September 19, 2024

ಶ್ರೀಗಂಧ ಮರ ಕಡಿತಲೆ ಮಾಡಿರುವ ವ್ಯಕ್ತಿಯ ಬಂಧನಕ್ಕೆ ಆಗ್ರಹ

0
ಶ್ರೀಗಂಧ ಮರ ಕಡಿತಲೆ ಮಾಡಿರುವ ವ್ಯಕ್ತಿಯ ಬಂಧನಕ್ಕೆ ಆಗ್ರಹ

ಶ್ರೀಗಂಧ ಮರ ಕಡಿತಲೆ ಮಾಡಿರುವ ವ್ಯಕ್ತಿಯ ಬಂಧನಕ್ಕೆ ಆಗ್ರಹ

ಚಿಕ್ಕಮಗಳೂರು:  ಶ್ರೀಗಂಧ ಮರವನ್ನು ಕಡಿತಲೆ ಮಾಡಿರುವ ವ್ಯಕ್ತಿಯನ್ನು ಬಂಧಿಸಿ, ನೊಂದ ರೈತನಿಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕು ಎಂದ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನ ಕೃಷಿ ಬೆಳೆಗಾರರ ಜಿಲ್ಲಾ ಸಂಘವು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿಗೆ ಗುರುವಾರ ಮನವಿ ಸಲ್ಲಿ ಸಿದರು.

ಬಳಿಕ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಡಾ|| ಕೆ.ಸುಂದರಗೌಡ ಕಡೂರು ತಾಲ್ಲೂಕಿನ ಚನ್ನಾಪುರ ಗ್ರಾಮದ ಸರ್ವೆ ನಂ.೯೮/೪ ರಲ್ಲಿ ಶ್ರೀಗಂಧ ಮರವನ್ನು ಕಡಿದುಕೊಂಡು ಹೋಗಿದ್ದಾರೆ. ಮತ್ತದೇ ಸ್ಥಳದಲ್ಲಿ ೩/೪ ಭಾಗ ಶ್ರೀಗಂಧವನ್ನು ಕಡಿದಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆ ಮರಗಳ್ಳರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ಈ ಹಿಂದೆ ಮರಗಳ್ಳರ ವಿಚಾರವಾಗಿ ಪೊಲೀಸ್ ಇಲಾಖೆ ಗಮನಕ್ಕೆ ತರಲಾಗಿತ್ತು. ಆದಾದ ಬಳಿ ಕವು ಚನ್ನಾಪುರ ಗ್ರಾಮದಲ್ಲಿ ಈ ರೀತಿಯ ಪ್ರಕರಣ ಮರಕಳಿಸುತ್ತಿದೆ. ಹಾಗಾಗಿ ಕಟಾವಿಗೆ ಸ್ಥಳಕ್ಕೆ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಜಮೀನಿನ ಮಾಲೀಕರಿಗೆ ಪರಿಹಾರ ಒದಗಿ ಸಬೇಕು ಎಂದು ಒತ್ತಾಯಿಸಿದರು.

ಇತ್ತೀಚಿನ ದಿನಗಳಲ್ಲಿ ಶ್ರೀಗಂಧ ಮರದ ಕಳ್ಳತನ ಪ್ರಕರಣವು ಹೆಚ್ಚಾಗುತ್ತಿದೆ. ಪೊಲೀಸ್ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಮರಕಳ್ಳರ ಬಂಧಿಸಲು ಯತ್ನಿಸಿದರೆ ಮಾತ್ರ ರಾಜ್ಯದಲ್ಲಿ ಶ್ರೀಗಂಧವನ್ನು ಕಾಪಾಡಲು ಸಾಧ್ಯ ಎಂದು ತಿಳಿಸಿದರು.

ಕರ್ನಾಟಕವು ಶ್ರೀಗಂಧ ನಾಡೆಂದೇ ಪ್ರಖ್ಯಾತಿ ಪಡೆದುಕೊಂಡಿತ್ತು. ಆದರೆ ಪ್ರಸ್ತುತ ಶ್ರೀಗಂಧ ಮರಗ ಳನ್ನು ಹುಡುಕುವಂತಾಗಿದೆ. ಅಲ್ಲದೇ ರೈತರು ಆರ್ಥಿಕ ಜೀವನ ಸುಧಾರಣೆಗೆ ಶ್ರೀಗಂಧವನ್ನು ಬೆಳೆದರೆ ಕಳ್ಳರ ಕಾಟದಿಂದ ರಾತ್ರೋ ರಾತ್ರಿ ಮರಗಳು ಕಡಿತಲೆಯಾಗುತ್ತಿದೆ. ರೈತರು ಬೆಳೆದ ಶ್ರೀಗಂಧ ಮರಗಳಿಗೆ ವಿಮೆ ಸೌಲಭ್ಯ ಕಲ್ಪಿಸಿದರೆ ಅನುಕೂಲವಾಗಲಿದೆ ಎಂದು ತಿಳಿಸಿದರು.

Demand for the arrest of the person who cut sandalwood tree

About Author

Leave a Reply

Your email address will not be published. Required fields are marked *

You may have missed