September 20, 2024

ಒಳ ಮೀಸಲಾತಿ-ಸರ್ವೋಚ್ಛ ನ್ಯಾಯಾಲಯದ ತೀರ್ಪು ಸ್ವಾಗತಿಸಿ ವಿಜಯೋತ್ಸವ

0
ನಗರದ ಆಜಾದ್ ಮೈದಾನದಲ್ಲಿ ಮಾದಿಗ ಮಹಾಸಭಾದಿಂದ ವಿಜಯೋತ್ಸವ

ನಗರದ ಆಜಾದ್ ಮೈದಾನದಲ್ಲಿ ಮಾದಿಗ ಮಹಾಸಭಾದಿಂದ ವಿಜಯೋತ್ಸವ

ಚಿಕ್ಕಮಗಳೂರು:  ಒಳ ಮೀಸಲಾತಿ ಜಾರಿ ಕುರಿತು ಸರ್ವೋಚ್ಛ ನ್ಯಾಯಾಲಯ ನೀಡಿರುವ ತೀರ್ಪು ಸ್ವಾಗತಿಸಿ ರಾಜ್ಯದ ಸಂಘಟನೆಯ ಮುಖಂಡರು ವಿಜಯೋತ್ಸವ ಆಚರಿಸಿದರು.

ನಗರದ ಆಜಾದ್ ಮೈದಾನದಲ್ಲಿ ಮಾದಿಗ ಮಹಾಸಭಾದ ಜಿಲ್ಲಾಧ್ಯಕ್ಷ ಆರ್. ರಮೇಶ್, ಆದಿಜಾಂಬವ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘಟನೆಯ ಅಧ್ಯಕ್ಷ ವೆಂಕಟೇಶ್ ನೇತೃತ್ವದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ನ್ಯಾಯಾಲಯ ನೀಡಿರುವ ತೀರ್ಪನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.

ನ್ಯಾಯಾಲಯ ನೀಡಿರುವ ಈ ತೀರ್ಪು ಮಾದಿಗ ಸಮುದಾಯ, ಒಳ ಮೀಸಲಾಗಿ ವರ್ಗೀಕರಣ ಆಗಬೇಕೆಂಬ ೩೦ ವರ್ಷಗಳ ಹೋರಾಟದ ಫಲವಿದೆಂದು ಸಂಘಟನೆಯ ಮುಖಂಡರು ತಿಳಿಸಿದರು.

ರಾಜ್ಯದಲ್ಲಿ ಬಹುಸಂಖ್ಯಾತರಾಗಿರುವ ಮಾದಿಗ ಸಮುದಾಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ೧೦೧ ಜಾತಿಗಳಲ್ಲಿ ಮಾದಿಗ ಸಮುದಾಯ ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಮುಂದೆ ಬರಬೇಕೆಂಬ ಹಿನ್ನೆಲೆಯಲ್ಲಿ ಒಳ ಮೀಸಲಾತಿ ಜಾರಿ ಮಾಡುವಂತೆ ಕಳೆದ ೩೦ ವರ್ಷಗಳಿಂದ ನಿರಂತರ ಹೋರಾಟ ನಡೆಸಿದ ಸಂಘಟನೆಗಳು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಬೇಕೆಂಬ ವರದಿ ನೀಡಿತ್ತು,

ಈ ವರದಿಯನ್ನು ಜಾರಿಗೊಳಿಸುವ ಮೂಲಕ ಸೌಲಭ್ಯ ವಂಚಿತರಿಗೆ ನ್ಯಾಯ ದೊರಕಿಸಬೇಕೆಂಬ ಹಿನ್ನೆಲೆಯಲ್ಲಿ ಈವರೆಗೂ ನಡೆದ ಹೋರಾಟದಲ್ಲಿ ರಾಜ್ಯದಲ್ಲಿ ಆಡಳಿತ ನಡೆದಿ ಎಲ್ಲಾ ರಾಜಕೀಯ ಪಕ್ಷಗಳು ಈ ವರದಿಯನ್ನು ಜಾರಿಗೊಳಿಸುವ ಸುಳ್ಳು ಭರವಸೆಗಳನ್ನು ನೀಡಿ ರಾಜ್ಯದಲ್ಲಿ ಬಹುಸಂಖ್ಯಾತರಾಗಿರುವ ಮಾದಿಗ ಸಮುದಾಯದ ಮೂತಿಗೆ ತುಪ್ಪ ಸವರುವ ಮೂಲಕ ಇವರನ್ನು ಕೇವಲ ಓಟ್‌ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಳ್ಳುವ ಮೂಲಕ ವಂಚಿಸಿದ್ದಾರೆ ಎಂದು ಆರೋಪಿಸಿದರು.

ಈ ಸಂಬಂಧ ಜಾತಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಜಾರಿಗೊಳಿಸಲು ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಜಾರಿಗೊಳಿಬೇಕೆಂದು ಒತ್ತಾಯಿಸಿದರು.

ಮಾದಿಗ ಸಂಘಟನೆಯ ಮುಖಂಡರಾದ ಎಲ್.ಎಸ್. ರೇವಣ್ಣ, ಕಡೂರು ಮಂಜಣ್ಣ, ನಗರಸಭಾ ಸದಸ್ಯ ಅರುಣ್‌ಕುಮಾರ್, ಶ್ರೀಕಾಂತ್, ಡಾ. ಬಿ.ವಿ. ಪ್ರಕಾಶ್, ಕೆಂಪನಹಳ್ಳಿ ನವೀನ, ಶಂಕರಪುರ ನಾಗರಾಜ್, ಚಂದ್ರು, ಜಗದೀಶ್, ಹಾಲಪ್ಪ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Internal reservation-Supreme Court verdict welcomed with triumph

About Author

Leave a Reply

Your email address will not be published. Required fields are marked *