September 19, 2024

ಜು18.̆ಕ್ಕೆ ರೈತಪರ ನೀತಿಗಳ ಜಾರಿಗೆ ಆಗ್ರಹಿಸಿ ರೈತ ಸಂಘ ಪ್ರತಿಭಟನೆ

0
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಸುದ್ದಿಗೋಷ್ಠಿ

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಸುದ್ದಿಗೋಷ್ಠಿ

ಚಿಕ್ಕಮಗಳೂರು: ರಾಜ್ಯ ಸರಕಾರ ರೈತರಿಗೆ ಪೂರಕವಾದ ಯಾವುದೇ ಕಾರ್ಯಕ್ರಮ ರೂಪಿಸಲಿಲ್ಲ. ಹೀಗಾಗಿ ರೈತಪರ ನೀತಿಗಳ ಜಾರಿಗೆ ಆಗ್ರಹಿಸಿ ಇದೇ ಜು.೧೮ ರಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭ್ರಷ್ಟಾಚಾರದಲ್ಲಿ ಮುಳುಗಿದ್ದ ಬಿಜೆಪಿ ಸರಕಾರವನ್ನು ಕಿತ್ತೆಸೆದು ಕಾಂಗ್ರೆಸ್ ಅಕಾರಕ್ಕೆ ತಂದರೂ ಮುಖಗಳು ಬದಲಾದವೆ ವಿನಾ ಆಡಳಿತ ಹಿಂದಿನಂತೆಯೇ ಇದೆ. ಪರಿಶಿಷ್ಟರಿಗೆ ಮೀಸಲಿಟ್ಟಿದ್ದ ೧೮೭ಕೋಟಿ ರೂ. ದುರುಪಯೋಗವಾಗಿದೆ.

ಸರಕಾರಿ ಕಚೇರಿಗಳಲ್ಲಿ ಲಂಗುಲಗಾಮಿಲದೆ ಭ್ರಷ್ಟಾಚಾರ ನಡೆಯುತ್ತಿದೆ. ರೈತರ ಆತ್ಮಹತ್ಯೆ ಸರಣಿ ಮುಂದುವರಿದಿದೆ. ಈ ಹಿನ್ನೆಲೆ ರಾಜ್ಯಾದ್ಯಂತ ಜಿಲ್ಲಾಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ರೈತ ಸಂಘ ತೀರ್ಮಾನಿಸಿದೆ ಎಂದು ಹೇಳಿದರು.

ಕೃಷಿ ಪಂಪ್ ಸೆಟ್ ಸಂಪರ್ಕ ಪಡೆಯಲು ರೈತರು ಸ್ವಂತ ಖರ್ಚು ಭರಿಸಬೇಕು ಎಂದು ಈ ಸರಕಾರ ತೀರ್ಮಾನಿಸಿದೆ. ಇದರಿಂದ ೨ -೩ ಲಕ್ಷ ರೂ.ದೊಡ್ಡ ಮೊತ್ತದ ವೆಚ್ಚ ಭರಿಸಬೇಕಿದೆ.

ಈ ತೀರ್ಮಾನ ವಾಪಸ್ಸು ಪಡೆದು ಹಿಂದಿನ ನಿಯಮದಡಿ ಆದ್ಯತೆ ಕೊಡಬೇಕು ಎಂಬುದು ನಮ್ಮ ಆಗ್ರಹವಾಗಿದೆ. ರೈತರ ಆತ್ಮ ಹತ್ಯೆ ತಡೆಗೆ ಈ ಸರಕಾರ ಯಾವುದೇ ಕಾರ್ಯಕ್ರಮ ರೂಪಿಸಲಿಲ್ಲ. ರೈತ ಪಡೆದ ಸಾಲಕ್ಕೆ ಬ್ಯಾಂಕ್ ಕಿರುಕುಳ ನೀಡುತ್ತಿವೆ ಇದನ್ನು ತಪ್ಪಿಸಿ ರೈತರಿಗೆ ರಕ್ಷಣೆ ನೀಡಬೇಕು. ಫಸಲ್ ಬಿಮಾ ಂiಯೋಜನೆ ವಿಸ್ತರಿಸಿ ಗ್ರಾಮ ಮಟ್ಟದಲ್ಲಿಬೆಳೆ ಹಾನಿ ನಿರ್ಧರಿಸಬೇಕು.

ಖರೀದಿ ಕೇಂದ್ರಗಳಲ್ಲಿ ರೈತರಿಂದ ಖರೀದಿಸಿದ ಆಹಾರ ಪದಾರ್ಥಗಳ ಹಣ ಬಿಡುಗಡೆ ಮಾಡಬೇಕು. ಬರಪರಿಹಾರದ ಹಣವನ್ನು ಸಾಲಕ್ಕೆ ಜಮಾ ಮಾಡಬಾರದು. ವೈಜ್ಞಾನಿಕವಾದ ಬೆಂಬಲ ಬೆಲೆ ಘೋಷಿಸಬೇಕು.

ಕೇಂದ್ರ ಸರಕಾರ ಹೋರಾಟಕ್ಕೆ ಮಣಿದು ೩ ಕೃಷಿ ಕಾಯಿದೆಗಳನ್ನು ಹಿಂಪಡೆದಿದೆ. ಆದರೆ ರಾಜ್ಯ ಸರಕಾರ ಇನ್ನೂ ಹಿಂಪಡೆದಿಲ್ಲ ಕೂಡಲೇ ಹಿಂತೆಗೆದುಕೊಳ್ಳಬೇಕು ಇಂತಹ ಹತ್ತಾರು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಆಯಾ ಜಿಲ್ಲಾ ಕೇಂದ್ರದಲ್ಲಿ ಅಂದು ಪ್ರತಿಭಟನೆ ನಡೆಯಲಿದೆ ಎಂದು ಹೇಳಿದರು.

ರೈತ ಮುಖಂಡ ಪರ್ವತೇಗೌಡ ಇದ್ದರು.

On June 18 farmers’ union protests demanding the implementation of pro-farmer policies

About Author

Leave a Reply

Your email address will not be published. Required fields are marked *

You may have missed