September 19, 2024

ಭ್ರಷ್ಟಚಾರ ಬಯಲಿಗೆಳೆಯುವ ಶಕ್ತಿಯಿದೆ ವಕೀಲರಿಗಿದೆ

0
ಎಸ್.ಎಲ್.ಬೋಜೇಗೌಡಗೆ ವಕೀಲರ ಸಂಘದಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ

ಎಸ್.ಎಲ್.ಬೋಜೇಗೌಡಗೆ ವಕೀಲರ ಸಂಘದಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ

ಚಿಕ್ಕಮಗಳೂರು:  ವಕೀಲರ ವೃತ್ತಿ ಅತ್ಯಂತ ಪವಿತ್ರವಾದುದು. ಕಕ್ಷಿಗಾರರ ಬದುಕು ಅನ್ಯಾಯಕ್ಕೆ ಒಳಗಾದ ವೇಳೆಯಲ್ಲಿ ಸೂಕ್ತವಾಗಿ ವಾದ ಮಂಡಿಸಿ ನ್ಯಾಯ ಒದಗಿಸುವ ಮೂಲಕ ವಕೀಲರು ಸಮಾಜಕ್ಕೆ ಮಾದರಿಯಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಎರಡನೇ ಬಾರಿಗೆ ಆಯ್ಕೆಗೊಂಡ ನೈರುತ್ಯ ಶಿಕ್ಷಕರ ಕ್ಷೇತ್ರದ ಸದಸ್ಯ ಎಸ್.ಎಲ್.ಬೋಜೇಗೌಡ ಅವರಿಗೆ ವಕೀಲರ ಸಂಘದಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಗೌರವ ಸ್ವೀಕರಿಸಿ ಅವರು ಮಾತನಾಡಿದರು.

ವಕೀಲರ ಸಂಘ ಹಾಗೂ ತಮಗೂ ಅವಿಭಾವನ ಸಂಬಂಧವಿದೆ. ಇಂದು ರಾಜಕಾರಣ ಅಥವಾ ಇನ್ಯಾವುದೇ ಕ್ಷೇತ್ರದಲ್ಲಿ ಹೆಚ್ಚು ಸಾಧನೆ ಗಳಿಸಲು ಮೂಲ ಕತೃವೇ ವಕೀಲರ ಜೊತೆಗಿನ ಒಡನಾಟ ಹಾಗೂ ಸಂಘದಲ್ಲಿ ಹಲವಾರು ವರ್ಷಗಳ ಸಲ್ಲಿಸಿದ ಸೇವೆಯೇ ಮೂಲ ಎಂದರು.

ರಾಜಕಾರಣಿಗಳ ಹಾಗೂ ಸರ್ಕಾರದ ಭ್ರಷ್ಟಚಾರವನ್ನು ಬಯಲಿಗೆಳೆಯುವ ಶಕ್ತಿ ವಕೀಲರ ವೃತ್ತಿಗಿದೆ. ಸಮಾಜದಲ್ಲಿ ಭ್ರಷ್ಟಮುಕ್ತ ಹಾಗೂ ಸಾಮಾಜಿಕ ನ್ಯಾಯವನ್ನು ಸಮಪರ್ಕವಾಗಿ ನಿಭಾಯಿಸಿದರೆ ಉತ್ತಮ ವಕೀಲರಾಗಲು ಸಾಧ್ಯ ಎಂದ ಅವರು ಆಸೆ, ಆಮಿಷಗಳನ್ನು ಒಳಗಾಗದೇ ನ್ಯಾಯಸಮ್ಮತ ವಾದಗಳನ್ನು ಮಂಡಿಸಲು ಮುಂದಾಗಬೇಕು ಎಂದರು.

ವಕೀಲರಿಗೆ ಸಮಾಜದಲ್ಲಿ ಬಹಳಷ್ಟಿ ಬೆಲೆಯಿದೆ. ಕಪ್ಪು ಕೋಟ್ ಧರಿಸಿದರೆ ಘನತೆ, ಗೌರವ ಹೆಚ್ಚು ತ್ತದೆ. ಇಂದಿನ ಯುವ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ವಕೀಲ ವೃತ್ತಿಗೆ ಧಾವಿಸುತ್ತಿರುವ ಹೆಮ್ಮೆಯ ಸಂಗತಿ. ಅದೇ ರೀತಿ ಹಿರಿಯ ವಕೀಲರ ಸಲಹೆ, ಸಹಕಾರ ಹಾಗೂ ಮಾರ್ಗದರ್ಶನ ಪಡೆಯಬೇಕು ಎಂದು ಕಿವಿ ಮಾತು ಹೇಳಿದರು.

