September 19, 2024

ದಲಿತರ ಸ್ವಗೃಹದಲ್ಲಿ ಶಾಸಕರು ಮನ್ ಕೀ ಬಾತ್ ಸಂಚಿಕೆ ಆಲನೆ

0
ದಲಿತರ ಸ್ವಗೃಹದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮನ್ ಕೀ ಬಾತ್ ಸಂಚಿಕೆ ಆಲನೆ

ದಲಿತರ ಸ್ವಗೃಹದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮನ್ ಕೀ ಬಾತ್ ಸಂಚಿಕೆ ಆಲನೆ

ಚಿಕ್ಕಮಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ೧೧೨ನೇ ಮನ್ ಕೀ ಬಾತ್ ಸಂಚಿಕೆ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹಾಗೂ ಪಕ್ಷದ ಮುಖಂಡರುಗಳು ದಂಟರಮಕ್ಕಿ ದಲಿತ ನಿವಾಸಿಯೋರ್ವರ ಸ್ವಗೃಹದಲ್ಲಿ ೩೦ ನಿಮಿಷಗಳ ಕಾಲ ಆಲಿಸಿದರು.

ನಗರದ ಮಂಡಲದ ಡಾ|| ಶ್ಯಾಮ್‌ಪ್ರಸಾದ್ ಮುಖರ್ಜಿ ಮಹಾಶಕ್ತಿ ಕೇಂದ್ರದಿಂದ ದಂಟರಮಕ್ಕಿಯ ದಲಿತ ನಿವಾಸಿ ಲೋಕೇಶ್ ಎಂಬುವವರು ಮನೆಯಲ್ಲಿ ಆಯೋಜಿಸಿದ್ಧ ಮನ್ ಕೀ ಬಾತ್ ಸಂಚಿಕೆಯನ್ನು ಭಾರತಮಾತೆ ಹಾಗೂ ಡಾ|| ಬಿ.ಆರ್.ಅಂಬೇಡ್ಕರ್ ಪುಷ್ಪನಮನ ಸಲ್ಲಿಸಿ ಸಂಚಿಕೆಯನ್ನು ಪರಿಪೂರ್ಣವಾಗಿ ಕೇಳಿ ಸಂಭ್ರಮಿಸಿದರು.

ಬಳಿಕ ಮಾತನಾಡಿದ ಶಾಸಕ ಸಿ.ಟಿ.ರವಿ ದೇಶದ ಕ್ರಾಂತಿಕಾರ ಬೆಳವಣಿಗೆ ಹಾಗೂ ಸಾಮಾನ್ಯರು ವಿವಿಧ ರಾಜ್ಯಗಳಲ್ಲಿ ಸಾಧಿಸಿರುವ ಸೇವೆಯನ್ನು ಮನಸ್ಸಿನ ಮಾತು ಸಂಚಿಕೆಯನ್ನು ದೂರವಾಣಿ ಕರೆ ಮೂ ಲಕ ಅಭಿಪ್ರಾಯ ಸಂಗ್ರಹಿಸಿ ಮಾಹಿತಿಯನ್ನು ದೇಶದ ಜನತೆಗೆ ಪ್ರಧಾನಿ ಸಮರ್ಪಿಸಿರುವುದ್ದಾರೆ ಎಂದರು.

ಮನ್ ಕೀ ಬಾತ್ ಸಂಚಿಕೆ ಕೇವಲ ಒಂದು ಕಾರ್ಯಕ್ರಮವಾಗಿರದೇ ಜನರ ಆಂದೋಲನವಾಗಿದೆ. ದೇಶದ ಜನತೆಯ ಸಾಧನೆಯನ್ನು ತೋರ್ಪಡಿಸುವ ವೇದಿಕೆ. ಆ ನಿಟ್ಟಿನಲ್ಲಿ ಪ್ರಧಾನಿಗಳು ಪ್ರತಿ ತಿಂಗಳು ಆಕಾ ಶವಾಣಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿ ಆಲೋಚನೆಗಳನ್ನು ದೇಶದ ಸಾಮಾನ್ಯ ಜನರಿಗೆ ತಲುಪಿಸು ವ ಗುರಿ ಹೊಂದಿದ್ದಾರೆ ಎಂದರು.

ಸಂಚಿಕೆಯಲ್ಲಿ ಪ್ರಧಾನಿಗಳು ಖಾದಿ ಗ್ರಾಮೋದ್ಯೋಗದ ವ್ಯವಹಾರ ಮೊದಲ ಭಾರಿಗೆ ೧.೫ ಲಕ್ಷ ಕೋಟಿ ರೂ.ಗಳು ದಾಟಿದೆ. ಖಾದಿ ಮತ್ತು ಕೈಮಗ್ಗದ ವಸ್ತುಗಳ ಮಾರಾಟ ಹೆಚ್ಚಳದಿಂದ ಹೊಸ ಉದ್ಯೋ ಗಾವಕಾಶಗಳು ಸೃಷ್ಟಿಯಾಗುತ್ತಿವೆ. ಮೊದಲು ಖಾದಿ ಉತ್ಪನ್ನಗಳನ್ನು ಬಳಸದಿದ್ದ ಅನೇಕರು ಇದೀಗ ಹೆಮ್ಮೆ ಯಿಂದ ಖಾದಿ ಧರಿಸುತ್ತಿದ್ದಾರೆ ಎಂದು ವಿವರಿಸಿದರು.

ಇತ್ತೀಚೆಗೆ ನಡೆದ ಒಲಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತೀಯ ವಿದ್ಯಾರ್ಥಿಗಳೊಂ ದಿಗೆ ಸಂವಾದ ನಡೆಸಿದ ಪ್ರಧಾನಿಗಳು, ಆ ಪ್ರದರ್ಶನದಲ್ಲಿ ಭಾರತೀಯರು ಉತ್ತಮ ಪ್ರದರ್ಶನ ನೀಡಿ ಚಿನ್ನ ಹಾಗೂ ಬೆಳ್ಳಿ ಪದಕ ಗೆದ್ದಿರುವುದಕ್ಕೆ ಪ್ರಧಾನಿಗಳು ಪ್ರಶಂಸೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಬೂತ್ ಅಧ್ಯಕ್ಷರಾದ ಗಣೇಶ್, ರಾಜು, ರಾಜ್ಯ ಎಸ್ಸಿ ಮೋರ್ಚಾ ಕಾರ್‍ಯ ದರ್ಶಿ ಸೀತರಾಮಭರಣ್ಯ, ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ನಗರಸಭೆ ಮಾಜಿ ಸದಸ್ಯ ಮೋಹನ್, ನಗರ ಮಂಡಲ ಉಪಾಧ್ಯಕ್ಷರಾದ ಸತೀಶ್, ರೇವನಾಥ್, ನಿವೃತ್ತ ಇನ್ಸ್‌ಪೆಕ್ಟರ್ ಮಂಜುನಾಥ್, ನಗರ ಎಸ್ಸಿ ಮೋ ರ್ಚಾ ಅಧ್ಯಕ್ಷ ಜಗದೀಶ್, ಮುಖಂಡರುಗಳಾದ ಕೇಶವಮೂರ್ತಿ, ಚಂದ್ರಶೇಖರ್, ಧರ್ಮರಾಜು, ಹರೀಶ್, ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.

Vidhan Parishad member CT Ravi Mann Ki Baat Episode Aalana at Dalit Swagriha

 

About Author

Leave a Reply

Your email address will not be published. Required fields are marked *

You may have missed