September 20, 2024

Aadhar number should be linked with voter ID card: ಮತದಾರರ ಪಟ್ಟಿಯಲ್ಲಿರುವ ಮತದಾರರು ತಮ್ಮ ಆಧಾರ್ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಯೊಂದಿಗೆ ಜೋಡಿಸಿಕೊಳ್ಳಬೇಕು-ಕೆ.ಎನ್.ರಮೇಶ್

0

ಚಿಕ್ಕಮಗಳೂರುಎಕ್ಸ್‌ಪ್ರೆಸ್: ಜಿಲ್ಲೆಯಲ್ಲಿ ಒಟ್ಟು ೯೪೫೧೫೧ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಒಟ್ಟು ೪೬೮೫೯೯ ಪುರುಷರು ಹಾಗೂ ೪೭೬೫೧೬ ಮಹಿಳಾ ಮತದಾರರಿದ್ದಾರೆ. ಶೃಂಗೇರಿ ಕ್ಷೇತ್ರದಲ್ಲಿ ಒಟ್ಟು ೧೬೬೫೭೧ ಮತದಾರರಿದ್ದಾರೆ. ಒಟ್ಟು ೧೬೮೪೫೯, ಚಿಕ್ಕಮಗಳೂರು ಕ್ಷೇತ್ರದಲ್ಲಿ ೨೧೯೫೮೧, ತರೀಕೆರೆ ಕ್ಷೇತ್ರದಲ್ಲಿ ಒಟ್ಟು ೧೮೮೭೮೯, ಕಡೂರು ಕ್ಷೇತ್ರದಲ್ಲಿ ಒಟ್ಟು ೨೦೧೭೫೧ ಮತದಾರರಿದ್ದಾರೆ.

ಶೃಂಗೇರಿ ಕ್ಷೇತ್ರದಲ್ಲಿ ೨೨೨೪, ಮೂಡಿಗೆರೆ ಕ್ಷೇತ್ರದಲ್ಲಿ ೧೫೬೨, ಚಿಕ್ಕಮಗಳೂರು ಕ್ಷೇತ್ರದಲ್ಲಿ ೨೧೬೭, ತರೀಕೆರೆ ಕ್ಷೇತ್ರದಲ್ಲಿ ೨೧೫೯ ಹಾಗೂ ಕಡೂರು ಕ್ಷೇತ್ರದಲ್ಲಿ ೨೧೫೬ ಮತದಾರರು ಸೇರಿ ಒಟ್ಟು ೧೦೨೬೮ ಯುವ ಮತದಾರರು ಸೇರ್ಪಡೆಗೊಂಡಿದ್ದಾರೆ.

ಜಿಲ್ಲೆಯಲ್ಲಿ ವಿಕಲಚೇತನ ಕಲ್ಯಾಣಾಧಿಕಾರಿಯವರ ಕಚೆರಿಯಿಂದ ಸಮೀಕ್ಷೆ ನಡೆಸಿದ್ದು ಮಾಹಿತಿ ಆಧರಿಸಿ ಮತದಾರರ ಪಟ್ಟಿಯಿಂದ ಹೊರಗುಳಿದವರನ್ನು ಸೇರ್ಪಡೆಗೊಳಿಸಲಾಗುತ್ತಿದೆ. ಈ ವರೆಗೆ ೮೩೨೮ ಮಂದಿ ವಿಕಲಚೇತನ ಮತದಾರನ್ನು ನೊಂದಾಯಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯ ಮತದಾರರಾಗಿದ್ದು ಸೇನೆ ಸೇರಿದಂತೆ ಹೊರ ರಾಜ್ಯ, ಹೊರ ದೇಶಗಳಲ್ಲಿ ಸರ್ಕಾರಿ ಕರ್ತವ್ಯದಲ್ಲಿ ತೊಡಗಿಸಿಕೊಂಡಿರುವ ಒಟ್ಟು ೪೯೮ ಮಂದಿ ಸೇವಾ ಮತದಾರರನ್ನು ಗುರುತಿಸಲಾಗಿದ್ದು, ಅವರು ಇದ್ದಲ್ಲಿಂದಲೇ ಅಂಚೆ ಮೂಲಕ ಮತ ಚಲಾಯಿಸಲು ಅವಕಾಶವಿದೆ ಎಂದು ತಿಳಿಸಿದರು.

ಮತದಾರರ ಪಟ್ಟಿಯಲ್ಲಿರುವ ಮತದಾರರು ತಮ್ಮ ಆಧಾರ್ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಯೊಂದಿಗೆ ಜೋಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು. ಈ ವರೆಗೆ ಜಿಲ್ಲೆಯಲ್ಲಿ ಶೇ.೭೩.೨೯ ರಷ್ಟು ಮತದಾರರು ಈ ವರೆಗೆ ಆಧಾರ್‌ಗೆ ಜೋಡಣೆ ಮಾಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಮತದಾರರ ಪಟ್ಟಿಗೆ ಸೇರ್ಪಡೆ ಮತ್ತು ಪಟ್ಟಿಯಿಂದ ತೆಗೆದು ಹಾಕುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕರಡು ಮತದಾರರ ಪಟ್ಟಿಯನ್ನು ಆಯಾ ಮತಗಟ್ಟೆಗಳು, ಗ್ರಾ.ಪಂ. ಇತರೆಡೆ ಪ್ರಕಟಿಸಲಾಗಿದೆ. ಈ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಜನವರಿ ೧೬ ರೊಳಗಾಗಿ ವೈಬ್ ಸೈಟ್, ಅಂಚೆ ಹಾಗೂ ಖುದ್ದಾಗಿ ಸಲ್ಲಿಸಬಹುದಾಗಿದೆ ಎಂದರು.

ಮತದಾರರ ಬಳಿ ಗುರುತಿನ ಚೀಟಿ ಇದ್ದ ಮಾತ್ರಕ್ಕೆ ಪಟ್ಟಿಯಲ್ಲಿ ನಮ್ಮ ಹೆಸರಿದೆ ಎಂದುಕೊಂಡು ಸುಮ್ಮನಾಗಬಾರದು, ಎಲ್ಲಾ ಮತದಾರರು ಇಂದೇ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಎನ್ನುವುದನ್ನು ಪರಿಶೀಲಿಸಿಕೊಳ್ಳಬೇಕು. ಕರಡು ಪಟ್ಟಿಯಲ್ಲಿ ಅಥವಾ ವೆಬ್ ಸೈಟ್‌ನಲ್ಲಿ ಪರಿಶೀಲಿಸಲು ಅವಕಾಶವಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪಾ ಉಪಸ್ಥಿತರಿದ್ದರು.

Aadhar number should be linked with voter ID card

About Author

Leave a Reply

Your email address will not be published. Required fields are marked *