ಮನುಷ್ಯನ ನಾಲ್ಕು ದಿನದ ಬಾಳಿನಲ್ಲಿ ವಕೀಲರು ಒಟ್ಟಾಗಿ ಒಂದೇ ನೆಲೆಗಟ್ಟಿನಲ್ಲಿ ಕೆಲಸ ಮಾಡಿದರೆ ಸಂಬಂಧಗಳು ಶಾಶ್ವತವಾಗಿ ಉಳಿಯಲು ಸಾಧ್ಯ. ಸಮಾಜದ ಮುಖ್ಯವಾಹಿನಿಯಲ್ಲಿ ಸ್ವಾಸ್ಥ್ಯ ಕಾಪಾಡಲು ವಕೀಲರು ಸದ್ಗುಣಗಳನ್ನು ಮೈಗೂಡಿಸಿಕೊಂಡು ಮುನ್ನಡೆದರೆ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದು ಎಂದು ತಿಳಿಸಿದರು.

ವಕೀಲರು ಭಾವೈಕ್ಯತೆ ದೃಷ್ಟಿಯಲ್ಲಿ ನಾಡನ್ನು ಕಟ್ಟುವ ಕೆಲಸ ಮಾಡಬೇಕು. ಮುಂದಿನ ಪೀಳಿಗೆಗೆ ವಕೀ ಲ ವೃತ್ತಿಗೆ ಆಗಮಿಸುವ ಯುವಜನಾಂಗ ಹೆಮ್ಮೆಪಡಬೇಕು. ಸಣ್ಣಪುಟ್ಟ ಸಮಸ್ಯೆಗಳನ್ನು ವೃತ್ತಿಯಲ್ಲಿ ಎದುರಾ ಗುವ ಸಾಧ್ಯತೆಯಿರುವ ಕಾರಣ ದೃತಿಗೆಡಬಾರದು. ವಕೀಲರ ಸಂಘದ ಬೆಳವಣಿಗೆ ನಿಟ್ಟಿನಲ್ಲಿ ೫ ಲಕ್ಷ ರೂ. ದೇಣಿಗೆ ನೀಡಲಾಗುವುದು ಎಂದು ಭರವಸೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ ಮಾತನಾಡಿ ವಕೀಲರ ಶ್ರೇಯೋಭಿವೃದ್ದಿ ಗಟ್ಟಿಗೊಳಿ ಸುವ ನಿಟ್ಟಿನಲ್ಲಿ ಬೋಜೇಗೌಡರ ಕೊಡುಗೆ ಅಪಾರವಿದೆ. ಬೇಡಿಕೆಗಳನ್ನು ಈಡೇರಿಸುವ ಸಜ್ಜನ ವ್ಯಕ್ತಿತ್ವವಿದೆ. ಅಲ್ಲದೇ ಸಂಕಷ್ಟದ ಸಮಯದಲ್ಲೂ ಬೆನ್ನುಲುಬಾಗಿ ಜೊತೆಗಿದ್ದು ಸೂಕ್ತ ಮಾರ್ಗದರ್ಶ ನೀಡುತ್ತಾ ನೆರವಾ ದವರು ಎಂದು ತಿಳಿಸಿದರು.

ಇಂದಿನ ಯುವ ವಕೀಲರಿಗೆ ಕ್ರಿಮಿನಲ್ ಲಾ ಕುರಿತು ಕಾರ್ಯಾಗಾರವನ್ನು ಏರ್ಪಡಿಸಲು ಅನುಕೂ ಲ ಕಲ್ಪಿಸಿಕೊಡಬೇಕು, ನೂತನ ನ್ಯಾಯಾಲಯದ ಕಾಮಗಾರಿ ಪ್ರಗತಿಯಲ್ಲಿದ್ದು ಪೂರ್ಣಗೊಂಡ ಬಳಿಕ ಸ್ಥಳಾಂತರಿಸಬೇಕು ಹಾಗೂ ನ್ಯಾಯಾಲಯ ಸಮೀಪದ ತಿರುವಿನ ರಸ್ತೆಯಲ್ಲಿ ಸ್ವಲ್ಪ ಜಾಗದ ಸಮಸ್ಯೆಯಿರುವ ಹಿನ್ನೆಲೆಯಲ್ಲಿ ಬಗೆಹರಿಸಿಕೊಡಬೇಕು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕೆ.ಎಸ್.ಶರತ್‌ಚಂದ್ರ, ಕಾರ್ಯದರ್ಶಿ ಆರ್.ಅನಿಲ್‌ಕುಮಾ ರ್, ಖಜಾಂಚಿ ದೀಪಕ್, ಸಹ ಕಾರ್ಯದರ್ಶಿ ಎನ್.ವಿ.ಪ್ರಿಯದರ್ಶಿನಿ ಹಾಗೂ ಕಾರ್ಯಕಾರಿ ಸಮಿತಿ ಸದ ಸ್ಯರುಗಳು ಹಾಗೂ ಹಿರಿಯ ಹಾಗೂ ಕಿರಿಯ ವಕೀಲರುಗಳು ಉಪಸ್ಥಿತರಿದ್ದರು.

Lawyers have the power to expose corruption

 

About Author

Leave a Reply

Your email address will not be published. Required fields are marked *

You may have missed