September 20, 2024

Chikmagalur District Festival-Cultural Programme: ಚಿಕ್ಕಮಗಳೂರು ಜಿಲ್ಲಾ ಉತ್ಸವ-ಸಾಂಸ್ಕೃತಿಕ ಕಾರ್ಯಕ್ರಮ

0

ಚಿಕ್ಕಮಗಳೂರುಎಕ್ಸ್‌ಪ್ರೆಸ್: ಚಿಕ್ಕಮಗಳೂರು ಜಿಲ್ಲಾ ಉತ್ಸವದ ಅಂಗವಾಗಿ ಸಾಂಸ್ಕೃತಿಕ ಸಮಿತಿಯಿಂದ ಕುವೆಂಪು ಕಲಾಮಂದಿರ ಹಾಗೂ ಮುಖ್ಯ ವೇದಿಕೆಗಳಲ್ಲಿ ಜನವರಿ ೧೩ ರಿಂದ ಜನವರಿ ೨೨ ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಾದ ರಸಪ್ರಶ್ನೆ ಸ್ಪರ್ಧೆ, ಮಹಿಳಾ ಉತ್ಸವ, ಯುವ ಮತ್ತು ಹಿರಿಯರ ಉತ್ಸವ, ಚಿತ್ರಕಲಾ ಶಿಬಿರ, ನಾಟಕೋತ್ಸವ, ಸಿನಿಮೋತ್ಸವ, ಚಿಣ್ಣರ ಉತ್ಸವ, ಶಾಸ್ತ್ರೀಯ ಸಂಗೀತೋತ್ಸವ, ಕಾವ್ಯೋತ್ಸವ, ಕಾವ್ವಾಲಿ ಗಾಯನದಂತಹ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂದು ನಡೆದ ಚಿಕ್ಕಮಗಳೂರು ಜಿಲ್ಲಾ ಉತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕುವೆಂಪು ಕಲಾಮಂದಿರದಲ್ಲಿ ಜನವರಿ ೧೩ ರಂದು ವಿಷನ್ ಚಿಕ್ಕಮಗಳೂರು ಜಿಲ್ಲಾ ಮಟ್ಟದ ರಸಪ್ರಶ್ನೆ, ಸ್ಪರ್ಧೆ, ಜನವರಿ ೧೪ ರಂದು ಮಹಿಳಾ ಉತ್ಸವ, ಜನವರಿ ೧೬ ರಂದು ಯುವ ಹಿರಿಯರ ಉತ್ಸವ, ಜನವರಿ ೧೮ ರಿಂದ ೨೧ರ ರವರೆಗೆ ನಾಟಕೋತ್ಸವ, ಜನವರಿ ೧೯ ರಂದು ಶಾಸ್ತ್ರೀಯ ಸಂಗೀತೋತ್ಸವ ಹಾಗೂ ಜನವರಿ ೨೧ ರಂದು ಕವ್ವಾಲಿ ಗಾಯನವನ್ನು ಏರ್ಪಡಿಸಲಾಗಿದೆ ಎಂದರು.

