September 20, 2024

Peace of mind by worshiping God: ದೇವರ ಆರಾಧನೆಯಿಂದ ಮನಸ್ಸಿಗೆ ನೆಮ್ಮದಿ – ಹೆಚ್.ಡಿ.ತಮ್ಮಯ್ಯ

0

ಚಿಕ್ಕಮಗಳೂರುಎಕ್ಸ್‌ಪ್ರೆಸ್: ಆಧುನಿಕ ಜಗತ್ತಿನಲ್ಲಿ ಮನುಷ್ಯನು ಕೆಲಸದ ಒತ್ತಡದಲ್ಲಿ ನೆಮ್ಮದಿಯನ್ನು ಕಳೆದುಕೊಂಡಿದ್ದಾನೆ, ದೇವರ ಆರಾಧನೆಯಿಂದ ಮನಸ್ಸಿಗೆ ನೆಮ್ಮದಿ ದೋರೆಯುವುದು ಎಂದು ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಡಿ.ತಮ್ಮಯ್ಯ ತಿಳಿಸಿದರು.

ನಗರದ ಕಲ್ಯಾಣ ನಗರದಲ್ಲಿರುವ ಶ್ರೀ ವಿನಾಯಕ ಕಲ್ಯಾಣ ನಗರ ವೆಲ್‌ಫೇರ್ ಟ್ರಸ್ಟ್ ವತಿಯಿಂದ ಮಹಾ ಗಣಪತಿ ದೇವಸ್ಥಾನದ ೧೨ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ ೧೫ ವರ್ಷಗಳ ಹಿಂದೆ ೨೦೦೦ ಮನೆಗಳನ್ನು ಪ್ರಾಧಿಕಾರದಿಂದ ಹಂಚಿಕೆ ಮಾಡಲಾಗಿತ್ತು ಅಂದಿನ ದಿನದಲ್ಲಿ ಇಲ್ಲಿ ಬೇಕಾದ ಯಾವ ಸೌಕರ್ಯಗಳು ಇರದ ಕಾರಣದಿಂದ ಇಲ್ಲಿಯ ನಿವಾಸಿಗಳೆಲ್ಲರು ಸೇರಿ ಸಮಿತಿಯನ್ನು ರಚನೆ ಮಾಡಿ ಸಾರ್ವಜನಿಕರಿಂದ ಹಣ ಸಂಗ್ರಹಣೆ ಮಾಡಿ ವಿಘ್ನೇಶ್ವರನಾದ ಮಹಾ ಗಣಪತಿಯ ಸುಂದರವಾದ ದೇವಸ್ಥಾನವನ್ನು ನಿರ್ಮಾಣ ಮಾಡಲಾಯಿತು, ಇದರ ಸಂಪೂರ್ಣ ಯಶಸ್ಸು ಕಲ್ಯಾಣ ನಗರದ ಭಕ್ತರು ಮತ್ತು ನಿವಾಸಿಗಳಿಗೆ ಸೇರಿದ್ದು ಎಂದರು.
ಕಲ್ಯಾಣ ನಗರದ ದೇವಸ್ಥಾನ ನಿರ್ಮಾಣವಾಗಿ ಇಂದಿಗೆ ೧೨ ವರ್ಷಗಳಾಗಿದ್ದು, ಜನಾರ್ಧನ್ ಭಟ್ಟರು ಮತ್ತು ಕುಟುಂಬದವರು ಅವರ ಸ್ವಂತ ಮನೆಯ ರೀತಿಯಲ್ಲಿ ೧೨ ವರ್ಷಗಳಿಂದ ಪೂಜೆಯನ್ನು ನಡೆಸಿಕೊಂಡು ಬಂದಿದ್ದಾರೆ, ಮುಂದಿನ ದಿನಗಳಲ್ಲಿ ಇದೇ ರೀತಿಯಲ್ಲಿ ಪೂಜಾಕಾರ್ಯಗಳು ನೆರೆವೇರಲಿ, ದೇವಾಲಯದ ಮುಂಬಾಗದಲ್ಲಿ ಸಮುದಾಯ ಭವನವಿದ್ದು ಅದಕ್ಕೆ ಬೇಕಾದ ಅಡುಗೆ ಮನೆ ಮತ್ತು ಊಟದ ಮನೆಯನ್ನು ೨ ವರ್ಷದೊಳಗಾಗಿ ನಿರ್ಮಾಣ ಮಾಡಲಾಗುವುದೆಂದು ತಿಳಿಸಿದರು.

ದೇವಸ್ಥಾನದ ಸಮಿತಿ ಅಧ್ಯಕ್ಷ ಎಂ.ಎ.ರವಿಕುಮಾರ್ ಮಾತನಾಡಿ ಕಲ್ಯಾಣ ನಗರದ ಗಣಪತಿ ದೇವಸ್ಥಾನದ ೧೨ನೇ ವರ್ಷದ ವಾರ್ಷಿಕೋತ್ಸವವನ್ನು ಭಕ್ತರ ಸಹಕಾರದಿಂದ ಇಂದು ನೆರೆವೇರಿಸುತ್ತಿದ್ದು, ರುದ್ರಾಭಿಷೇಕ, ಗಣಪತಿ ಹೋಮ, ಕಲಾಹೋಮದ ಜತೆಗೆ ಸಾರ್ವಜನಿಕರಿಗೆ ಅನ್ನ ಸಂತರ್ಪಣೆಯನ್ನು ನೆರೆವೇರಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ವಿನಾಯಕ ಕಲ್ಯಾಣ ನಗರದ ವೆಲ್‌ಫೇರ್ ಟ್ರಸ್ಟ್‌ನ ಉಪಾಧ್ಯಕ್ಷ ಡಿ.ಪಿ.ಕೃಷ್ಣಮೂರ್ತಿ, ಕಾರ್ಯದರ್ಶಿ ಬಿ.ಪಿ.ಮಹೇಂದ್ರಕುಮಾರ್, ಖಜಾಂಚಿ ರಾಮನಾಯ್ಕ, ಸದಸ್ಯರುಗಳಾದ ಕೆ.ಬಿ.ದೇವರಾಜ್, ಗಂಗಾಧರ್ ನಾಯ್ಕ, ರಮೇಶ್ ಪೈ, ದಿನೇಶ್, ಪ್ರಸನ್ನಕುಮಾರ್, ಲಕ್ಷ್ಮಣ್ ನಾಯ್ಕ, ರಂಗೇಗೌಡ, ಓಂಕಾರಸ್ವಾಮಿ, ಶ್ರೀನಿವಾಸ್, ಸೊಮೇಶ್, ಸುರೇಶ್, ಪುಷ್ವವತಮ್ಮಬಸವರಾಜ್, ಮೀನಾಕ್ಷಿನಾರಾಯಣಪ್ಪ, ಗಿರಿಜಾನಾಗರಾಜ್ ನಾಯ್ಕ, ಪಾರ್ವತಮ್ಮರಾಜಪ್ಪ, ಭುವನಗಂಗಾಧರ್, ನಾಗರತ್ನಲೋಕೇಶಪ್ಪ, ಗೀತಓಂಕಾರಮೂರ್ತಿ ನಗರಸಭಾ ಸದಸ್ಯ ಅರುಣ್, ಮತ್ತಿತರರು ಉಪಸ್ಥಿತರಿದ್ದರು.

Peace of mind by worshiping God

About Author

Leave a Reply

Your email address will not be published. Required fields are marked *