September 19, 2024

ಬಿಜೆಪಿ ಸದಸ್ಯತ್ವ ಅಭಿಯಾನವು ಸರ್ವ ವ್ಯಾಪಿ, ಸರ್ವ ಸ್ಪರ್ಷಿಯಾಗಿರಬೇಕು

0
ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ

ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ

ಚಿಕ್ಕಮಗಳೂರು: ಬಿಜೆಪಿ ಸದಸ್ಯತ್ವ ಅಭಿಯಾನವು ಸರ್ವ ವ್ಯಾಪಿ, ಸರ್ವ ಸ್ಪರ್ಷಿಯಾಗಿರಬೇಕು. ಬಡವರು, ಶ್ರೀಮಂತರು, ಎಲ್ಲಾ ಜಾತಿ ಜನಾಂಗದವರನ್ನೂ ಸದಸ್ಯರನ್ನಾಗಿ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸೂಚಿಸಿದರು.

ಅವರು ಶುಕ್ರವಾರ ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಸಂಬಂಧ ಪ್ರಮುಖ ಮುಖಂಡರ ಸಭೆಯನ್ನುದ್ದೇಶಿ ಮಾತನಾಡಿದರು.

ಸದಸ್ಯತ್ವ ಅಭಿಯಾನ ಸಹ ಪಕ್ಷವನ್ನು ಬಲಪಡಿಸಲು ಒಂದು ಅವಕಾಶ. ಈಗ ಸದಸ್ಯರಾದವರು ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೆ ಏರಬಹುದು. ವಿಶೇಷವಾಗಿ ಬಿಜೆಪಿ ಸರ್ಕಾರದ ಫಲಾನುಭವಿಗಳನ್ನು ಸದಸ್ಯರನ್ನಾಗಿ ಮಾಡಿಸಬೇಕು. ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಫಲಾನುಭವಿಗಳಿಗೆ ಮನವರಿಕೆ ಮಾಡಬೇಕು. ಇದರೊಂದಿಗೆ ಊರಿನಲ್ಲಿರುವ ಪ್ರಭಾವಿ ವ್ಯಕ್ತಿಗಳನ್ನು ಸಂಪರ್ಕಿಸಿ ಪಕ್ಷದ ಧ್ಯೇಯೋದ್ದೇಶಗಳನ್ನು ತಿಳಿಸಿ ಸದಸ್ಯರನ್ನಾಗಿ ಮಾಡಬೇಕು ಎಂದರು.

ಪ್ರತಿ ಬೂತ್‌ನ ಕನಿಷ್ಠ ಶೇ.೫೦ ರಷ್ಟು ಮಂದಿಯನ್ನು ಪಕ್ಷದ ಸದಸ್ಯರನ್ನಾಗಿ ಮಾಡಿಸಬೇಕು. ಆನ್‌ಲೈನ್‌ನಲ್ಲಿ ಸದಸ್ಯತ್ವ ಅಭಿಯಾನ ನಡೆಯುತ್ತಿರುವುದರಿಂದ ಯಾರಿಗಾದರೂ ಸಮಸ್ಯೆಗಳು, ಸಂಶಯಗಳು ಇದ್ದಲ್ಲಿ ಜವಾಬ್ದಾರಿ ಹೊತ್ತವರೊಂದಿಗೆ ಪರಸ್ಪರ ಚರ್ಚಿಸಿ ಸರಿಪಡಿಸಿಕೊಳ್ಳಬೇಕು ಎಂದರು.

ಸಮರ್ಪಕವಾಗಿ ಯೋಜನಾಬದ್ಧವಾಗಿ ಸದಸ್ಯತ್ವ ಮಾಡಿಸುವ ಕುರಿತು ಸಂಕಲ್ಪ ಮಾಡಬೇಕು. ಆನ್‌ಲೈನ್‌ನಲ್ಲಿ ಸದಸ್ಯತ್ವ ಯೋಜನೆಯು ತುಂಬಾ ಕರಾರುವಕ್ಕಾಗಿದೆ. ಇದರಲ್ಲಿ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹೆಸರು, ಫೋಟೋ ಎಲ್ಲವನ್ನು ತಾಳೆ ಮಾಡಿ ಸುಳ್ಳು ಮಾಹಿತಿ ನೀಡಿದರೆ ಗೊತ್ತಾಗಿಬಿಡುತ್ತದೆ ಎಂದರು.

