September 19, 2024

ದಲಿತರ ಹಣ ದುರ್ಬಳಕೆ ಖಂಡಿಸಿ ಬಿಜೆಪಿ ಜಿಲ್ಲಾ ಎಸ್.ಸಿ. ಮೋರ್ಚಾ ಪ್ರತಿಭಟನೆ

0
ದಲಿತರ ಹಣ ದುರ್ಬಳಕೆ ಖಂಡಿಸಿ ಬಿಜೆಪಿ ಜಿಲ್ಲಾ ಎಸ್.ಸಿ. ಮೋರ್ಚಾ ಪ್ರತಿಭಟನೆ

ದಲಿತರ ಹಣ ದುರ್ಬಳಕೆ ಖಂಡಿಸಿ ಬಿಜೆಪಿ ಜಿಲ್ಲಾ ಎಸ್.ಸಿ. ಮೋರ್ಚಾ ಪ್ರತಿಭಟನೆ

ಚಿಕ್ಕಮಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಹಗರಣಗಳ ಬೇರಾಗಿದೆ. ದಿನೇ ದಿನೇ ದಲಿತರ ಹಣವನ್ನು ಕಬಳಿಸಿ ಉಚಿತ ಭಾಗ್ಯಗಳಿಗೆ ಹಂಚುವ ಮೂಲಕ ಎಸ್.ಸಿ., ಎಸ್.ಟಿ. ಸಮುದಾಯದ ಹಣವನ್ನು ಲೂಟಿ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾ ಎಸ್.ಸಿ. ಮೋರ್ಚಾದ ಅಧ್ಯಕ್ಷ ಕುರುವಂಗಿ ವೆಂಕ ಟೇಶ್ ಆರೋಪಿಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಿಂದ ಎಸ್.ಸಿ. ಮೋರ್ಚಾದಿಂದ ಹಮ್ಮಿಕೊಂಡಿದ್ಧ ದಲಿತರ ೧೧೪೪ ಕೋಟಿ ರೂ. ಹಣ ಗ್ಯಾರಂಟಿ ಯೋಜನೆಗೆ ಬಳಿಸಿದ ರಾಜ್ಯ ಸರ್ಕಾರದ ವಿರುದ್ಧ ನೂರಾರು ಕಾರ್ಯ ಕರ್ತ ರು ನಗರದ ಪ್ರಮುಖ ಬೀದಿಗಳಲ್ಲಿ ಸೈಕಲ್ ಜಾಥಾ ನಡೆಸಿ ಸರ್ಕಾರದ ನಿಲುವಿನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಸರ್ಕಾರ ಆಡಳಿತಕ್ಕೆ ಬಂದು ವರ್ಷದಲ್ಲೇ ಪ.ಜಾತಿ ಮತ್ತು ಪ.ಪಂಗಡದ ಕೋಟ್ಯಾಂತರ ಅನು ದಾನವನ್ನು ಕಬಳಿಸುತ್ತಿದೆ. ಅಲ್ಲದೇ ವಾಲ್ಮೀಕಿ ನಿಗಮದ ೧೮೭ ಕೋಟಿ ರೂ.ಗಳನ್ನು ದುರ್ಬಳಕೆ ಮಾಡಿಕೊಂ ಡ ಜೊತೆಗೆ ಅಗತ್ಯ ವಸ್ತುಗಳನ್ನು ಬೆಲೆಏರಿಸಿ ಜನವಿರೋಧಿ ಆಡಳಿತ ನೀಡುತ್ತಿದೆ ಎಂದು ಕಿಡಿಕಾರಿದರು.

ವಾಲ್ಮೀಕಿ ನಿಗಮದ ಹಣವನ್ನು ಲೋಕಸಭಾ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದೆ. ಈ ವಿರುದ್ಧ ಓರ್ವ ಸಚಿವರ ತಲೆದಂಡವಾಗಿದೆ. ಅಲ್ಲದೇ ವಾಲ್ಮೀಕಿ ಅಭಿವೃದ್ದಿ ನಿಗಮದ ಅಧಿಕಾರಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರೂ ಮುಖ್ಯಮಂತ್ರಿಗಳು ಮೌನ ವಹಿಸಿದ್ದಾರೆ ಎಂದು ದೂರಿದರು.

ಬಡವರು, ರೈತರು, ಶೋಷಿತರು, ದೀನದಲಿತ ಪರವಾಗಿ ಮಾದರಿ ಆಡಳಿತ ನೀಡುವೆವು ಎಂಬ ಭರ ವಸೆ ಮೂಡಿಸಿ ಅಧಿಕಾರ ಪಡೆದ ಕಾಂಗ್ರೆಸ್ ಸರ್ಕಾರ ದಿನೇ ದಿನೇ ದಲಿತರ ಹಣ ಲೂಟಿವೆಸಗಿರುವ ಜೊ ತೆಗೆ ಪೆಟ್ರೋಲ್, ಡೀಸೆಲ್ ಹಾಗೂ ಹಾಲಿನ ದರ ಸೇರಿದಂತೆ ದಿನೋಪಯೋಗಿ ವಸ್ತುಗಳನ್ನು ಗಗನಕ್ಕೇರಿಸಿ ಜನ ಸಾಮಾನ್ಯರು ಬದುಕಲಾರದ ಸ್ಥಿತಿಗೆ ತಂದೊಡ್ಡಿದ್ದಾರೆ ಎಂದು ತಿಳಿಸಿದರು.

