September 19, 2024

Free from the curse of exploitation that had been in the country since Ambedkar: ಅಂಬೇಡ್ಕರ್ ರಿಂದ ದೇಶದಲ್ಲಿದ್ದ ಶೋಷಿತ ಶಾಪಗಳಿಂದ ಮುಕ್ತ

0

ಚಿಕ್ಕಮಗಳೂರುಎಕ್ಸ್‌ಪ್ರೆಸ್: ದಲಿತ ಚೇತನ ಎಂದರೇ, ಎಲ್ಲರ ಒಳಗಿರಬಹುದಾದ ಚೇತನವನ್ನು ಪರಿಶೋಧಿಸಿಕೊಳ್ಳುವ, ಹೊಸಚಿಂತನೆ ಮೂಲಕ ನಮ್ಮತನವನ್ನು ಕಂಡುಕೊಳ್ಳುವ ಪ್ರತೀಕವಾಗಿದೆ ಎಂದು ಐಡಿಎಸ್‌ಜಿ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ. ಸಂಪತ್ ಬೆಟ್ಟಗೆರೆ ಅಭಿಪ್ರಾಯಿಸಿದರು.

ನಗರದ ಕಲ್ಯಾಣ ನಗರದಲ್ಲಿ ಸಾಹಿತ್ಯ ಅಕಾಡೆಮಿ ಬೆಂಗಳೂರು ಅಜ್ಜಂಪುರ ಜಿ.ಸೂರಿ ಪ್ರತಿಷ್ಠಾನ ಕಡೂರು ಯುರೇಕಾ ಅಕಾಡೆಮಿ ಇವರ ಸಂಯುಕ್ತ ಆಶ್ರಯದಲ್ಲಿ ದಲಿತ ಚೇತನ ವಿಶಿಷ್ಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

೧೯೭೦ರ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಅವಲೋಕಿಸಿದಾಗ ದಲಿತ ಮತ್ತು ಬಂಡಾಯ ಸಾಹಿತ್ಯ ಜನ್ಮತಾ ಳಿತು. ಆದರೆ, ಇದಕ್ಕೂ ಮುಂಚೇ ದಲಿತ ಚಿಂತನೆ ಇತ್ತು ಎನ್ನುವುದನ್ನು ಅನೇಕ ಕೃತಿಗಳು ಸಾಭೀತು ಮಾಡಿವೆ ಎಂದ ಅವರು, ದಲಿತ ಎಂದರೇ ಆತ ತುಳಿತಕ್ಕೆ ಒಳಗಾದವರು ಎಂದರು.

೧೨ನೇ ಶತಮಾನದಲ್ಲಿ ಬಸವಣ್ಣನವರು ನಿರ್ಮಿಸಿದ ಅನುಭವ ಮಂಟಪದಲ್ಲಿ ತುಳಿತಕ್ಕೆ ಒಳಗಾದವರಿಗೆ ಸ್ಥಾನವನ್ನು ಕಲ್ಪಿಸಿಕೊಟ್ಟರು. ದೇಶಕ್ಕೆ ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯ ತಂದುಕೊಟ್ಟರೇ, ದೇಶದಲ್ಲಿ ದ್ದ ಶೋಷಿತ ಶಾಪಗಳಿಂದ ಮುಕ್ತಮಾಡುವ ಕೆಲಸವನ್ನು ಅಂಬೇಡ್ಕರ್ ಅವರು ಮಾಡಿದರು ಎಂದರು.

ಯುರೇಕಾ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ದೀಪಕ್ ದೊಡ್ಡಯ್ಯ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತ ನಾಡಿ, ಅಂಬೇಡ್ಕರ್ ಅವರು ಇಡೀ ವಿಶ್ವಕ್ಕೆ ಸೂರ್ಯ ಇದ್ದಂತೆ ಅವರ ಚಿಂತನೆಗಳು ನಮ್ಮಗೆಲ್ಲರಿಗೂ ಆದರ್ಶ. ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗವನ್ನು ರೂಪಿಸಿ, ನ್ಯಾಯಾಂಗವನ್ನು ಪ್ರತ್ಯೇಕಿಸಿ ಶೋಷಿತ ವರ್ಗ ಬೆನ್ನೆಲುಬಾಗಿ ಸಂವಿಧಾನವನ್ನು ರಚಿಸಿದ್ದಾರೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಜ್ಜಂಪುರ ಸೂರಿ ಶ್ರೀನಿವಾಸ್ ಮಾತನಾಡಿ, ದಲಿತ ಸಾಹಿತ್ಯ ಚಿಂತನೆ ಕುರಿತಂತೆ ಕೇಂದ್ರ ಸಾಹಿತ್ಯ ಅಕಾಡೆಮಿ ಉತ್ತಮ ಕಾರ್ಯಗಳನ್ನು ರೂಪಿಸಿಕೊಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲೂ ದಲಿತ ಕವಿಗೋಷ್ಟಿಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಹೆಚ್.ಎಂ.ಲೋಕೇಶಪ್ಪ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಿ.ಹೆಚ್.ಸೋಮಶೇಖರ್, ತರೀಕೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನವೀನ್ ಪೆನ್ನಯ್ಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಸಂಚಾಲಕರಾದ ಇಮ್ರಾನ್ ಅಹಮದ್ ಬೇಗ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಕ್ತನಕೋಟೆ ಲೋಕೇಶ್, ಮಲ್ಲೇಶಪ್ಪ, ಓಂಕಾರಪ್ಪ, ಚನ್ನಕೇಶವ ಕೋಟೆ, ಕುಪ್ಪಾಳು ಶಾಂತಮೂರ್ತಿ ಸೇರಿದಂತೆ ಅನೇಕರು ಇದ್ದರು.

Free from the curse of exploitation that had been in the country since Ambedkar

 

About Author

Leave a Reply

Your email address will not be published. Required fields are marked *

You may have missed