September 23, 2024

ಸಖರಾಯಪಟ್ಟಣ ಹಿಂದೂ ಮಹಾಗಣಪತಿ ವಿಸರ್ಜನ ಮಹೋತ್ಸವ ಸಂಪನ್ನ

0
ಸಖರಾಯಪಟ್ಟಣ ಹಿಂದೂ ಮಹಾಗಣಪತಿ ವಿಸರ್ಜನ ಮಹೋತ್ಸವ ಸಂಪನ್ನ

ಸಖರಾಯಪಟ್ಟಣ ಹಿಂದೂ ಮಹಾಗಣಪತಿ ವಿಸರ್ಜನ ಮಹೋತ್ಸವ ಸಂಪನ್ನ

ಚಿಕ್ಕಮಗಳೂರು:  ತಾಲ್ಲೂಕಿನ ಸಖರಾಯಪಟ್ಟಣ ಗ್ರಾಮದಲ್ಲಿ ಶ್ರೀ ಹಿಂದೂ ಮಹಾಗಣಪತಿ ಸೇವಾ ಸಮಿತಿ ೧೫ ದಿನಗಳಿಂದ ಆಯೋಜಿಸಿದ್ಧ ಮೂರನೇ ವರ್ಷದ ಸಾರ್ವಜನಿಕ ಗಣೇ ಶೋತ್ಸವವ ಭಾನುವಾರ ಅತ್ಯಂತ ವೈಭವದಿಂದ ಸಂಪನ್ನಗೊಂಡಿತು.

ಹಿಂದೂ ಮಹಾಗಣಪತಿ ಪ್ರತಿಷ್ಟಾಪನ ಅಂಗವಾಗಿ ಗಣಹೋಮ, ವಿವಿಧ ಕಾರ್ಯಕ್ರಮಗಳಾದ ಆರ್ಕೆಸ್ಟ್ರಾ, ಜಿಗ್‌ಜಾಗ್ ಬೈಕ್ ರೇಸ್, ಕಬ್ಬಡಿ ಪಂದ್ಯಾವಳಿ ಸೇರಿದಂತೆ ಆಟೋಟ ಸ್ಪರ್ಧೆಗಳು ನೋಡುಗರ ಮನಸೂರೆಗೊಂಡವು.

ವಿಸರ್ಜನ ಮಹೋತ್ಸವದ ಹಿಂದಿನದಿನ ಸುಮಾರು ೬೦೦ಕ್ಕೂ ಹೆಚ್ಚು ಭಕ್ತರು ಅನ್ನಪ್ರಸಾದ ಸ್ವೀಕರಿ ಸಿದರು. ಅನ್ನ ಪ್ರಸಾದ ಸಮಿತಿ ಪ್ರಮುಖರಾದ ಎಸ್.ಹೆಚ್.ಪುಟ್ಟಸ್ವಾಮಿ, ಮುತ್ತಣ್ಣ, ವಸಂತ್ ಕುಮಾರ್, ವಿನಾಯಕ ನೇತೃತ್ವದಲ್ಲಿ ಗಣಪತಿ ಸಮಿತಿಯ ಸದಸ್ಯರು ಅನ್ನಸಂತರ್ಪಣೆ ಅಚ್ಚುಕಟ್ಟಾಗಿ ನೆರವೇರಿಸಿದರು.

ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಗ್ರಾಮದ ಮುಖ್ಯರಸ್ತೆಗಳು ಕೇಸರಿಮಯದಿಂದ ಕೂಡಿತ್ತು. ಶಿವ, ರಾಮನ ಹಾಗೂ ಆಂಜನೇಯ ಬೃಹತ್ ವಿಗ್ರಹಗಳ ಮೆರವಣಿಗೆ ಇನ್ನ ಷ್ಟು ಕಳೆಕಟ್ಟಿದವು. ಸುಮಾರು ೭೦೦ಕ್ಕೂ ಹೆಚ್ಚು ಜನ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕೆ.ಎಂ.ರಸ್ತೆಯಿಂದ ಮೆರವಣಿಗೆ ಬರುತ್ತಿದ್ದಂತೆ ಅಂಗಡಿ ಮುಂಗಟ್ಟು ದಾರರು ಶ್ರೀಯವರಿಗೆ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.

