September 19, 2024

Talent Award: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಪ್ರತಿಭಾ ಪುರಸ್ಕಾರ

0
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸುದ್ದಿಗೋಷ್ಠಿ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಪ್ರತಿಭಾವಂತ ಬಡ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ನೆರವಿಗೆ ಸಹಕಾರ ಆಗಬೇಕೆಂಬ ನಿಟ್ಟಿನಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಬೆಂಗಳೂರುರವರಿಂದ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದು ಜಿಲ್ಲಾಧ್ಯಕ್ಷ ಹೆಚ್.ಎನ್.ಲೋಕೇಶ್ ತಿಳಿಸಿದರು

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಬೆಂಗಳೂರು ರವರಿಂದ ಪ್ರತಿವರ್ಷದಂತೆ ೨೦೨೨-೨೩ನೇ ಸಾಲಿನಲ್ಲಿಯೂ ಎಸ್.ಎಸ್.ಎಲ.ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶೇ ೯೦ ಕ್ಕಿಂತ ಹೆಚ್ಚು ಅಂಕಗಳಿಸಿರುವ ವೀರಶೈವ ಲಿಂಗಾಯತ ಸಮುದಾಯದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಿ ಪುರಸ್ಕರಿಸಲಾಗುವುದು.

ಚಿಕ್ಕಮಗಳೂರು ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳು ಸ್ವ ವಿವರಗಳೊಂದಿಗೆ (ಇತ್ತೀಚಿನ ಒಂದು ಭಾವಚಿತ್ರ, ಧೃಡೀಕರಿಸಿದ ಅಂಕಪಟ್ಟಿ ಮತ್ತಿ ಜಾತಿ ಪ್ರಮಾಣ ಪತ್ರ) ಅರ್ಜಿಯನ್ನು ಮಹಾಸಭೆಯ www.veerashaivamahasabha.in <http://www.veerashaivamahasabha.in> ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಜೂನ್ ೨೫ರ ಒಳಗೆ ಸಲ್ಲಿಸುವುದು, ಆನ್ ಲೈನ್ ಮೂಲಕ ಬಂದ ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುವುದು, ಅಂಚೆ ಕೋರಿಯರ್ ಅಥವಾ ಖುದ್ದಾಗಿ ಬಂದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಎಂದಿದ್ದಾರೆ.

ಹೆಚ್ಚಿನ ಮಾಹಿತಿಗೆ ಜಿಲ್ಲಾಧ್ಯಕ್ಷ ಹೆಚ್.ಎನ್.ಲೋಕೇಶ್ ಮೊ.ನಂ ೯೪೪೮೨೭೨೨೦೧ ಅಥವಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ.ಪಿ ಮೊ.ನಂ ೯೪೪೮೬೫೮೫೯೦ ಇವರನ್ನು ಸಂಪರ್ಕಿಸಬಹುದಾಗಿದೆ. ಈ ಸಂದರ್ಭದಲ್ಲಿ ಕಡೂರು ತಾಲ್ಲೂಕು ಅಧ್ಯಕ್ಷ ಟಿ.ಆರ್. ರೇಣುಕಪ್ಪ, ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ಓಂಕಾರಪ್ಪ.ಬಿ.ಎಸ್, ಜಿಲ್ಲಾ ನಿರ್ದೇಶಕರುಗಳಾದ ಪೂರ್ಣೇಶ್ ಮೂರ್ತಿ, ಎಂ.ಡಿ.ಇಂದ್ರೇಶ್, ಶಿವು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Talent Award

 

About Author

Leave a Reply

Your email address will not be published. Required fields are marked *

You may have missed