September 24, 2024

ಸಣ್ಣ ರೈತರಿಗೆ ನೆರವಿಗೆ ಪತ್ತಿನ ಸಹಕಾರ ಸಂಘಗಳ ಪಾತ್ರ ಮುಖ್ಯ

0
ಮುಗುಳುವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ

ಮುಗುಳುವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ

ಚಿಕ್ಕಮಗಳೂರು: ಮಲೆನಾಡು ಭಾಗದ ಸಣ್ಣ ಅತಿಸಣ್ಣ ರೈತರ ಪರವಾಗಿ ಕೆಲಸ ಮಾಡುವಲ್ಲಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಪಾತ್ರ ಅತಿಮುಖ್ಯ ಎಂದು ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕಿ ನಯನ ಮೋಟಮ್ಮ ಹೇಳಿದರು.

ಅವರು ಇಂದು ಮುಗುಳುವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ಈ ಸಹಕಾರಿ ಸಂಘದ ವ್ಯಾಪ್ತಿಯ ರೈತರಿಗೆ ತುರ್ತು ಹಣದ ಅವಶ್ಯಕತೆ ಏರ್ಪಟ್ಟಾಗ ಸಹಕಾರಿ ಬ್ಯಾಂಕ್ ನೆರವಿಗೆ ಬರುತ್ತದೆ. ಆದರೆ ಇದೂವರೆಗೂ ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ ಪ್ರಾರಂಭಿಸಿಲ್ಲದರ ಬಗ್ಗೆ ವಿಷಾಧ ವ್ಯಕ್ತಪಡಿಸಿದರು.

ಆದಾಯವನ್ನು ಕ್ರೂಢೀಕರಿಸಿ ಉಳಿತಾಯ ಮಾಡಿ ರೈತರಿಗೆ ಸಾಲ ನೀಡಬೇಕು, ಈ ನಿಟ್ಟಿನಲ್ಲಿ ನಿಶ್ಚಿತ ಠೇವಣಿ ಸಂಗ್ರಹಿಸಲು ಸದಸ್ಯರು ಹಾಗೂ ನೌಕರ ಸಿಬ್ಬಂದಿ ಶ್ರಮಿಸಬೇಕೆಂದು ಕರೆ ನೀಡಿದರು.

ಈ ಸಹಕಾರಿ ಬ್ಯಾಂಕಿನ ವ್ಯಾಪ್ತಿಗೆ ಮೂರು ಗ್ರಾಮ ಪಂಚಾಯಿತಿಗಳು ಬರಲಿದ್ದು, ಇದನ್ನು ದೊಡ್ಡ ಮಟ್ಟಕ್ಕೆ ಬೆಳೆಯಲು ಎಲ್ಲಾ ಸಹಕಾರಿಗಳ ಶ್ರಮ ಅಗತ್ಯ ಎಂದ ಅವರು, ಹಾಲಿ ಶಾಸಕಿಯಾಗಿ ಈಗ ನೀಡಿರುವ ಅನುದಾನದ ಜೊತೆಗೆ ಮುಂದೆ ಹೆಚ್ಚಿನ ಸಹಕಾರ-ಸಹಾಯ ನೀಡಲು ಬದ್ಧವಾಗಿರುವುದಾಗಿ ಭರವಸೆ ನೀಡಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷ ಎಂ.ಎಸ್ ನಿರಂಜನ್ ಮಾತನಾಡಿ, ಈ ಪತ್ತಿನ ಸಹಕಾರ ಸಂಘಕ್ಕೆ ೨೬ ಹಳ್ಳಿಗಳು ಬರಲಿದ್ದು, ಇನ್ನೂ ೩೬ ಹಳ್ಳಿಗಳನ್ನು ಸೇರ್ಪಡೆಗೆ ಮುಂದಾದರೆ ಆಡಳಿತ ನಡೆಸಲು ಸಾಧ್ಯವಿಲ್ಲ ಆದ ಕಾರಣ ಎಲ್ಲರಿಗೂ ನ್ಯಾಯ ಒದಗಿಸಲು ಆಗುವುದಿಲ್ಲ ಎಂದು ಹೇಳಿದರು.

ಈ ಪತ್ತಿನ ಕೃಷಿ ಅಭಿವೃದ್ಧಿ ಬ್ಯಾಂಕಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಕೋಟಿ ರೂ ಅನುದಾನ ನೀಡಿದರುವುದರಿಂದ ಈ ಭಾಗದ ರೈತರಿಗೆ ಸಾಲ ನೀಡಲು ಸಹಕಾರಿಯಾಗಿದೆ, ಬ್ಯಾಂಕಿನ ನೌಕರ ಸಿಬ್ಬಂದಿ ಹಾಗೂ ಸದಸ್ಯರ ಸಹಕಾರದೊಂದಿಗೆ ಅಭಿವೃದ್ಧಿಯನ್ನು ಸಾಧಿಸಿ ಸಾಧನೆ ಮಾಡಿದ್ದೇವೆಂದರು.

ಸಾರ್ವಜನಿಕ ಸಂಸ್ಥೆಗಳನ್ನು ಸ್ವಂತಕ್ಕೆ ಬಳಕೆ ಮಾಡದೆ ಸಾರ್ವಜನಿಕರ ನೆರವಿಗೆ ಮುಂದಾಗಿ ಶ್ರಮಿಸಬೇಕು, ಬ್ಯಾಂಕಿನ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸಿದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ಡಿ.ಎಸ್ ಸುರೇಶ್ ಅವರನ್ನು ಅಭಿನಂದಿಸಿದರು.

ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಟ್ಟು ೯ ಕೋಟಿ ರೂ ವಹಿವಾಟು ನಡೆಸಲಾಗುತ್ತಿದೆ. ಸದಸ್ಯರು, ರೈತರು ಠೇವಣಿ ಇಡುವ ಮೂಲಕ ಅಭಿವೃದ್ಧಿಗೆ ಸಹಕರಿಸಿ ಎಂದು ಮನವಿ ಮಾಡಿದ ಅವರು, ನಿಮ್ಮ ಹಣ ಹಾನಿಯಾಗದಂತೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಸಹಕಾರ ಕೇಂದ್ರಬ್ಯಾಂಕ್ ಅಧ್ಯಕ್ಷ ಡಿ.ಎಸ್ ಸುರೇಶ್ ಮಾತನಾಡಿ, ಬ್ಯಾಂಕಿನ ನೂತನ ಕಟ್ಟಡಕ್ಕೆ ೮ ಲಕ್ಷ ರೂ ಅನುದಾನವನ್ನು ನೀಡಿದ್ದು, ಇದರಿಂದ ನೂತನ ಕಟ್ಟಡ ನಿರ್ಮಾಣಕ್ಕೆ ಸಹಕಾರಿಯಾಗಿದೆ ಜೊತೆಗೆ ನಬಾರ್ಡ್ ನಿಬಂಧನೆಗಳು ಬದಲಾಗಿದ್ದರಿಂದ ಈ ಬಾರಿ ಕೃಷಿ ಸಾಲ ವಿತರಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ತಾನು ಎಲ್ಲರಿಗಾಗಿ-ಎಲ್ಲರೂ ತನಗಾಗಿ ಎಂಬ ಸಹಕಾರಿ ತತ್ವದೊಂದಿಗೆ ಸಹಕಾರಿ ಕ್ಷೇತ್ರ ಬೆಳೆಯುತ್ತಿದೆ. ಈ ಪತ್ತಿನ ಸಹಕಾರಿ ಸಂಘವನ್ನು ಉತ್ತಮ ಸ್ಥಿತಿಗೆ ತರುವಲ್ಲಿ ಅಧ್ಯಕ್ಷರ ಶ್ರಮ ಅಭಿನಂದನೀಯ ಎಂದರು.

ಸಹಕಾರ ಸಂಘದಲ್ಲಿ ಪೌತಿ ಖಾತೆಗಳ ಸಂಖ್ಯೆ ಹಾಗೇ ಇದ್ದು ಅವುಗಳನ್ನು ಸಂಬಂಧಪಟ್ಟವರ ಹೆಸರಿಗೆ ವರ್ಗಾಯಿಸಿಕೊಂಡು ಖಾತೆ ಮಾಡಿ ಸಹಕಾರ ಸಂಘದಲ್ಲಿ ದೊರೆಯುವ ಸಾಲಸೌಲಭ್ಯಗಳ ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಪತ್ತಿನ ಸಹಕಾರ ಸಂಘ ಪ್ರತೀ ವರ್ಷ ಲಾಭದತ್ತ ಮುನ್ನುಗ್ಗುತ್ತಿದೆ. ಈಗ ಇರುವ ಹಾಗೂ ಹಿಂದಿನ ಆಡಳಿತ ಮಂಡಳಿಯ ಪರಿಶ್ರಮದಿಂದ ದುಂದುವೆಚ್ಚಗಳಿಗೆ ಕಡಿವಾಣ ಹಾಕಿ, ಉತ್ತಮ ಸ್ಥಿತಿಗೆ ತಂದಿದ್ದಾರೆಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಶಿವಣ್ಣಗೌಡ, ನಿರ್ದೇಶಕರುಗಳಾದ ರವಿ ಎಂ.ಡಿ, ಧರ್ಮಯ್ಯ, ಬಲರಾಮ್ ಹೆಚ್.ಎಲ್, ಬಸವರಾಜು ಎಂ.ವಿ, ವಿಜಯ ಕುಮಾರ್. ಎಂ, ರಮೇಶ್ ಎಂ.ಸಿ, ಧರ್ಮೇಗೌಡ ಜೆ.ಕೆ, ಗೀತಾ ಬಿ.ಪಿ, ನಳಿನಾಕ್ಷಿ, ಮುಗುಳವಳ್ಳಿ ದಿನೇಶ್, ಗ್ರಾ.ಪಂ ಅಧ್ಯಕ್ಷೆ ಸವಿತ ಉಮೇಶ್, ಉಪಾಧ್ಯಕ್ಷ ಉಮೇಶ್, ಪಿಡಿಓ ಸುಮ, ಮುಗುಳುವಳ್ಳಿ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಶಿವಕುಮಾರ್, ಮೇಲ್ವಿಚಾರಕ ಪವನ್ ಮತ್ತಿತರರು ಉಪಸ್ಥಿತರಿದ್ದರು.

Inauguration of the new building of Muguluvalli Primary Agricultural Cooperative Society

About Author

Leave a Reply

Your email address will not be published. Required fields are marked *