ಶಿಕ್ಷಣ, ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿಗೆ ಹೋರಾಡಿದ ನಾಯ ಕ. ಅಲ್ಲದೇ ಸಾಮಾಜಿಕ ಬಹಿಷ್ಕಾರ ನಿಷೇಧಿಸಿ ನಾವೆಲ್ಲರೂ ಭಾರತೀಯರ ಎಂಬ ಆಲೋಚನೆಯನ್ನು ಬಿತ್ತಿದ ಮಹಾಪುರುಷ ಎಂದು ತಿಳಿಸಿದರು.

ಅಂಬೇಡ್ಕರ್‌ರವರು ದೇಶದ ಜನತೆಗೆ ಸುಸ್ಥಿರ ಬದುಕನ್ನು ರೂಪಿಸುವ ಕನಸು ಹೊತ್ತಿದ್ದರು. ಅನೇಕ ಅವಮಾನ, ಮುಜುಗರ, ಅಸ್ಯಶ್ಯರೆಂಬ ಶೋಷಣೆಯ ನಡುವೆ ಉನ್ನತ ವಿದ್ಯಾಭ್ಯಾಸವನ್ನು ಪೂರೈಸಿ ಜನಾಂ ಗದ ಏಳಿಗೆಗೆ ಶ್ರಮಿಸಿದವರ ಆದರ್ಶ, ಸಂದೇಶಗಳನ್ನು ಇಂದಿನ ಯುವಪೀಳಿಗೆ ಕೇವಲ ಜಯಂತಿಗಳಲ್ಲಿ ನೃತ್ಯಕ್ಕೆ ಸೀಮಿತಗೊಳಿಸದೇ ಪಸರಿಸುವ ಕಾರ್ಯ ಮಾಡಬೇಕಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಅಸೃಶ್ಯ ರೋಗವೆಂಬುದು ಮೇಲ್ವರ್ಗದವರಿಗೆ ಬರುತ್ತಿದ್ದರೆ ಸರ್ಕಾರಗಳು ನೋ ವುಂಡ ದಲಿತ ಸಮುದಾಯಗಳಿಗೆ ಚಿಕಿತ್ಸೆ ಕೊಡುವ ಕೆಲಸ ಮಾಡುತ್ತಿದೆ. ಮೇಲು-ಕೀಳು ಎಂಬ ಭಾವನೆ ಗಳನ್ನು ತುಂಬಿರುವ ರೋಗಗ್ರಸ್ಥ ವರ್ಗಕ್ಕೆ ಗಮನಹರಿಸಿದರೆ ಮಾತ್ರ ಸ್ವಾಸ್ಥ್ಯ ಸಮಾಜ ಉಳಿಯಲು ಸಾಧ್ಯ ಎಂದು ಹೇಳಿದರು.

ಹಿಂದಿನ ಕಾಲಘಟ್ಟದಲ್ಲಿ ವೃತ್ತಿಗನುಸಾರ ಅವರವರ ಜಾತೀಯನ್ನು ಸೃಷ್ಟಿಸಲಾಗಿತ್ತು. ಆದರೆ ಇತ್ತೀ ಚಿನ ದಿನಗಳಲ್ಲಿ ಪಾಲಕರ ಕೆಲಸವನ್ನು ಮಕ್ಕಳು ಮಾಡಲೇಬೇಕೆಂಬ ಒತ್ತಾಸೆಯೆನಿಲ್ಲ. ಸಮಾಜದ ವಿಭಿನ್ನ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವುದಕ್ಕೆ ಅಡಿಪಾಯ ಹಾಕಿದವರೇ ಡಾ|| ಬಿ.ಆರ್.ಅಂಭೇಡ್ಕರ್ ಎಂದು ಬಣ್ಣಿ ಸಿದರು.