ಸಂವಿಧಾನ ಕಾಂಗ್ರೆಸ್ ಆಸ್ತಿ ಎಂದು ಹೇಳಿಕೊಳ್ಳುವ ಮುಖಂಡರುಗಳು ಡಾ|| ಬಿ.ಆರ್.ಅಂಬೇಡ್ಕರ್ ಸೋಲಿಗೆ ಹಾಗೂ ಸಂವಿಧಾನ ರಚನೆಯ ವೇಳೆಯಲ್ಲಿ ನೀಡಿದಂತಹ ಹಿಂಸೆ ಜನತೆ ಮರೆತಿಲ್ಲ. ಸಂವಿಧಾನ ಅಂಗೀಕಾರ ನಂತರವು ಅಂಬೇಡ್ಕರ್ ಆಶಯಗಳಿಗೆ ಕೊಡಲಿಪೆಟ್ಟು ನೀಡಿದ್ದೆ ಕಾಂಗ್ರೆಸ್ ಎಂದ ಅವರು ಕೊನೆ ಸಮಯದಲ್ಲಿ ಅಂತ್ಯಸಂಸ್ಕಾರಕ್ಕೆ ಅವಕಾಶ ಕಲ್ಪಿಸದೇ ಕಡೆಗಣಿಸಿದ್ದರು ಎಂದು ದೂರಿದರು.

ರಾಜ್ಯ ಎಸ್.ಸಿ. ಮೋರ್ಚಾ ಕಾರ್ಯದರ್ಶಿ ಸೀತಾರಾಮಭರಣ್ಯ ಮಾತನಾಡಿ ರಾಜ್ಯಸರ್ಕಾರ ಉಚಿತ ಭಾಗ್ಯಗಳ ಆಸೆ ಹುಟ್ಟಿಸಿ ಜನತೆಯ ರಕ್ತವನ್ನು ಹೀರುವ ಕೆಲಸ ಮಾಡುತ್ತಿದೆ. ದಲಿತರ ಹಣವನ್ನು ಯಥೆಚ್ಚ ವಾಗಿ ದುರ್ಬಳಕೆ ಮಾಡಿಕೊಂಡು ದ್ರೋಹವೆಸಗುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ದಲಿತರ ಶ್ರೇಯೋಭಿವೃಧ್ದಿ ಮೀಸಲಿಟ್ಟ ಕೋಟ್ಯಾಂತರ ಹಣವನ್ನು ರಾಜ್ಯಸರ್ಕಾರ ಬೇಕಾಬಿಟ್ಟಿಯಾಗಿ ಗ್ಯಾರಂಟಿಗೆ ನೀಡಿ ದಲಿತ ಸಮುದಾಯಕ್ಕೆ ದೌರ್ಜನ್ಯವೆಸಗುತ್ತಿದೆ. ಪ್ರತಿ ಸಾರಿಯು ಇಂತಿಷ್ಟು ಹಣವನ್ನು ದೋಚುತ್ತಿರುವ ಸರ್ಕಾರವು ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಮುಖಂಡ ರವೀಂದ್ರ ಬೆಳವಾಡಿ ಮಾತನಾಡಿ ಅನಧಿಕೃತ ಹಣ ವರ್ಗಾವಣೆಯಲ್ಲಿ ತೊಡಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಗೋಮುಖವ್ಯಾಗ್ರ ಎಂದ ಅವರು ಹಿಂದೆ ಪೆಟ್ರೋಲ್ ಏರಿಕೆ ಸಂಬಂಧ ಪ್ರತಿ ಭಟಿಸಿದ ಅವರು ಇದೀಗ ರಾಜ್ಯದಲ್ಲಿ ತಮ್ಮದೇ ಸರ್ಕಾರದಲ್ಲಿ ದರ ಇಳಿಕೆಗೊಳಿಸುವ ಬದಲು ಏರಿಕೆಗೊ ಳಿಸಿರುವ ಕಾರಣವೇನು ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಲಕ್ಷ್ಮಣ್, ಸುಜಿತ್ ಕುಮಾರ್, ನಗರ ಎಸ್ ಸಿ ಮೋರ್ಚಾ ಅಧ್ಯಕ್ಷ ಜಗದೀಶ್, ಗ್ರಾಮಾಂತರ ಮೋರ್ಚಾ ಅಧ್ಯಕ್ಷ ಪ್ರದೀಪ್ ನಾಯ್ಕ್, ಹಂಪಯ್ಯ, ಮಾಧ್ಯಮ ಪ್ರಮುಖ್ ಕೇಶವಮೂರ್ತಿ, ನಗರ ಮಂಡಲ ಉಪಾಧ್ಯಕ್ಷ ರೇವನಾಥ್, ಮುಖಂಡರುಗಳಾದ ಕೋಟೆ ರಂಗನಾಥ್, ಮಧುಕುಮಾರ್ ರಾಜ್ ಅರಸ್, ಬಿ.ರಾಜಪ್ಪ, ಕೆ.ಎಸ್.ಪುಷ್ಪರಾಜ್, ಓಂಕಾರೇಗೌಡ, ಕೃ?ಮೂರ್ತಿ, ಮಂಜುನಾಥ್, ಅನ್ವರ್ ಮತ್ತಿತರರು ಹಾಜರಿದ್ದರು.

BJP District S.C condemns misappropriation of Dalits’ money. Morcha protest

About Author

Leave a Reply

Your email address will not be published. Required fields are marked *

You may have missed