ಇತರ ವೇದಿಕೆಗಳಲ್ಲಿ ಜನವರಿ ೧೩ ರಂದು ಚಿತ್ರಕಲಾ ಶಿಬಿರ, ಜಿಲ್ಲಾ ಆಟದ ಮೈದಾನದಲ್ಲಿನ ಶಾಂತಿನಿಕೇತನ ಚಿತ್ರಕಲಾ ವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಶಿಬಿರದಲ್ಲಿ ೧೭ ಜನ ಜಿಲ್ಲೆಯ ಕಲಾವಿದರು ಹಾಗೂ ಹೊರ ಜಿಲ್ಲೆಯ ೮ ಜನ ಕಲಾವಿದರು ಚಿತ್ರರಚನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜನವರಿ ೧೭ ರಂದು ಐಡಿಎಸ್‌ಜಿ ಕಾಲೇಜ್ ಆವರಣದಲ್ಲಿ ಕಾವ್ಯೋತ್ಸವವನ್ನು, ಜನವರಿ ೧೮ ರಿಂದ ೨೨ ರವರೆಗೆ ಸಿನಿಮೋತ್ಸವವನ್ನು ಮಿಲನ್ ಹಾಗೂ ನಾಗಲಕ್ಷ್ಮೀ ಚಿತ್ರಮಂದಿರದಲ್ಲಿ ತಲಾ ಒಂದರಂತೆ ಐದು ದಿನಗಳಿಗೆ ೧೦ ಚಿತ್ರಗಳ ಪ್ರದರ್ಶನ ಹಾಗೂ ಜನವರಿ ೧೯ ರಂದು ಚಿಣ್ಣರ ಉತ್ಸವವನ್ನು ಮಕ್ಕಳಿಗಾಗಿ ಆಜಾದ್‌ಪಾರ್ಕ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಅದೇ ದಿನ ಮಕ್ಕಳ ಚಲನಚಿತ್ರ ಪ್ರದರ್ಶನ ಹಾಗೂ ಕುವೆಂಪು ಕಲಾಮಂದಿರದಲ್ಲಿ ಮಕ್ಕಳ ನಾಟಕವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದ ಮುಖ್ಯ ವೇದಿಕೆ ಯಲ್ಲಿ ಜನವರಿ ೧೮ ರಂದು ಮಾನ್ಯ ಮುಖ್ಯಮಂತ್ರಿಗಳಿಂದ ಚಿಕ್ಕಮಗಳೂರು ಹಬ್ಬದ ಉದ್ಘಾಟನಾ ಕಾರ್ಯಕ್ರಮ ತದನಂತರ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಯ ೫೦ ಕ್ಕೂ ಹೆಚ್ಚಿನ ಜಾನಪದ ತಂಡಗಳಿಂದ ಜಾನಪದ ಜಾತ್ರೆಯನ್ನು, ಜನವರಿ ೧೯ ರಂದು ಚಿತ್ರಸಂಜೆ ಕಾರ್ಯಕ್ರಮದ ಅಂಗವಾಗಿ ಸಯ್ಯದ್ ಸಲ್ಲಾ ಉದ್ದೀನ್ ಪಾಷ ಮತ್ತು ತಂಡದವರಿಂದ ಮಿರಾಕಲ್ ಆನ್ ವ್ಹೀಲ್ಸ್ ಹಾಗೂ ರಾಜೇಶ್ ಕೃಷ್ಣನ್, ಖ್ಯಾತ ಹಿನ್ನೆಲೆ ಗಾಯಕರು ಮತ್ತು ತಂಡ, ಬೆಂಗಳೂರು ಇವರಿಂದ ಚಲನಚಿತ್ರ ಗೀತ ಗಾಯನವನ್ನು, ಜನವರಿ ೨೦ ರಂದು ನೃತ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ನಿರುಪಮಾ ಮತ್ತು ರಾಜೇಂದ್ರ ತಂಡದವರಿಂದ ಬಹುರಂಗ್ ನೃತ್ಯವೈಭವ ಹಾಗೂ ಅಜಯ್ ವಾರಿಯರ್ ಖ್ಯಾತ ಹಿನ್ನೆಲೆ ಗಾಯಕರು ಮತ್ತು ತಂಡ ಬೆಂಗಳೂರು ಇವರಿಂದ ಪುನೀತ್ ನಮನ ಕಾರ್ಯಕ್ರಮವನ್ನು, ಜನವರಿ ೨೧ ರಂದು ಸಂಸ್ಕೃತಿ ಸಂಗಮ ಡಸರ್ಟ್ ಸ್ಟೋರ್ಮ್ಸ್ ರಾಜಸ್ಥಾನಿ ಜನಪದ ಹಾಡುಗಳ ವೈಭವ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಲಾವಿದರಿಂದ ಸ್ವರ ಸಂಭ್ರಮ ಹಾಗೂ ನೃತ್ಯ ರೂಪಕ ಕಾರ್ಯಕ್ರಮ ಹಾಗೂ ಜನವರಿ ೨೨ ರಂದು ಚಿಕ್ಕಮಗಳೂರು ಹಬ್ಬದ ಸಮಾರೋಪ ಸಮಾರಂಭವನ್ನು ಮತ್ತು ತಾಳ, ಲಯ, ವಾದ್ಯ ಬೀಟ್ ಗುರೂಸ್, ಬೆಂಗಳೂರು ಹಾಗೂ ಆಳ್ವಾಸ್ ಸಾಂಸ್ಕೃತಿಕ ವೈಭವವನ್ನು ಆಳ್ವಾಸ್ ಸಂಸ್ಥೆಯಿಂದ ಚಿತ್ತಾಕರ್ಷಕ ಸುಡುಮದ್ದು ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

Chikmagalur District Festival-Cultural Programme

About Author

Leave a Reply

Your email address will not be published. Required fields are marked *