ಸಂವಿಧಾನ ರಚನೆಗೂ ಮುನ್ನ ಗಾಂಧೀಜೀಯವರ ಜೊತೆ ದುಂಡುಮೇಜಿನಲ್ಲಿ ಚರ್ಚಿಸಿದ ಅಂಬೇ ಡ್ಕರ್‌ರವರು ಪದವೀಧರರು, ತೆರಿಗೆ ಕಟ್ಟುವ ಹಾಗೂ ಜಮೀನುದಾರರಿಗೆ ಮಾತ್ರ ಸೀಮಿತಗೊಳಿಸಿದ್ದ ಮತ ದಾನ ಹಕ್ಕನ್ನು ರಾಷ್ಟ್ರದ ಪ್ರತಿಯೊಬ್ಬ ಪ್ರಜೆಗೆ ಹಸ್ತಾಂತರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಭೀಮ್ ಆರ್ಮಿ ಗೌರವಾಧ್ಯಕ್ಷ ಹೊನ್ನೇಶ್ ಮಾತನಾಡಿ ಗ್ರಾಮದ ಯುವಕರು, ಮಹಿಳೆಯರು ಹಾ ಗೂ ಜನಾಂಗದ ಸಾಮಾಜಿಕ ಹಕ್ಕುಗಳ ಬಗ್ಗೆ ಸಮಗ್ರ ಅರಿವು ಮೂಡಿಸುವ ಸಲುವಾಗಿ ಸುಮಾರು ೧೫ ಕ್ಕೂ ಹೆಚ್ಚು ಗ್ರಾಮಗಳಲ್ಲಿ ಅಂಭೇಡ್ಕರ್ ಅಧ್ಯಾಯನ ಶಿಬಿರ ಏರ್ಪಡಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಬುದ್ಧ, ಬಸವ ಹಾಗೂ ಅಂಬೇಡ್ಕರ್‌ರವರ ಜಯಂತಿಗಳಲ್ಲಿ ಸಮಾನತೆಯ ಜಾಗೃತಿ ಮೂಡಿಸಲಾ ಗುತ್ತಿದೆ. ಇಂದಿನ ಕಾಲಘಟ್ಟದಲ್ಲಿ ದಲಿತರನ್ನು ಕೇವಲ ಮತಬ್ಯಾಂಕ್‌ಗಳಾಗಿ ಬಳಸಿಕೊಂಡು ಸವಲತ್ತು ಒದಗಿ ಸದೇ ನಾಟಕವಾಡುತ್ತಿರುವ ಸರ್ಕಾರಗಳಿಗೆ ಬಿಸಿ ಮುಟ್ಟಿಸುವ ಸಲುವಾಗಿ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಇಂದಿಗೂ ದಲಿತರು ಹಾಗೂ ಹಿಂದುಳಿದವರಿಗೆ ಹಲವಾರು ಮಂದಿಗೆ ಭೂಮಿ, ನಿವೇಶ ನವಿಲ್ಲದೇ ಪರಿತಪಿಸುವಂತಾಗಿದೆ. ಜೀವನ ಸುಧಾರಣೆಗಾಗಿ ಕೇವಲ ೧-೨ ಎಕರೆ ಒತ್ತುವರಿಯನ್ನು ಜಾಗ ವನ್ನು ತೆರವುಗೊಳಿಸುವ ಸರ್ಕಾರ, ಬಲಾಡ್ಯರ ನೂರಾರು ಎಕರೆ ಪ್ರದೇಶವನ್ನು ಒಪ್ಪಂದದ ಮೇರೆಗೆ ನೀಡುತ್ತಿದೆ ಎಂದರು.

ಈ ಸಂದರ್ಭದಲ್ಲಿ ಭೀಮ್ ಆರ್ಮಿ ತಾಲ್ಲೂಕು ಅಧ್ಯಕ್ಷ ರಮೇಶ್, ಯುವಘಟಕದ ಅಧ್ಯಕ್ಷ ಪ್ರವೀಣ್, ಸದಸ್ಯರುಗಳಾದ ಹುಣಸೇಮಕ್ಕಿ ಲಕ್ಷ್ಮಣ್, ಸುಧೀರ್, ಕುಮಾರ್, ಅಂಬಳೆ ಗ್ರಾ.ಪಂ. ಉಪಾಧ್ಯಕ್ಷೆ ಮೀನಾಕ್ಷಿ, ಗ್ರಾಮದ ಹಿರಿಯ ಮುಖಂಡ ಸಗನಯ್ಯ, ಮುಖಂಡರಾದ ಮಧು, ಪ್ರಕಾಶ್, ಚಿದಾನಂದ್, ಬ್ಯಾಂಕ್ ಚಂ ದ್ರಣ್ಣ ಮತ್ತಿತರರಿದ್ದರು.

Chapter camp on Dr. BR Ambedkar at Ambedkar Community Bhavan

About Author

Leave a Reply

Your email address will not be published. Required fields are marked *

You may have missed