September 19, 2024

Manage citizens’ work urgently: ನಗರಸಭೆಗೆ ಅರ್ಜಿಸಲ್ಲಿಸಿದ ನಾಗರೀಕರ ಕೆಲಸ ತುರ್ತಾಗಿ ನಿರ್ವಹಿಸಿ

0
ಕಂದಾಯ ರಾಜಸ್ವ ನಿರೀಕ್ಷಕರ ಸಭೆ

ಕಂದಾಯ ರಾಜಸ್ವ ನಿರೀಕ್ಷಕರ ಸಭೆ

ಚಿಕ್ಕಮಗಳೂರು: ನಗರಸಭೆಯಲ್ಲಿ ಇ-ಖಾತೆ, ಸರ್ವೆ ಮತ್ತು ತಿದ್ದುಪಡಿಗಳಿದ್ದರೆ ಅಂತಹ ಖಾತೆದಾರರ ಕೆಲಸಗಳನ್ನು ತುರ್ತಾಗಿ ಮಾಡಿಕೊಡುವಂತೆ ಕಂದಾಯ ಅಧಿಕಾರಿಗಳಿಗೆ ನಗರಸಭಾ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಸೂಚಿಸಿದರು.

ಅವರು ತಮ್ಮ ಕಛೇರಿಯಲ್ಲಿ ನಗರಸಭೆ ಕಂದಾಯ ರಾಜಸ್ವ ನಿರೀಕ್ಷಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ನಗರಸಭೆಗೆ ಅರ್ಜಿಸಲ್ಲಿಸಿ ೪, ೫ ತಿಂಗಳಾದರು ಇ-ಖಾತೆ ಖಾತೆ ಬದಲಾವಣೆ ತಿದ್ದುಪಡಿ ಮುಂತಾದ ಕಾರ್ಯಗಳನ್ನು ವಿನಾಃಕಾರಣ ವಿಳಂಭ ಮಾಡುತ್ತಿದ್ದಾರೆ ಎಂಬ ಸಾರ್ವಜನಿಕರಿಂದ ಬಂದ ದೂರಿನನ್ವಯ ಖಾತೆದಾರರ ಅರ್ಜಿಗಳನ್ನು ತುರ್ತು ವಿಲೇವಾರಿ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿರುವ ನಗರಸಭೆ ಮಳಿಗಳ ಬಾಡಿಗೆಯನ್ನು ಕಟ್ಟದೇ ಇರುವ ಮಾಲೀಕರಿಗೆ ಸೂಚನೆ ಪತ್ರ ನೀಡಿದ್ದು ಜೂ.೧೬ ರಿಂದ ಬಾಡಿಗೆ ವಸೂಲಿ ಮಾಡಿ ನಗರದ ಅಭಿವೃದ್ಧಿಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಚುನಾವಣೆ ಬಂದ ಹಿನ್ನೆಲೆಯಲ್ಲಿ ಈ ಎಲ್ಲಾ ಕಾರ್ಯಗಳು ಸ್ಥಗಿತಗೊಂಡಿದ್ದವು ಅಭಿವೃದಿ ದೃಷ್ಟಿಯಿಂದ ದಿನ ನಿತ್ಯದ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗಲು ತಿಳಿಸಿದರು.

ಮಳಿಗೆಗಳ ಮಾಲೀಕರು ತಕ್ಷಣ ಬಾಡಿಗೆ ಹಣವನ್ನು ಖುದ್ದು ನಗರಸಭೆಗೆ ಹಾಜರಾಗಿ ಪಾವತಿಸುವಂತೆ ಮನವಿ ಮಾಡಿದ ಅವರು ಬಾಡಿಗೆ ಪಾವತಿಸದ ಮಳಿಗೆಗಳನ್ನು ಮುಚ್ಚಿಸಲಾಗುವುದೆಂದು ಎಚ್ಚರಿಸಿದರು. ಯು.ಜಿ.ಡಿ ಮತ್ತು ಅಮೃತ್ ಯೋಜನೆ ಕೆ.ಯು.ಡಬ್ಯೂ.ಎಸ್‌ನಿಂದ ಅರ್ಜಿ ಆಹ್ವಾನಿಸಲಾಗಿದೆ. ಸಾರ್ವಜನಿಕರು ಹಲವಾರು ದೂರುಗಳನ್ನು ಸಲ್ಲಿಸಿದ್ದಾರೆ. ಇನ್ನೂ ೪ ತಿಂಗಳಲ್ಲಿ ಈ ಕಾಮಗಾರಿಗಳನ್ನು ಪೂರ್ಣಗೊಳಿಸುವುದಾಗಿ ತಿಳಿಸಿದರು.

ಈ ಕಾರ್ಯಗಳನ್ನು ಅನುಷ್ಠಾನ ಮಾಡುವಾಗ ರಸ್ತೆಗಳು ಹಾನಿಯಾಗಿವೆ ಎಂದು ನಗರದ ಸಾರ್ವಜನಿಕರು ದೂರು ಸಲ್ಲಿಸಿದ್ದು, ಈ ಬಗ್ಗೆ ಸಂಬಂಧಿಸಿದ ಗುತ್ತಿಗೆದಾರರಿಂದಲೇ ದುರಸ್ಥಿಪಡಿಸುವಂತೆ ಆದೇಶಿಸಲಾಗಿದೆ ಎಂದರು.ಸಭೆಯಲ್ಲಿ ಕಂದಾಯ ಇಲಾಖೆ ರಾಜಸ್ವ ನಿರೀಕ್ಷಿಕ ಶಿವಾನಂದ, ಇಂಜಿನಿಯರ್ ಚಂದನ್, ಮುಖ್ಯ ಲೆಕ್ಕಾಧಿಕಾರಿ ಲತಾಮಣಿ, ರಮೇಶ್‌ನಾಯ್ಡು ಮತ್ತಿತರರಿದ್ದರು.

About Author

Leave a Reply

Your email address will not be published. Required fields are marked *

You may have missed