ಚಲನಚಿತ್ರ ಗೀತೆ ಹಾಗೂ ವಿವಿಧ ವಾದ್ಯಗಳಿಗೆ ಯುವಕರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಸ್ಥಳೀಯ ಗ್ರಾಮಸ್ಥರು ಮೆರವಣಿಗೆಯಲ್ಲಿ ಸಾಗಿದ ಕಲಾತಂಡಗಳಿಗೆ ಹಾಗೂ ಸಾರ್ವಜನಿಕರಿಗೆ ಜ್ಯೂಸ್, ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದರು. ಗ್ರಾಮದ ಸುತ್ತಮುತ್ತಲಿನ ಅನೇಕ ದಾನಿಗಳು ಗಣೇ ಶೋತ್ಸವ ಆಚರಣೆಗೆ ಸಹಕರಿಸಿದರು.

ತದನಂತರ ಹಿಂದೂ ಮಹಾಗಣಪತಿ ಮೆರವಣಿಗೆ ಶ್ರೀ ಶಕುನರಂಗನಾಥ ಸ್ವಾಮಿ ದೇವಾಲಯದ ಮೂಲಕ ಹಾದು ಗ್ರಾಮದ ಸುತ್ತಮುತ್ತಲು ಸಾಗಿದ ವೇಳೆ ನಿವಾಸಿಗಳು ಭಕ್ತಿಪರಾಶರಾದರು. ವಿಗ್ರಹ ಮೂ ರ್ತಿ ಮನೆಗಳ ಸಮೀಪಿಸುತ್ತಿದ್ಧಂತೆ ನಿವಾಸಿಗಳು ಪೂಜೆ ಸಲ್ಲಿಸಿದರು. ನಂತರ ಸುಬ್ರಮಣ್ಯ ದೇವಾಲಯದ ಕಲ್ಯಾಣಿಯಲ್ಲಿ ವಿಸರ್ಜಿಸಲಾಯಿತು.

ಬಳಿಕ ಮಾತನಾಡಿದ ಸಮಿತಿ ಮುಖ್ಯಸ್ಥ ದೀಪು ಯುವಕರ ತಂಡವು ಗಣೇಶೋತ್ಸವ ಸಂಬಂಧ ಹಣ ಸಂಗ್ರಹಿಸಿ ಹಿಂದೂ ಮಹಾಗಣಪತಿ ಸಮಿತಿ ಸ್ಥಾಪಿಸಿ ಪ್ರತಿ ವರ್ಷವು ಆಚರಿಸಲಾಗುತ್ತಿದೆ. ಇದೀಗ ಮೂರನೇ ವರ್ಷ ಪೂರೈಸಿದ ಹಿನ್ನೆಲೆ ವಿವಿಧ ಕಲಾತಂಡಗಳ ಕರೆಸಿ ಅತ್ಯಂತ ಅದ್ದೂರಿಯಿಂದ ಗಣೇಶೋ ತ್ಸವ ಆಚರಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ಸದಸ್ಯರುಗಳಾದ ಅರವಿಂದ್, ಸಂತೋಷ್, ಮಿಥುನ್, ನಿತಿನ್, ವಿಜಯ್, ಗಣೇಶ್, ಸಂಜಯ್, ಇಂದುಕುಮಾರ್, ಮುಖಂಡರುಗಳಾದ ಎಸ್.ಆರ್.ಯೋಗೀ ಂದ್ರ, ಪಾದಮನೆ ದಿನೇಶ್, ನಾಗೇಗೌಡ, ಪ್ರದೀಪ್, ಆನಂದನಾಯ್ಕ್, ದರ್ಶನ್‌ನಾಯ್ಕ್ ಇದ್ದರು.

Sakharayapatna Hindu Mahaganapati Visarjan Mahotsava Sampanna

About Author

Leave a Reply

Your email address will not be published. Required fields are marked *

You may have missed