ಕಳೆದ ಅವಧಿಯಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರವೇ ಸದಸ್ಯತ್ವ ಅಭಿಯಾನದಲ್ಲಿ ಮೊದಲ ಸ್ಥಾನದಲ್ಲಿತ್ತು. ಈ ಬಾರಿಯೂ ಅದನ್ನು ಉಳಿಸಿಕೊಳ್ಳಬೇಕು. ಬೇರೆ ಪಕ್ಷದವರನ್ನೂ ಮನವೊಲಿಸಿ ಸದಸ್ಯರನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.

ಕನಿಷ್ಠ ನೂರು ಜನರನ್ನು ಬಿಜೆಪಿ ಸದಸ್ಯರನ್ನಾಗಿ ಮಾಡಿಸಿದವರು ಪಕ್ಷದ ಪದಾಧಿಕಾರಿಗಳಾಗಬಹುದು. ನಿಮ್ಮ ಬೂತ್ ಹಾಗೂ ಪಂಚಾಯ್ತಿ ವ್ಯಾಪ್ತಿಯಲ್ಲಿ ಸದಸ್ಯತ್ವವವನ್ನು ಮಾಡಿಸಿ ಸಕ್ರೀಯ ಸದಸ್ಯರಾದರೆ ಮಾತ್ರ ಪದಾಧಿಕಾರಿಗಳಾಗುವ ಅರ್ಹತೆ ಬರುತ್ತದೆ. ಬಿಜೆಪಿ ರಾಷ್ಟ್ರೀಯ ಹಿತಾಸಕ್ತಿ ಉದ್ದೇಶದಿಂದ ರಾಜಕೀಯ ಪಕ್ಷವಾಗಿ ಕೆಲಸ ಮಾಡುತ್ತಿದೆ. ಬಡವರಿಗೆ ಬಲ ಕೊಡಬೇಕು ಎನ್ನುವುದು ಧ್ಯೇಯವಾಗಿದೆ ಎನ್ನುವುದನ್ನು ತಿಳಿಯಪಡಿಸಬೇಕು ಎಂದರು.

ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಗುಣಸಾಗರ ವಿಜಯಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸದಸ್ಯತ್ವ ಅಭಿಯಾನಕ್ಕಾಗಿ ಪ್ರತಿ ಗ್ರಾ.ಪಂ.ಗೆ ಒಬ್ಬರು ಪ್ರಮುಖರನ್ನು ಗುರುತಿಸಲಾಗಿದೆ. ಪಂಚಾಯ್ತಿಯ ಎಲ್ಲಾ ಬೂತ್‌ಗಳನ್ನೂ ಗಮನಿಸುವ ಜವಾಬ್ದಾರಿ ಅವರದ್ದಾಗಿರುತ್ತದೆ ಎಂದರು.

ಮುಂದಿನ ಐದಾರು ದಿನಗಳಲ್ಲಿ ೧೫ ರಿಂದ ೨೦ ಸಾವಿರ ಸದಸ್ಯತ್ವವನ್ನು ಮಾಡಿಸಬೇಕಿದೆ. ಈ ಸಂಬಂಧ ಎಲ್ಲರಿಗೂ ನೂನೆಗಳನ್ನು ನೀಡಲಾಗುವುದು ಅದರಲ್ಲಿ ಸದಸ್ಯತ್ವ ಪಡೆದವರ ವಿವರವನ್ನು ನಮೂದಿಸಿ ಹಿಂತಿರುಗಿಸಬೇಕು. ಪ್ರತಿಯೊಬ್ಬರು ಕನಿಷ್ಠ ೧೦೦ ರಿಂದ ೧೫೦ ಜನರನ್ನು ಸದಸ್ಯರನ್ನಾಗಿ ಮಾಡಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಬೆಳವಾಡಿ ರವೀಂದ್ರ, ಗ್ರಾಮಾಂತರ ಪ್ರಭಾರಿ ಕವೀಶ್, ಉಪಾಧ್ಯಕ್ಷ ಕನಕರಾಜ್ ಅರಸ್, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್, ರಾಜ್ಯ ಕಾರ್ಯದಶಿ ಸೀತಾರಾಮ ಭರಣ್ಯ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಜಸಿಂತಾ ಅನಿಲ್ ಕುಮಾರ್, ಪ್ರಕಾಶ್ ಇತರರು ಭಾಗವಹಿಸಿದ್ದರು.

BJP membership campaign should be all-pervasive and all-pervasive

About Author

Leave a Reply

Your email address will not be published. Required fields are marked *

You may have missed